ಸದ್ಯ ಭಾರತ ದೇಶದಾದ್ಯಂತ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಕೆಲವೊಂದು ಕಡೆ ಬಿಸಿಲಿನ ತಾಪ ತಾಳಲಾರದೆ ಮೃತಪಟ್ಟ ಘಟನೆಗಳು ಸಹ ನಡೆದಿದೆ. ಬೆಳಗ್ಗೆ 9 ರಿಂದಲೇ ಬಿಸಿಲಿನ ಕಾಟ ಶುರುವಾಗುತ್ತಿದೆ. ಫ್ಯಾನ್ ಗಳು, ಕೂಲರ್ ಗಳೂ ಸಹ ಈ ಬಿಸಿಲಿನ ಸಖೆಯಿಂದ ಪಾರು ಮಾಡಲು ಆಗುತ್ತಿಲ್ಲ ಎಂದೇ ಹೇಳಬಹುದು. ಬಿಸಿಲಿನ ಕಾರಣದಿಂದ ಜನರು ಹೊರಗೆ ಬರಲಾಗದೇ, ಮನೆಯಲ್ಲಿ ಇರಲಾಗದೆ ಪರಿತಪಿಸುತ್ತಿದ್ದಾರೆ. ಇದೀಗ ಪಾಂಡಿಚೆರಿಯಲ್ಲಿ ವಾಹನ ಸವಾರರಿಗಾಗಿ ಹೊಸ ಐಡಿಯಾ ಮಾಡಿದ್ದು, ಅಧಿಕಾರಿಗಳು ಮಾಡಿದ ಈ ಪ್ಲಾನ್ ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಅಧಿಕಾರಿಗಳು ಮಾಡಿದ ಪ್ಲಾನ್ ಆದರೂ ಏನು ಎಂಬ ವಿಚಾರಕ್ಕೆ ಬಂದರೇ,
ನಗರ ಪ್ರದೇಶಗಳಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಪ್ರತಿ ಮನೆಯಲ್ಲೂ 2-3 ದ್ವಿಚಕ್ರ ವಾಹನಗಳಿರುತ್ತವೆ. ಯಾವುದೇ ರಸ್ತೆ ನೋಡಿದರೂ ವಾಹನಗಳಿಂದ ತುಂಬಿ ತುಳುಕುತ್ತಿವೆ. ಇದರಿಂದ ನಿತ್ಯ ನಗರಗಳಲ್ಲಿ ಸಂಚಾರ ದಟ್ಟಣೆ ತಪ್ಪುತ್ತಿಲ್ಲ. ಜೊತೆಗೆ ಸಿಗ್ನಲ್ ಬಿದ್ದರೇ ವಾಹನಗಳು ರಸ್ತೆಯಲ್ಲಿ ಕಾದು ನಿಲ್ಲಬೇಕಾಗುತ್ತದೆ. ಆದರೆ ಸದ್ಯ ಇರುವಂತಹ ಬಿಸಿಲಿನಲ್ಲಿ 5 ನಿಮಿಷ ಕೂಡ ನಿಲ್ಲೋಕೆ ಆಗೊಲ್ಲ. ದೇಶದ ಅನೇಕ ಕಡೆ ಸರಾಸರಿ ತಾಪಮಾನ 38-40 ಡಿಗ್ರಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನಿಂದ ವಾಹನ ಸವಾರರ ಪರಿಸ್ಥಿತಿ ಸಹ ತೀವ್ರ ಹದಗೆಟ್ಟಿದೆ.
Great work done by Pondicherry Public Works Department. Courtesy WhatsApp Forward pic.twitter.com/jqyNGGhEWq
— B Padmanaban (padmanaban@fortuneinvestment.in) (@padhucfp) May 1, 2024
ವಾಹನ ಸವಾರರು ಮೇಲಿನ ಬಿಸಿಲಿನ ತಾಪ, ಕೆಳಗಿನ ರಸ್ತೆಯ ಸೆಖೆ, ಬದಿಯಿಂದ ವಾಹನಗಳ ತಾಪಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಸಿಗ್ನಲ್ ನಲ್ಲಿ ಒಂದು ನಿಮಿಷ ಸಹ ನಿಲ್ಲುವುದು ತುಂಬಾ ನರಕ ಅನುಭವಿಸುವಂತಾಗುತ್ತದೆ. ಈ ಸಮಸ್ಯೆಯನ್ನು ಅರಿತು ಪುದುಚೇರಿ ಸರ್ಕಾರ ಉತ್ತಮ ಪರಿಹಾರ ಕಂಡುಕೊಂಡಿದೆ. ಪುದುಚೇರಿಯಲ್ಲಿ ಟ್ರಾಫಿಕ್ ಸಿಗ್ನಲ್ ಗಳಿರುವ ನಾಲ್ಕು ಕಡೆ ಕೊಂಚ ದೂರದ ವರೆಗೆ ಹಸಿರು ಮ್ಯಾಟ್ ಕಟ್ಟಲಾಗುತ್ತಿದೆ. ಇದರಿಂದ ನೇರವಾಗಿ ಸೂರ್ಯನ ಬೆಳಕು ಸವಾರರ ಮೇಲೆ ಬೀಳದಂತೆ ಈ ಹಸಿರು ಬಟ್ಟೆ ತಡೆಯುತ್ತದೆ. ಇದರಿಂದ ಗ್ರೀನ್ ಸಿಗ್ನಲ್ ಬೀಳುವ ತನಕ ವಾಹನ ಸವಾರರು ಕೊಂಚ ತಂಪಿನ ವಾತಾವರಣ ನಿರ್ಮಾಣ ಮಾಡುವಂತೆ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಟ್ರಾಫಿಕ್ ಸಿಗ್ನಲ್ ಗಳಲ್ಲಿ ಪುದುಚೇರಿಯ PWD ಇಲಾಖೆಯ ಅಧಿಕಾರಿಗಳು ಮಾಡಿದ ಈ ಪ್ಲಾನ್ ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತದೆ. ಬಿಸಿಲಿನ ತಾಪ ಹೆಚ್ಚಾಗಿರುವ ಕಡೆ ಈ ರೀತಿಯ ಪ್ಲಾನ್ ಮಾಡಿದರೇ ಉತ್ತಮ ಎಂದು ವಾಹನ ಸವಾರರು ಅಭಿಪ್ರಾಯ ಪಡುತ್ತಿದ್ದಾರೆ.