Guarantee Schemes: ಗ್ಯಾರಂಟಿಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಚಿಂತನೆ, ಅನರ್ಹರನ್ನು ಕೈಬಿಡಲು ತೀರ್ಮಾನ?

Guarantee Schemes – ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸರ್ಕಾರ ಘೋಷಣೆ ಮಾಡಿದಂತಹ ಐದು ಗ್ಯಾರಂಟಿಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಆದರೆ ಈ ಗ್ಯಾರಂಟಿಗಳಿಗೆ ಅನುದಾನ ಒದಗಿಸಲು ಸಹ ಸರ್ಕಾರ ಹರಸಾಹಸ ಪಡುತ್ತಿದೆ. ಈ ನಡುವೆ  ಗ್ಯಾರಂಟಿ ಯೋಜನೆಗಳು (Guarantee Schemes) ಬಡವರಿಗೆ ಮಾತ್ರ ತಲುಪಬೇಕು, ಅನರ್ಹರನ್ನು ಈ ಯೋಜನೆಗಳಿಂದ ಕೈಬಿಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕೆಲಸ ಸಚಿವರ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುವಂತಿದೆ.

ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‍ ಸುದ್ದಿಗಾರರೊಂದಿಗೆ ಮಾತನಾಡುತ್ತಾ, (Guarantee Schemes) ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ತಲುಪಬೇಕು ಎಂಬುದು ಅನೇಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡುವ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ. ಈಗಾಗಲೇ ಗ್ಯಾರಂಟಿ (Guarantee Schemes) ಯೋಜನೆಗಳಿಗಾಗಿ ಬಜೆಟ್ ನಲ್ಲಿ 56 ಸಾವಿರ ಕೋಟಿ ಮೀಸಲಿಡಲಾಗಿದೆ. ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವುದು ಸಾಧ್ಯವಿಲ್ಲ ಎಂದಿದ್ದಾರೆ.  ಜೊತೆಗೆ (Guarantee Schemes) ಗ್ಯಾರಂಟಿಗಳ ಯೋಜನೆಗಳ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯುತ್ತಿರುವುದು ನಿಜ, ಆದರೆ ಶಾಸಕರು, ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡಿರಬಹುದು. ಪಕ್ಷದ ವೇದಿಕೆಯಲ್ಲಾಗಲಿ, ಅಥವಾ ಸರ್ಕಾರದ ಹಂತದಲ್ಲಾಗಲಿ ಚರ್ಚೆಯಾಗಿಲ್ಲ. (Guarantee Schemes) ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಶೇ.13 ರಷ್ಟು ಮತಗಳೂ ಸಹ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ನನ್ನ ಅಭಿಪ್ರಾಯ ಮುಖ್ಯವಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡಿದರೇ ಗೊಂದಲ ಉಂಟಾಗುತ್ತದೆ ಎಂದು ಹೇಳಿದ್ದಾರೆ.

Guarantee Schemes modification

ಇನ್ನೂ ಈ ಸಂಬಂಧ ಸತೀಶ್ ಜಾರಕಿಹೊಳಿ ಸಹ ಈ ಕುರಿತು ಕಾಂಗ್ರೇಸ್ ಉಸ್ತುವಾರಿ ಸುಜೇವಾಲಾ ರವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. (Guarantee Schemes) ಕಾಂಗ್ರೇಸ್ ಗ್ಯಾರಂಟಿಗಳು ಬಡವರಿಗೆ ಮಾತ್ರ ಸೇರಬೇಕು. ಶ್ರೀಮಂತರಿಗೆ ಸಿಗಬಾರದು. ರಾಜ್ಯದ ಅನೇಕ ಕಡೆ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಜನರು ಗ್ಯಾರಂಟಿಗಳು ಬಡವರಿಗೆ ಮಾತ್ರ ಸಿಗಬೇಕು ಎಂದು ಹೇಳುತ್ತಿದ್ದಾರೆ. ಇದೇ ವಿಚಾರವನ್ನು ನಾನು ಸುಜೇವಾಲಾ ರವರ ಗಮನಕ್ಕೆ ತಂದಿದ್ದೇನೆ. (Guarantee Schemes) ನಾನು ಗ್ಯಾರಂಟಿ ಯೋಜನೆಗಳನ್ನು ಕಟ್ ಮಾಡಿ ಅಂತಾ ಹೇಳಿಲ್ಲ. ಜನರ ಅಭಿಪ್ರಾಯವನ್ನು ಹೇಳಿದ್ದೇನೆ ಅಷ್ಟೆ ಎಂದು ಹೇಳಿದ್ದಾರೆ.

ಇನ್ನೂ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೇರಲು (Guarantee Schemes) ಗ್ಯಾರಂಟಿ ಯೋಜನೆಗಳು ಅತಿಮುಖ್ಯ ಪಾತ್ರ ವಹಿಸಿದೆ ಎನ್ನಬಹುದಾಗಿದೆ. ಇದೀಗ ಈ ಯೋಜನೆಗಳಲ್ಲಿ ಮಾರ್ಪಾಡು ತರಲು ರಾಜ್ಯ ಸರ್ಕಾರ ಚಿಂತನೆ ಮಾಡಿದೆ, ಈ ಸಂಬಂಧ ಪಕ್ಷದ ಕೆಲ (Guarantee Schemes) ಸಚಿವರೇ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಅರ್ಹ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ನಿಟ್ಟಿಲ್ಲಿ ಸರ್ಕಾರ ಚಿಂತೆ ಮಾಡಿದೆ ಎಂದು ಹೇಳಲಾಗಿದೆ.  (Guarantee Schemes) ವಾರ್ಷಿಕ 20 ಸಾವಿರ ಕೋಟಿ ರೂ. ಉಳಿತಾಯ ಲೆಕ್ಕಾಚಾರ ಹಾಕಿಕೊಂಡಿರುವುದರಿಂದ ಬಿಪಿಎಲ್‌ ಮಾನದಂಡ ನಿಗದಿಪಡಿಸುವ ಚಿಂತನೆಯೂ ಸಹ ಸರ್ಕಾರದ ಮುಂದಿಟ್ಟುಕೊಂಡಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Next Post

Dr K Sudhakar : ಜನ ಔಷಧಿ ಕೇಂದ್ರಕ್ಕೆ ಅವಕಾಶ ನೀಡದಿರುವುದು ಜನ ವಿರೋಧಿ ನಿಲುವು: ಡಾ.ಕೆ.ಸುಧಾಕರ್

Wed Aug 14 , 2024
ಪಿಎಂ ಜನ ಔಷಧಿ ಕೇಂದ್ರಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಬಂಧ ಮಾಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ಹೇಳಿರುವುದು ಜನ ವಿರೋಧಿ ನಿಲುವಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಸಂಸದ (Dr K Sudhakar) ಡಾ.ಕೆ.ಸುಧಾಕರ್‌ ಆಕ್ರೋಷ ಹೊರಹಾಕಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ (Dr K Sudhakar) ಅವರು, ನಾನು ಸಚಿವನಾಗಿದ್ದಾಗ ರಾಜ್ಯದಲ್ಲಿ 1 ಸಾವಿರಕ್ಕೂ ಅಧಿಕ ಕೇಂದ್ರಗಳನ್ನು ಆರಂಭಿಸಲು ಕ್ರಮ ವಹಿಸಿದ್ದೆ. ಬಿಪಿ, ಶುಗರ್‌ ರೋಗಿಗಳಿರುವ […]
Dr K Sudhakar Press Meet
error: Content is protected !!