Viral – ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಈ ರೀಲ್ಸ್ ಹುಚ್ಚು ಹಿಡಿದಿದೆ. ಕೆಲವರು ಪ್ರತಿ ದಿನ ಇದೇ ಕೆಲಸದಲ್ಲಿ ನಿರತರಾಗಿರುತ್ತಾರೆ. ಹೆಚ್ಚಾಗಿ ವ್ಯೂಸ್, ಲೈಕ್ಸ್‌ಗಾಗಿ ರೀಲ್ಸ್ ಮಾಡಿಕೊಂಡು ಖುಷಿ ಪಡುತ್ತಾರೆ. ಆದರೆ, ಇನ್ನು ಕೆಲವು ಜನರು ಮಾಡುವ ಈ ಹುಚ್ಚು ರೀಲ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತವೆ. ಇಂತಹ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Viral – ಎಮ್ಮೆ ಮೇಲೆ ನಿಂತು ಯುವತಿ ಡ್ಯಾನ್ಸ್!
ವಿಡಿಯೋದಲ್ಲಿ ಕಾಣುವಂತೆ, ಒಬ್ಬ ಮಹಿಳೆ ಹೇಗಾದರೂ ವೈರಲ್ ಆಗಲೇಬೇಕು ಎಂಬ ಉದ್ದೇಶದಿಂದ ಎಮ್ಮೆ ಮೇಲೆ ನಿಂತು ಡ್ಯಾನ್ಸ್ ಮಾಡಲು ನಿರ್ಧರಿಸಿದ್ದಾಳೆ. ರೀಲ್ಸ್ ಮಾಡುವ ಮೊದಲು ಎಮ್ಮೆಯನ್ನು ಮನೆಯ ಹೊರಗೆ ಕಟ್ಟಿ, ಇಬ್ಬರು ಜನರು ಎಮ್ಮೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಹಿಡಿದುಕೊಂಡಿದ್ದಾರೆ. ನಂತರ ಆ ಮಹಿಳೆ ಎಮ್ಮೆಯ ಮೇಲೆ ಹತ್ತಿ ನಿಂತು ಡ್ಯಾನ್ಸ್ ಮಾಡಿದ್ದಾಳೆ. Read this also : ರೀಲ್ಸ್‌ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಯುವತಿ, ವೀಕ್ಷಣೆಗಳಿಗಾಗಿ ಸೀರೆಗೆ ಬೆಂಕಿ ಹಚ್ಚಿಕೊಂಡ ಮಹಿಳೆ…!
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Viral – ಎಮ್ಮೆಯ ಮೇಲೆ ಡ್ಯಾನ್ಸ್, ನೆಟ್ಟಿಗರ ಆಕ್ರೋಶ
ಆ ಮಹಿಳೆ ಎಮ್ಮೆಯ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾಗ, ಪಕ್ಕದಲ್ಲಿದ್ದವರು ಕೂಡಾ ಖುಷಿಯಿಂದ ಡ್ಯಾನ್ಸ್ ಮಾಡಲು ಶುರು ಮಾಡುತ್ತಾರೆ. ಈ ರೀತಿ ಎಮ್ಮೆಯ ಮೇಲೆ ನಿಂತು ಡ್ಯಾನ್ಸ್ ಮಾಡುವಾಗ ಎಮ್ಮೆ ಅತ್ತಿತ್ತ ಓಡಿದ್ದರೆ ಅಪಾಯ ಸಂಭವಿಸುತ್ತಿತ್ತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ರೀಲ್ಸ್ ಹುಚ್ಚು ಮಿತಿ ಮೀರಿದೆ, ಪ್ರಾಣಿಗಳ ಮೇಲೆ ಈ ರೀತಿ ಕ್ರೌರ್ಯ ತೋರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.