Funny Video – ಬೈಕ್ ಸವಾರರು, ಅದರಲ್ಲೂ ಯುವಕರು ತಮ್ಮ ಗರ್ಲ್‌ಫ್ರೆಂಡ್ ಅಥವಾ ಪತ್ನಿಯೊಂದಿಗೆ ಬೈಕ್‌ನಲ್ಲಿ ಹೋಗುವಾಗ ತುಂಬಾನೇ ಜೋಶ್‌ನಲ್ಲಿರುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅದು ಉದ್ದೇಶಪೂರ್ವಕವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ, ಆದರೆ ನಡೆದ ಘಟನೆ ಮಾತ್ರ ನೆಟ್ಟಿಗರಿಗೆ ನಗು ತರಿಸುತ್ತಿದೆ. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ (Funny Video) ಆಗುತ್ತಿದೆ.
ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ (Funny Video) ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಆಸಕ್ತಿದಾಯಕವಾಗಿದ್ದರೆ, ಇನ್ನು ಕೆಲವು ಮಜವಾಗಿ ನಗು ತರಿಸುತ್ತವೆ. ಅಂತಹ ವಿಡಿಯೋಗಳ ಪಟ್ಟಿಗೆ ಇದೀಗ ಈ ಹಾಸ್ಯಮಯ ವಿಡಿಯೋ ಸೇರಿಕೊಂಡಿದೆ.
Funny Video – ಪತ್ನಿಯನ್ನೇ ಮರೆತು ಮುಂದೆ ಸಾಗಿದ ಪತಿರಾಯ: ನಗು ತರಿಸಿದ ಘಟನೆ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಬ್ಬ ಪತಿಯ ಕಾರ್ಯ ನೆಟ್ಟಿಗರಿಗೆ ನಗು ತರಿಸಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಕುಟುಂಬದೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾನೆ. ತನ್ನ ಪತ್ನಿ ಹಿಂಭಾಗದಲ್ಲಿ ಕುಳಿತಿದ್ದರೆ, ಮಗುವನ್ನು ಮಧ್ಯದಲ್ಲಿ ಕುಳ್ಳಿರಿಸಿಕೊಂಡು ಬೈಕ್ ಓಡಿಸುತ್ತಿದ್ದಾನೆ. ಇದೇ ವೇಳೆ ಒಂದು ಅನಿರೀಕ್ಷಿತ ಘಟನೆ ನಡೆಯುತ್ತದೆ. ಎದುರಿನಿಂದ ಟ್ರಕ್ ಒಂದು ಬರುತ್ತಿದ್ದಂತೆ ಬೈಕ್ ನಿಯಂತ್ರಣ ತಪ್ಪಿ ಬಾಗುತ್ತದೆ. ಇದರಿಂದ ಬೈಕ್‌ನ ಹಿಂಭಾಗದಲ್ಲಿ ಕುಳಿತಿದ್ದ ಮಹಿಳೆ, ತನ್ನ ಅರಿವಿಲ್ಲದೆಯೇ ಕೆಳಗೆ ಜಾರಿಬೀಳುತ್ತಾಳೆ.
Read this also : ಲೋ ಅಣ್ಣಾ ಅದು ಮಾರುತಿ ಕಾರ್ ಕಣೋ, ಗೂಡ್ಸ್ ಲಾರಿಯಲ್ಲ, ಸಣ್ಣ ಮಾರುತಿ ಕಾರ್ ಅನ್ನು ಗೂಡ್ಸ್ ಲಾರಿಯನ್ನಾಗಿ ಮಾಡಿದ ಭೂಪ…!
ಆದರೆ, ಪತ್ನಿ ಕೆಳಗೆ ಬಿದ್ದಿದ್ದಾಳೆ ಎಂದು ಅರಿವಿಲ್ಲದ ಆ ವ್ಯಕ್ತಿ ಹಾಗೆಯೇ ಬೈಕ್ ಓಡಿಸಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಘಟನೆಯನ್ನು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಇನ್ನೊಬ್ಬ ವ್ಯಕ್ತಿ ವಿಡಿಯೋ ಮಾಡಿದ್ದು, ಅದು ಈಗ ಭರ್ಜರಿ ವೈರಲ್ ಆಗಿದೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರಿಂದ ವಿವಿಧ ರೀತಿಯ ಕಾಮೆಂಟ್‌ಗಳನ್ನು ಪಡೆದುಕೊಳ್ಳುತ್ತಿದೆ.
ವಿಡಿಯೋ ಇಲ್ಲಿದೆ ನೋಡಿ: Click Here
Funny Video – ನೆಟ್ಟಿಗರಿಂದ ತರಹೇವಾರಿ ಕಾಮೆಂಟ್‌ಗಳು!
ಈ ಫನ್ನಿ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. “ಅವನು ತನ್ನ ಹೆಂಡತಿಯನ್ನು ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿದ್ದಾನೆ ಅನಿಸುತ್ತೆ” ಎಂದು ಒಬ್ಬರು ಪೋಸ್ಟ್ ಮಾಡಿದರೆ, “ಮನೆಗೆ ಹೋದ ಮೇಲೆ ಆ ಪತಿಗೆ ಗತಿಯಿದೆ ನೋಡಿ!” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಹೆಂಡತಿಯನ್ನು ಬಿಟ್ಟುಬಿಡಲು ಇದು ಉತ್ತಮ ಟ್ರಿಕ್!” ಎಂದು ಮತ್ತೊಬ್ಬರು ಹಾಸ್ಯಮಯವಾಗಿ ಪೋಸ್ಟ್ ಮಾಡಿದ್ದಾರೆ.