Gadag – ಗದಗ ಜಿಲ್ಲೆಯ ಬೆಟಗೇರಿ ಶರಣ ಬಸವೇಶ್ವರ ನಗರದಲ್ಲಿ ದಾರುಣ ಘಟನೆಯೊಂದು ನಡೆದಿದೆ. ನವವಿವಾಹಿತೆಯೊಬ್ಬಳು ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಪಟ್ಟ ಮಹಿಳೆ ಪೂಜಾ ಅಮರೇಶ ಅಯ್ಯನಗೌಡರ್ (27). ಕೇವಲ 4 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪೂಜಾ, ಅತ್ತೆ, ಮಾವ ಹಾಗೂ ಬಾವನ ಕಿರುಕುಳದಿಂದ ಬೇಸತ್ತು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
Gadag – ಕಿರುಕುಳದ ಆರೋಪ
ಪೂಜಾ ಅವರ ಕುಟುಂಬಸ್ಥರ ಪ್ರಕಾರ, ಆಕೆಯ ಅತ್ತೆ ಶಶಿಕಲಾ, ಮಾವ ನಿತ್ಯ ಹಾಗೂ ಬಾವ ವೀರನಗೌಡ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಪೂಜಾ ಸ್ವಲ್ಪ ಕಪ್ಪಗಿದ್ದ (Gadag) ಕಾರಣಕ್ಕೆ ಅತ್ತೆ ಆಕೆಯನ್ನು ಅಪಹಾಸ್ಯ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರ ಜೊತೆಗೆ, ಅತ್ತೆ, ಮಾವ ಮತ್ತು ಬಾವ ಸೇರಿಕೊಂಡು ಆಕೆಯನ್ನು ನೇಣು ಹಾಕಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಕುಟುಂಬಸ್ಥರು ಬಾವ ವೀರನಗೌಡನಿಗೆ ಥಳಿಸಿದ ಘಟನೆಯೂ ನಡೆದಿದೆ. ಸ್ಥಳದಲ್ಲಿ ಪೂಜಾ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Gadag – ಪತಿ ಚೆನ್ನೈಗೆ ಪ್ರಯಾಣ
ಪೂಜಾ ಅವರ ಪತಿ ಅಮರೇಶ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸೋಮವಾರವಷ್ಟೇ ಕೆಲಸದ ನಿಮಿತ್ತ ಚೆನ್ನೈಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಪೂಜಾ ಈ ದುರ್ಘಟನೆಗೆ ಒಳಗಾಗಿದ್ದಾರೆ. ಘಟನೆಯ ಕುರಿತು ಮಾಹಿತಿ ತಿಳಿದ (Gadag) ಬೆಟಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
Kerala : ಕಂದಕಕ್ಕೆ ಉರುಳಿದ ಬಸ್ – ಬಾಲಕಿ ದುರ್ಮರಣ, ಹಲವರಿಗೆ ಗಾಯ
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮವಾಗಿ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಎರ್ನಾಕುಲಂ ಜಿಲ್ಲೆಯ ನೇರ್ಯಮಂಗಲಂ ಸಮೀಪದ ಮಣಿಯಾಂಪಾರದಲ್ಲಿ ನಡೆದಿದೆ. ಇಡುಕ್ಕಿ ಜಿಲ್ಲೆಯ ಕೀರಿತೋಡ್ ಮೂಲದ ಅನಿಂಟಾ ಬೆನ್ನಿ ಮೃತಪಟ್ಟ ಬಾಲಕಿ. ಈ ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ ಕಟ್ಟಪ್ಪನದಿಂದ ಎರ್ನಾಕುಲಂಗೆ ಹೊರಟಿದ್ದ ಕೇರಳ ಸಾರಿಗೆ ಇಲಾಖೆಗೆ ಸೇರಿದ ನಿಗದಿತ ನಿಲುಗಡೆಯ ಬಸ್ ರಸ್ತೆ ಪಕ್ಕದ ಸುಮಾರು 10 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್ ನಿಯಂತ್ರಣ ತಪ್ಪಿ ಉರುಳಿದಾಗ ಹೊರಗೆ ಎಸೆಯಲ್ಪಟ್ಟ ಬಾಲಕಿ ಬಸ್ಸಿನಡಿ ಸಿಲುಕಿಕೊಂಡ ಪರಿಣಾಮವಾಗಿ ಸಾವನ್ನಪ್ಪಿದ್ದಾಳೆ. ಕೂಡಲೇ ಕ್ರೇನ್ ಸಹಾಯದಿಂದ ಬಸ್ಸನ್ನು ಮೇಲಕ್ಕೆತ್ತಿ ಬಾಲಕಿ ಅನಿಂಟಾ ಬೆನ್ನಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಕೊನೆಯುಸಿರೆಳೆದಿದ್ದಾಳೆ. ಬಸ್ಸಿನಲ್ಲಿ ಸಿಲುಕಿದ್ದ ಇತರ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
Read this also : Crime : ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಎ.ಎಸ್.ಐ ಪುತ್ರಿ ಆತ್ಮಹತ್ಯೆ, ಬೆಂಗಳೂರಿನಲ್ಲಿ ಕೇರಳ ವಿದ್ಯಾರ್ಥಿನಿ ಸಹ ಆತ್ಮಹತ್ಯೆಗೆ ಶರಣು…..!
ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್ಸಿನಲ್ಲಿ ಸಾಕಷ್ಟು ಪ್ರಯಾಣಿಕರಿದ್ದರು. ನೇರ್ಯಮಂಗಲಂನಿಂದ ಇಡುಕ್ಕಿಗೆ ಹೋಗುವ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿಯ ತಡೆಗೋಡೆಗೆ (ಕ್ರ್ಯಾಶ್ ಬ್ಯಾರಿಯರ್) ಡಿಕ್ಕಿ ಹೊಡೆದ ನಂತರ ಬಸ್ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆಯಿಂದಾಗಿ ಆ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.