ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಬಳಿಯ ಕೋಡಿ ಗಂಗಾಧರೇಶ್ವರ ದೇಗುಲ ಆವರಣದಲ್ಲಿ, ಬಲಿಜ ಸಂಘದ ಬಸವನ ಗುಡಿಯ ಕೈವಾರ ತಾತಯ್ಯ ದೇವಾಲಯ, ಬೆಟ್ಟದ ಕೆಳಗಿನ ಪೇಟೆಯ ಸಾಯಿರಾಮ ಬಾಬಾ ಭಜನೆ ಮಂದಿರ ಹಾಗೂ ಆದಿನಾರಾಯಣಸ್ವಾಮಿ ದೇವಾಲಯದಲ್ಲಿ ಗುರುಪೌರ್ಣಮಿ ಯನ್ನು (Guru Purnima) ಭಕ್ತಾದಿಗಳು ಶ್ರದ್ದಾಭಕ್ತಿಯಿಂದ ಆಚರಣೆ ಮಾಡಲಾಯಿತು.
ಸುಂದರವಾದ ಸಾಯಿಬಾಬ ವಿಗ್ರಹ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ…!
(Guru Purnima) ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಮೂರ್ತಿ ಯನ್ನು ವಿವಿಧ ಪಲ್ಲಕ್ಕಿ ಇರಿಸಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ವಿವಿಧ ದೇವಾಲಯಗಳಲ್ಲಿ ಬಾಬಾ ದೇವರಿಗೆ ಬೆಳಿಗ್ಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಸಿದರು. ವಿವಿಧ ಬಜನೆ ತಂಡಗಳು ಬಜನೆ, ವಿಷ್ಣು ಸಹಸ್ರನಾಮ, ಸೇರಿದಂತೆ ದೇವರ ನಾಮಗಳನ್ನು ಮತ್ತು ಸಂಕೀರ್ತನೆಗಳನ್ನು ಹಾಡಿದರು. (Guru Purnima) ಸಾಯಿಬಾಬಾ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆಯನ್ನು ಸಹ ಸಲ್ಲಿಸಿದ್ದರು.
(Guru Purnima) ಗುರು ಪೌರ್ಣಿಮೆ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ನ 19 ನೇ ವರ್ಷದ ಗುರು ಪೌರ್ಣಮಿ (Guru Purnima) ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ದೇವಾಲಯಗಳ ಬಳಿ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ಸಹ ಮಾಡಲಾಯಿತು. ನೂರಾರು ಸಂಖ್ಯೆಯ ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.
ಸುಂದರವಾದ ಸಾಯಿಬಾಬ ವಿಗ್ರಹ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ…!