HomeStateಕುಸಿದ ಗುಡಿಬಂಡೆ ಕೆರೆಯ (Gudibande Lake) ತಡೆಗೋಡೆ, ಅಪಾಯಕ್ಕೆ ಆಹ್ವಾನ, ದುರಂತ ಸಂಭವಿಸುವುದಕ್ಕೂ ಮುನ್ನಾ ಎಚ್ಚೆತ್ತುಕೊಳ್ಳಿ..!

ಕುಸಿದ ಗುಡಿಬಂಡೆ ಕೆರೆಯ (Gudibande Lake) ತಡೆಗೋಡೆ, ಅಪಾಯಕ್ಕೆ ಆಹ್ವಾನ, ದುರಂತ ಸಂಭವಿಸುವುದಕ್ಕೂ ಮುನ್ನಾ ಎಚ್ಚೆತ್ತುಕೊಳ್ಳಿ..!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಅಮಾನಿಬೈರಸಾಗರ ಕೆರೆಯ ಕೋಡಿಯ ಬಳಿ ಕೆರೆಯ ತಡೆಗೋಡೆ (ಕಟ್ಟೆ) ಕುಸಿದು ಬಿದ್ದಿದ್ದು, ವಾಹನ ಸವಾರರು ತಮ್ಮ ಪ್ರಾಣ ಅಂಗೈಯಲ್ಲಿಟ್ಟುಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ದುರಂತ ಸಂಭವಿಸುವುದಕ್ಕೂ ಮುನ್ನಾ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ.

Gudibande Lake bund collapse showing damaged Amani Bairasagara embankment and risky roadway for motorists

Gudibande Lake – ಪುರಾತನ ಕೆರೆ ಕಟ್ಟೆ ದುರಸ್ಥಿ ಕಾರ್ಯ ನಡೆಯಬೇಕು

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಮಾನಿಬೈರ ಸಾಗರ ಕೆರೆಯು ನಿರ್ಮಾಣಗೊಂಡು ವರ್ಷಗಳೇ ಕಳೆದಿದೆ. ಹಿರಿಯರು ಹೇಳುವ ಪ್ರಕಾರ ಕರೆ ಕಟ್ಟೆ ನಿರ್ಮಾಣಗೊಂಡು ಸಹ ವರ್ಷಗಳೇ ಕಳೆದಿದೆ. ಈಗಾಗಲೇ ಹಲವು ಕಡೆ ಕೆರೆಯ ಕಟ್ಟೆ ಕುಸಿದಿದೆ. ಕೆಲವು ತಿಂಗಳುಗಳ ಹಿಂದೆ ಸಹ ಕೆರೆಯ ಮಧ್ಯಭಾಗದ ಕಟ್ಟೆ ಕುಸಿದಿದ್ದು, ಅಪಾಯ ಮಟ್ಟದಲ್ಲಿತ್ತು. ಸಮಸ್ಯೆ ಅಧಿಕಾರಿಗಳಿಗೆ ತಲುಪಿದ ಬಳಿಕ ಸಮಸ್ಯೆಗೆ ತಾತ್ಕಲಿಕ ಪರಿಹಾರ ನೀಡಿದ್ದರು. ಇದೀಗ ಮತ್ತೆ ಕೆರೆ ಕೋಡಿ ಹೋಗುವ ಸ್ಥಳದಲ್ಲಿ ಕಟ್ಟೆ ಕುಸಿದಿದೆ. ಇದರಿಂದ ಅಪಘಾತಗಳು ಅಥವಾ ದೊಡ್ಡ ಅನಾಹುತ ಸಂಭವಿಸಬಹುದಾದ ಸಾಧ್ಯತೆಗಳು ಹೆಚ್ಚಾಗಿದೆ, ಅದರಲ್ಲೂ ಚಿಕ್ಕಬಳ್ಳಾಪುರದಿಂದ ಗುಡಿಬಂಡೆಗೆ ಬರುವ ಮಾರ್ಗ ಸಹ ಇದಾಗಿದ್ದು, ಒಂದು ವೇಳೆ ಕೆರೆಯ ಕಟ್ಟೆ ಕುಸಿದರೇ ಗುಡಿಬಂಡೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Gudibande Lake – ಸ್ಥಳೀಯರ ದೂರು, ಕ್ರಮ ವಹಿಸಲು ಆಗ್ರಹ

ಈ ಕುರಿತು ಕೆಲ ದೂರಿದ ಸ್ಥಳೀಯರು, ಸುಮಾರು ದಿನಗಳಿಂದ ಕೆರೆಯ ಕಟ್ಟೆ ಅಲ್ಲಲ್ಲಿ ಬಿರುಕು ಬಿಡುವುದು, ನೀರು ಪೋಲಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣುತ್ತಿವೆ. ಈ ಹಿಂದೆ ಸಹ ಕೆರೆಯ ಕಟ್ಟೆ ಕುಸಿದು ಬಿದ್ದಾಗ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಬಳಿಕ ಅದನ್ನು ದುರಸ್ಥಿ ಮಾಡಿದ್ದರು. ಇದೀಗ ಮತ್ತೆ ಕೆರೆಯ ಕೋಡಿ ಹರಿಯುವ ಸ್ಥಳದಲ್ಲಿ ಕಟ್ಟೆ ಕುಸಿದಿದೆ. ಇದರಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಒತ್ತಾಯಿಸಿದ್ದಾರೆ.

Gudibande Lake – ಕೆರೆ ಕಟ್ಟೆಯ ಮೇಲೆ ಉರಿಯದ ದೀಪಗಳು

ಇನ್ನೂ ಸಂಜೆ ಸಮಯದಲ್ಲಿ ಕೆರೆಯ ಕಟ್ಟೆಯ ಮೇಲೆ ಅಳವಡಿಸಿರುವಂತಹ ಬೀದಿ ದೀಪಗಳು ಉರಿದು ವರ್ಷಗಳೇ ಕಳೆದಿದೆ. ಕೆರೆಯ ಕಟ್ಟೆಯ ಮೇಲೆ ಬೆಳಕು ಇಲ್ಲದ ಕಾರಣ ಇತ್ತಿಚಿಗೆ ಸಾಕಷ್ಟು ಅಪಘಾತಗಳೂ ಸಹ ನಡೆಯುತ್ತಿವೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದೀಗ ಕೆರೆಯ ಕಟ್ಟೆ ಕುಸಿದ ಕಾರಣದಿಂದ ರಾತ್ರಿ ಸಮಯದಲ್ಲಿ ಮತ್ತಷ್ಟು ಅಪಘಾತಗಳು ಸಂಭವಿಸಬಹುದಾದ ಸಾಧ್ಯತೆಯಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. Read this also : Local News : ವಿಶೇಷ ಚೇತನ ಮಕ್ಕಳಿಗೆ ಬೇಕಿರುವುದು ಅನುಕಂಪವಲ್ಲ, ಆತ್ಮವಿಶ್ವಾಸ:  ಮುನಿಕೃಷ್ಣಪ್ಪ

Gudibande Lake bund collapse showing damaged Amani Bairasagara embankment and risky roadway for motorists

Gudibande Lake – ಅಧಿಕ ಬಾರ ಹೊರುವ ಟಿಪ್ಪರ್‍ ಗಳ ಹಾವಳಿ

ಇನ್ನೂ ಇಲ್ಲಿ ಮತ್ತೊಂದು ಆರೋಪ ಸಹ ಕೇಳಿಬರುತ್ತಿದೆ, ಈ ಕೆರೆಯ ಕಟ್ಟೆಯ ಮೇಲೆ ಅಧಿಕ ಬಾರ ಹೊರುವಂತಹ ಟಿಪ್ಪರ್‍ ಗಳು, ಲಾರಿಗಳು ಸಂಚರಿಸುತ್ತಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಇದರ ಜೊತೆಗೆ ಕೆರೆಗೆ ಹತ್ತಿರದಲ್ಲಿಯೇ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಕೆರೆಯ ಕಟ್ಟೆಗೆ ಮುಂದೆ ಅಪಾಯವಾಗಲಿದೆ. ಒಂದು ವೇಳೆ ಏನಾದರೂ ಕೆರೆಯ ಕಟ್ಟೆ ಹೊಡೆದು ಹೋದರೇ ಸಾಕಷ್ಟು ನಷ್ಟ ಆಗುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular