Cancer – ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಗುಂಡಿಕ್ಕಿ ಕೊಂದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಕುಲದೀಪ್ ತ್ಯಾಗಿ ಎಂದು ಗುರುತಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಹಣವಿಲ್ಲದ ಕಾರಣ, ಕುಟುಂಬಕ್ಕೆ ಹೊರೆಯಾಗಲು ಇಷ್ಟವಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಕುಲದೀಪ್ ತ್ಯಾಗಿ ಅವರು ಬರೆದಿಟ್ಟಿರುವ ಆತ್ಮಹತ್ಯೆ ಪತ್ರದಲ್ಲಿ ತಮಗೆ ಕ್ಯಾನ್ಸರ್ ಇರುವುದಾಗಿಯೂ, ಅದರ ಚಿಕಿತ್ಸೆಗೆ ಸಾಕಷ್ಟು ಹಣವಿಲ್ಲದ ಕಾರಣ ತೀವ್ರ ನೊಂದಿರುವುದಾಗಿಯೂ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಅನಾರೋಗ್ಯದ ವಿಷಯವು ಕುಟುಂಬಕ್ಕೆ ತಿಳಿದಿಲ್ಲ ಮತ್ತು ಚಿಕಿತ್ಸೆಯ ಖರ್ಚಿನಿಂದ ಅವರಿಗೆ ಹೊರೆಯಾಗಲು ಇಷ್ಟವಿಲ್ಲದ ಕಾರಣ ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Cancer – ಘಟನೆಯ ವಿವರ
ಪೊಲೀಸರ ಮಾಹಿತಿಯ ಪ್ರಕಾರ, ಮೀರತ್‌ನ ನಿವಾಸಿಯಾಗಿದ್ದ ಕುಲದೀಪ್ ತ್ಯಾಗಿ, ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮೊದಲು ಪತ್ನಿ ನಿಶು ತ್ಯಾಗಿಗೆ ಗುಂಡು ಹಾರಿಸಿ, ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾನೆ. ಘಟನಾ ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವೊಂದನ್ನು ಪತ್ತೆ ಮಾಡಿದ್ದಾರೆ. ಈ ಪತ್ರದಲ್ಲಿ, ಕುಲದೀಪ್ ತನಗೆ ಕ್ಯಾನ್ಸರ್ ಇದ್ದು, ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ, ಕುಟುಂಬಕ್ಕೆ ತನ್ನ ಸ್ಥಿತಿಯ ಬಗ್ಗೆ ತಿಳಿಸದಿರುವುದಾಗಿ ಬರೆದಿದ್ದಾನೆ.
Cancer – ಡೆತ್ ನೋಟ್ ನಲ್ಲಿ ಏನಿದೆ?
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಕುಲದೀಪ್, ತನ್ನ ಪತ್ರದಲ್ಲಿ, “ನಾನು ಮತ್ತು ನನ್ನ ಪತ್ನಿ ಜೀವನಪರ್ಯಂತ ಒಟ್ಟಿಗೆ ಇರಬೇಕೆಂದು ಪ್ರತಿಜ್ಞೆ ಮಾಡಿದ್ದೇವೆ. ಹೀಗಾಗಿ, ಆಕೆಯನ್ನು ಮೊದಲು ಕೊಂದು, ನಂತರ ನನ್ನ ಜೀವನವನ್ನು ಕೊನೆಗೊಳಿಸಿದೆ,” ಎಂದು ಉಲ್ಲೇಖಿಸಿದ್ದಾನೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಆತ, ಚಿಕಿತ್ಸೆಯ ಆರ್ಥಿಕ ಒತ್ತಡವನ್ನು ಸಹಿಸಲಾಗದೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾನೆ ಎಂದು ನಂದಗ್ರಾಮ್ ಎಸಿಪಿ ಪೂನಂ ಮಿಶ್ರಾ ತಿಳಿಸಿದ್ದಾರೆ.
Cancer – ಪೊಲೀಸರ ತನಿಖೆ
ಕುಲದೀಪ್ ಅವರ ವೃದ್ಧ ತಂದೆ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಲಭ್ಯವಿರುವ ಆತ್ಮಹತ್ಯೆ ಪತ್ರದ ಆಧಾರದ ಮೇಲೆ ಇದು ಕೊಲೆ ಮತ್ತು ನಂತರದ ಆತ್ಮಹತ್ಯೆ ಪ್ರಕರಣ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
Read this also : ಡೆತ್‌ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ, ಕುಟುಂಬಸ್ಥರಿಂದ ಗಂಭೀರ ಆರೋಪ?
Cancer – ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ – ಹಾಸನದಲ್ಲಿ ದುರಂತ
ಕರ್ನಾಟಕದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಣದಹಳ್ಳಿ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಹಳೆಪಾಳ್ಯ ಗ್ರಾಮದ ರಕ್ಷಿತಾ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ರಕ್ಷಿತಾ ಅವರು ಅದೇ ಗ್ರಾಮದ ಪುನೀತ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು.
ಆದರೆ ವಿವಾಹದ ನಂತರ ಪತಿ ಮನೆಯವರು ವರದಕ್ಷಿಣೆ ತರುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ನಿರಂತರ ಕಿರುಕುಳದಿಂದ ಮನನೊಂದಿದ್ದ ರಕ್ಷಿತಾ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.