Tuesday, July 15, 2025
HomeEntertainment40ರ ವಯಸ್ಸಿನಲ್ಲಿ ಮದುವೆಯಾಗಲಿದ್ದಾರಂತೆ ಟಾಲಿವುಡ್ ನಟಿ ಸದಾ, ವರ ಯಾರು ಗೊತ್ತಾ?

40ರ ವಯಸ್ಸಿನಲ್ಲಿ ಮದುವೆಯಾಗಲಿದ್ದಾರಂತೆ ಟಾಲಿವುಡ್ ನಟಿ ಸದಾ, ವರ ಯಾರು ಗೊತ್ತಾ?

ಬಹುಬೇಡಿಕೆ ನಟಿಯಾಗಿದ್ದ ಸದಾ ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ 2002 ರಲ್ಲಿ ತೆರೆಕಂಡ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಬಳಿಕ ಅನೇಕ ಸಿನೆಮಾಗಳಲ್ಲಿ ನಟಿಸಿದಂತಹ ಸದಾ ಇದೀಗ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ಸದಾ ಮದುವೆಯ ಬಗ್ಗೆ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಸತ್ಯಾ ಅಥವಾ ಸುಳ್ಳಾ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ರೂಮರ್‍ ಮಾತ್ರ ಭಾರಿ ವೈರಲ್ ಆಗುತ್ತಿದೆ.

Sadha marriage rumor 1

ಸಿನಿರಂಗದ ಅನೇಕ ನಟಿಯರು 35 ವರ್ಷ ವಯಸ್ಸು ಆಗುತ್ತಿದ್ದಂತೆ ಮದುವೆಯಾಗಿ ಸೆಟಲ್ ಆಗುತ್ತಿದ್ದಾರೆ. ಕೆಲವು ನಟಿಯರು ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವಾಗುತ್ತಿದ್ದಾರೆ. ಮತ್ತೆ ಕೆಲವರು ಸಿನೆಮಾಗಳಲ್ಲಿ ಮುಂದುವರೆಯುತ್ತಿರುತ್ತಾರೆ. ಆದರೆ ನಟಿ ಸದಾ ಮಾತ್ರ 40 ವರ್ಷ ದಾಟಿದರೂ ಸಹ ಮದುವೆಯಾಗಿಲ್ಲ. ಅಂತಹ ಅನೇಕ ನಟಿಯರು ಸಿನಿರಂಗದಲ್ಲಿ ಇನ್ನೂ ಮದುವೆಯಾಗದೇ ಇದ್ದಾರೆ. ಆದರೆ ಇದೀಗ ಸದಾ ಮದುವೆಗೆ ಸಿದ್ದವಾಗಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಜಯಂ ಸಿನೆಮಾದ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಂತಹ ನಟಿ ಸದಾ ತೆಲುಗು ಹಾಗೂ ತಮಿಳಿನಲ್ಲಿ ಅನೇಕ ಸಿನೆಮಾಗಳನ್ನು ಮಾಡಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಹೋಮ್ಲಿ ಬ್ಯೂಟಿಯಾಗಿ ಖ್ಯಾತಿ ಪಡೆದುಕೊಂಡ ಸದಾ ಸೌಂದರ್ಯ ಹಾಗೂ ನಟನೆಯೊಂದಿಗೆ ಸಿನಿರಸಿಕರನ್ನು ರಂಜಿಸಿದ್ದರು.

ಸಿನಿರಂಗದ ಆರಂಭದಿಂದಲೂ ಆಕೆ ಹೋಮ್ಲಿ ಬ್ಯೂಟಿಯಾಗಿ ಲವ್ ಸ್ಟೋರಿ ಸಿನೆಮಾಗಳಲ್ಲಿ ನಟಿಸಿದ್ದರು. ಸದ್ಯ ಸಿನೆಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದು, ಕಿರುತೆರೆಯ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸದಾ ಮದುವೆಯ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಹಿಂದೆ ನಟಿ ಸದಾ ಓರ್ವ ಹಿರೋ ನನ್ನು ಪ್ರೀತಿಸುತ್ತಿದ್ದರಂತೆ. ಕೆಲವೊಂದು ಕಾರಣಗಳಿಂದ ಇಬ್ಬರ ನಡುವೆ ಬ್ರೇಕಪ್ ಆಯ್ತು ಎಂಬ ರೂಮರ್‍ ಗಳೂ ಸಹ ಕೇಳಿಬಂದವು. ಈ ಬ್ರೇಕಪ್ ಕಾರಣದಿಂದ ಆಕೆ ಇಂದಿಗೂ ಮದುವೆಯಾಗದೇ ಇದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಎಂದೂ ಸದಾ ಹೇಳಿಕೊಂಡಿಲ್ಲ. ಇದೀಗ ಸದಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸೌತ್ ಸಿನಿವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

Sadha marriage rumor 0

ಸದ್ಯ ಹರಿದಾಡುತ್ತಿರುವ ಸುದ್ದಿಯಂತೆ ನಟಿ ಸದಾ ತಮಿಳುನಾಡು ಮೂಲದ ಬಿಗ್ ಶಾಟ್ ಉದ್ಯಮಿಯೊಬ್ಬರ ಜೊತೆ ಮದುವೆಯಾಗಲಿದ್ದಾರಂತೆ. ಸದಾ ಈಗಲೂ ತಮ್ಮ ಕುಟುಂಬಸ್ಥರಿಗಾಗಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರಂತೆ. ಆದರೆ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಅನೌನ್ಸ್ ಮೆಂಟ್ ಬರಲಿಲ್ಲ. ಶೀಘ್ರದಲ್ಲೇ ಈ ಕುರಿತು ಸದಾ ಸ್ವತಃ ಸುದ್ದಿ ತಿಳಿಸಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಈ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ಅನೇಕರು ಇದೊಂದು ಸುಳ್ಳು ಸುದ್ದಿ ಎಂದು ತಳ್ಳಿಹಾಕುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular