Hassanamba Ustava – ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಹಾಸನಾಂಬೆ ದರ್ಶನಕ್ಕೆ ದಿನಾಂಕ ಘೋಷಣೆಯಾಗಿದ್ದು, ಅಕ್ಟೋಬರ್ 24 ರಿಂದ ನವೆಂಬರ್ 3ರ ತನಕ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ಮೊದಲ ಮತ್ತು ಕೊನೆ ದಿನ ಹೊರತುಪಡಿಸಿ ಉಳಿದ 9 ದಿನಗಳಲ್ಲಿ 24 ಗಂಟೆಗಳ ಕಾಲವೂ ಬಾಗಿಲು ತೆರೆದಿರುತ್ತದೆ. ಜಾತ್ರೆಯ ಪೂರ್ವ ಸಿದ್ಧತಾ ಕಾರ್ಯ ಬಹುತೇಕ ಮುಗಿದಿವೆ. ಒಂದು ವರ್ಷದಿಂದ ಜಿಲ್ಲಾ ಖಜಾನೆಯಲ್ಲಿ ಭದ್ರಪಡಿಸಿದ್ದ ಒಡವೆಗಳನ್ನು ಇಂದು ಬಿಗಿ ಪೊಲೀಸ್ ಭದ್ರತೆಯ ನಡುವೆ ದೇವಾಲಯಕ್ಕೆ (Hassanamba Ustava) ತರಲಾಯಿತು.
ಹಾಸನಾಂಬೆಯ ಆಭರಣಗಳನ್ನು ತರುವ ಮುನ್ನಾ ಖಜಾನೆಯ ಅರ್ಚಕರು ಪೂಜೆ ನೆರವೇರಿಸಿದರು. ನಂತರ ಒಡವೆಗಳನ್ನು ಪಲ್ಲಕಿಯ ಮೇಲಿಟ್ಟು ಬೆಳ್ಳಿ ರಥದ ಮೂಲಕ ಮೆರವಣಿಗೆ ಮಾಡಿಕೊಂಡು (Hassanamba Ustava) ದೇವಾಲಯಕ್ಕೆ ತೆಗೆದುಕೊಂಡು ಬರಲಾಯಿತು. ಮೆರವಣಿಗೆಗೂ ಮುನ್ನಾ ಹಾಸನಾಂಬ (Hassanamba Ustava) ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಹಾಗೂ ಉಪವಿಭಾಗಾಧಿಕಾರಿಗಲು, ತಹಸೀಲ್ದಾರ್ ರವರುಗಳ ಸಮ್ಮುಖದಲ್ಲಿ ದೇವಿಯ ಆಭರಣಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಭರಣಗಳ ಮೆರವಣಿಗೆ ವೇಳೆ ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತ ಭದ್ರತೆ ಒದಗಿಸಲಾಯಿತು.
ಇನ್ನೂ ಕಳೆದ ವರ್ಷ (Hassanamba Ustava) ನವೆಂಬರ್ 2 ರಿಂದ ನವೆಂಬರ್ 15 ರವರೆಗೆ ದೇವಾಲಯದ ಬಾಗಿಲು ತೆರೆಯಲಾಗಿತ್ತು. 14 ದಿನಗಳ ಕಾಲ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. (Hassanamba Ustava) ಮೊದಲ ಹಾಗೂ ಕೊನೆಯ ದಿನ ಬಿಟ್ಟು ಉಳಿದ 12 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇನ್ನೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಇನ್ನೂ (Hassanamba Ustava) ಹಾಸನಾಂಬೆಯ ಭಕ್ತರೂ ಸಹ ಕಾತುರದಿಂದ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇವಿಯ ದರ್ಶನ, ಟಿಕೆಟ್ ಖರೀದಿ ಸೇರಿ ಪ್ರಮುಖ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹಾಸನಾಂಬ ಹೆಸರಿನಲ್ಲಿ ಆಪ್ ಒಂದನ್ನು ಸಹ ತೆರೆಯಲಾಗಿದೆ. ಈ (Hassanamba Ustava) ಆಪ್ ಮೂಲಕ ಹಾಸನಾಂಬೆ ಉತ್ಸವದ ಪ್ರತಿಯೊಂದು ಮಾಹಿತಿ ದೊರೆಯಲಿದೆ ಎನ್ನಲಾಗಿದೆ.