ಸಾಮಾನ್ಯವಾಗಿ ಸೆಲೆಬ್ರೆಟಿಗಳ ಬಗ್ಗೆ ಏನಾದರೂ ಸುದ್ದಿ ಕೇಳಿಬಂದರೇ ಅದು ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡುತ್ತದೆ. ಅದು ಸುಳ್ಳಾಗಿರಲಿ ಅಥವಾ ನಿಜವಾಗಿರಲಿ ಕ್ಷಣದಲ್ಲೆ ಎಲ್ಲಾ ಕಡೆ ಹರಿದಾಡುತ್ತಿದೆ. ಇದೀಗ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ಕುರಿತು ಸುದ್ದಿಯೊಂದು ವೈರಲ್ ಆಗಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ನಟಿ ನತಾಶಾ ಜೊತೆಗೆ ವಿಚ್ಚದೇನ ಪಡೆದುಕೊಳ್ಳುವ ಬಗ್ಗೆ ಪೋಸ್ಟ್ ಹಾಕಿದ ಪಾಂಡ್ಯ ಇದೀಗ ಬಾಲಿವುಡ್ ನಟಿಯೊಂದಿಗೆ ಪ್ರೀತಿಗೆ ಬಿದಿದ್ದಾರೆ ಎಂಬ ಗಾಸಿಫ್ ಒಂದು ವೈರಲ್ ಆಗುತ್ತಿದೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ವಿಚ್ಚೇದನದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಇದೀಗ ಹಾರ್ದಿಕ್ ಪಾಂಡ್ಯ (Hardik Pandya) ಬಾಲಿವುಡ್ ಹಾಟ್ ಬ್ಯೂಟಿಯೊಂದಿಗೆ ಲವ್ವಿ ಡವ್ವಿ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ, ಬಾಲಿವುಡ್ ಹಾಟ್ ಬ್ಯೂಟಿ ಅನನ್ಯಾ ಪಾಂಡೆ. ಹೌದು ಬಾಲಿವುಡ್ ಹಾಟ್ ಬ್ಯೂಟಿ ಅನನ್ಯಾ ಪಾಂಡೆ ಜೊತೆಗೆ ಪಾಂಡ್ಯ ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿಯೊಂದು ಭಾರಿ ಚರ್ಚೆಯಾಗುತ್ತಿದೆ. ಆದರೆ ಈ ಕುರಿತು ಇನ್ನೂ ಅಧಿಕೃಯ ಅಪ್ಡೇಟ್ ಮಾತ್ರ ಹೊರಬಂದಿಲ್ಲ. ಆದರೆ ಇತ್ತಿಚಿಗಷ್ಟೆ ನಡೆದ ಅಂಬಾನಿ ಪುತ್ರನ ಮದುವೆಯಲ್ಲಿ ಪಾಂಡ್ಯ ಹಾಗೂ ಅನನ್ಯಾ ಇಬ್ಬರೂ ಜೊತೆಯಾಗಿ ಕುಣಿದ ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಅನೇಕರು ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ.

ಅದರ ಜೊತೆಗೆ ಇಬ್ಬರೂ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಅನನ್ಯಾ ಪಾಂಡೆ ಸಹ ಕೆಲವು ದಿನಗಳ ಹಿಂದೆಯಷ್ಟೆ ಆದಿತ್ಯಾ ರಾಯ್ ಕಪೂರ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದರು. ಜೊತೆಗೆ ಹಾರ್ದಿಕ್ ಪಾಂಡ್ಯ ಸಹ ನತಾಶಾ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಹೊಸ ಪ್ರೇಮ ಕಹಾನಿ ಶುರುವಾಗಿದೆ ಎಂದು ಗಾಸಿಫ್ ಹರಿದಾಡುತ್ತಿದೆ. ಇನ್ನೂ ಈ ಕುರಿತು ಇಬ್ಬರಲ್ಲಿ ಯಾರೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಸುದ್ದಿ ಮಾತ್ರ ಜೋರಾಗಿ ಚರ್ಚೆಯಾಗುತ್ತಿದೆ. ಈ ಕುರಿತು ಯಾರು ಯಾವಾಗ ಅಧಿಕೃತ ಹೇಳಿಕೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.