Gruhalakshmi Scheme – ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಿಹಿಸುದ್ದಿ! ಯೋಜನೆಯ ಹಣ ಬಿಡುಗಡೆ ವಿಳಂಬದ ಬಗ್ಗೆ ಇದ್ದ ಗೊಂದಲಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಬೀದರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಹಣ ಯಾವುದೇ ಕಾರಣಕ್ಕೂ ತಡವಾಗಿಲ್ಲ ಎಂದು ಖಚಿತಪಡಿಸಿದ್ದಾರೆ.
Gruhalakshmi Scheme – ಗೃಹಲಕ್ಷ್ಮಿ ಹಣ ಜಮೆಯ ಬಗ್ಗೆ ಸಚಿವರ ಸ್ಪಷ್ಟನೆ
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಕೆಲ ತಿಂಗಳುಗಳಿಂದ ಹಣ ಜಮೆ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವೆ ಹೆಬ್ಬಾಳ್ಕರ್, “ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಯಾವುದೇ ವಿಳಂಬವಾಗಿಲ್ಲ. ಮೇ 30, 2025 ರವರೆಗಿನ ಎಲ್ಲಾ ಕಂತುಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಜೂನ್ ತಿಂಗಳ ಹಣವನ್ನು ಸಹ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ನಮ್ಮ ಬಳಿ ಯೋಜನೆಗೆ ಅಗತ್ಯವಾದ ಹಣವಿದೆ, ಮತ್ತು ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ,” ಎಂದು ಭರವಸೆ ನೀಡಿದರು.
Gruhalakshmi Scheme – ಹಿಂದಿನ ವಿಳಂಬಕ್ಕೆ ಕಾರಣವೇನು?
ಈ ಹಿಂದೆ, ಜುಲೈ ಮತ್ತು ಆಗಸ್ಟ್ 2024 ರ ಕಂತುಗಳ ಹಣ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಆದರೆ, ಅಕ್ಟೋಬರ್ 7 ಮತ್ತು 9, 2024 ರಂದು ಈ ಎರಡು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿತ್ತು ಎಂದು ಸಚಿವೆ ಈ ಹಿಂದೆ ತಿಳಿಸಿದ್ದರು. ಇದೀಗ, ಜೂನ್ 2025 ರ ಹಣವೂ ಶೀಘ್ರದಲ್ಲೇ ಜಮೆಯಾಗಲಿದೆ ಎಂದು ಅವರು ದೃಢಪಡಿಸಿದ್ದಾರೆ. ಇದರಿಂದ ಫಲಾನುಭವಿಗಳ ಆತಂಕ ದೂರವಾಗಿದೆ.
Gruhalakshmi Scheme – ಕಾಂಗ್ರೆಸ್‌ನಲ್ಲಿ ಕದನವೇ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
ಕಾಂಗ್ರೆಸ್ ಪಕ್ಷದಲ್ಲಿ ಖುರ್ಚಿ ಕದನ ಅಥವಾ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳ ಬಗ್ಗೆಯೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೀದರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. “ನಮ್ಮಲ್ಲಿ ಯಾವುದೇ ಕದನವೇ ಇಲ್ಲ, ಇನ್ನು ವಿರಾಮ ಎಲ್ಲಿಂದ ಬರುತ್ತೆ,” ಎಂದು ಅವರು ಪ್ರಶ್ನಿಸಿದರು. ಅಲ್ಲದೆ, “ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಯಾರು ಹೇಳಿದ್ದಾರೆ ಅವರಿಗೆ ಕೇಳಿ, ನಮ್ಮಲ್ಲಿ ಯಾವುದೇ ಕ್ರಾಂತಿ ಇಲ್ಲ, ನಮ್ಮಲ್ಲಿ ಬರೀ ಶಾಂತಿ ಮಾತ್ರ,” ಎಂದು ನುಡಿದರು.
Read this also : ಈ 5 ಪ್ರಮುಖ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ! ನಿಮ್ಮ ಜೀವ ಉಳಿಸಿಕೊಳ್ಳಿ..!
Gruhalakshmi Scheme – ಪಕ್ಷದ ಒಗ್ಗಟ್ಟಿಗೆ ಒತ್ತು
ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನು ಒತ್ತಿ ಹೇಳಿದ ಸಚಿವರು, “ನಾವು ಯಾರ ಬೆಂಬಲಿಗರೂ ಅಲ್ಲ, ನಾವು ಕಾಂಗ್ರೆಸ್‌ನ ಬೆಂಬಲಿಗರು. ನಮ್ಮಲ್ಲಿ ಒಬ್ಬರು ಮಾಸ್ ಲೀಡರ್, ಇನ್ನೊಬ್ಬರು ಸಂಘಟನಾ ಚತುರ. ಇವರಿಬ್ಬರೂ ಸೇರಿದರೆ ಕಾಂಗ್ರೆಸ್ ಇದೆ, ಮತ್ತು ನಾವು ಅವರಿಬ್ಬರ ಬೆಂಬಲಿಗರು,” ಎಂದು ಹೇಳುವ ಮೂಲಕ ಪಕ್ಷದ ಒಳಗಿನ ಒಡಕುಗಳ ಬಗ್ಗೆ ಚರ್ಚೆಗೆ ತೆರೆ ಎಳೆದರು.