ಪಂಚಗಿರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ.ವಿ ನವೀನ್ ಕಿರಣ್ ಅವರ 46ನೇ ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ (Chikkaballapura) ದ ಪಿಪಿಎಚ್ ಶಾಲೆಯಲ್ಲಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ವತಿಯಿಂದ ಮಕ್ಕಳಿಗೆ ಉಚಿತ 50 ಊಟದ ತಟ್ಟೆ ವಿತರಣೆ ಮಾಡಲಾಯಿತು. ಕೆ.ವಿ.ನವೀನ್ ಕಿರಣ್ ರವರ ಹುಟ್ಟುಹಬ್ಬದ ನಿಮಿತ್ತ ಜಿಲ್ಲೆಯಾದ್ಯಂತ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಮಹೇಶ್ ರವರು ಉದ್ಘಾಟಿಸಿ ಹಾಗು ಮಾತನಾಡಿ, ಕೆ.ವಿ.ನವೀನ್ ಕಿರಣ್ ರವರು ಚಿಕ್ಕಬಳ್ಳಾಪುರದ ವರಪುತ್ರ ಅವರು ಸಹಾಯ ಮಾಡುವ ಗುಣ ಜೀವನದಲ್ಲಿ ಮೈಗೂಡಿಸಿಕೊಂಡಿದ್ದಾರೆ ಅದೇ ರೀತಿ ನಾವು ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅವರು ಸದಾ ಬಡವರ ಬಗ್ಗೆ ಯೋಚನೆ ಮಾಡುವ ಧೀಮಂತ ನಾಯಕ, ಬಡವರ ಬಂಧು, ಸರಳ ವ್ಯಕ್ತಿಗಳಾಗಿದ್ದು ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೀರ್ತಿ ತಂದಿದ ವ್ಯಕ್ತಿಗಳಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾನ ನಮಸ್ಕಾರ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯರಾದ ನರ್ಮದಾ ರೆಡ್ಡಿ ಮಾತನಾಡಿ, ನಾವೆಲ್ಲ ನವೀನ್ ಕಿರಣ್ ರವರ ಅಭಿಮಾನಿಗಳಾಗಿದ್ದು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ವಿದ್ಯಾರ್ಥಿಗಳಾದ ನೀವು ಒಳ್ಳೆಯ ಗುಣಗಳನ್ನು ಹೊಂದಿ ಸಮಾಜಕ್ಕೆ ಹಾಗೂ ಶಾಲೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೆ ವಿ ನವೀನ್ ಕಿರಣ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಗುಂಪು ಮರದ ಆನಂದ್ ಮಾತನಾಡಿ, ಕೆ ವಿ ನವೀನ್ ಕಿರಣ್ ರವರ ದಯಾ ಗುಣಗಳು ಜಿಲ್ಲಾಧ್ಯಂತ ಹೆಸರು ಮಾಡಿದೆ. ಜಿಲ್ಲೆಯಲ್ಲಿ ಯಾರು ಮಾಡದ ಕಾರ್ಯಗಳನ್ನು ಮಾಡಿ ತೋರಿಸಿಕೊಟ್ಟಿದ್ದಾರೆ, ರಕ್ತದಾನ ವಿದ್ಯಾದಾನ, ಶಿಕ್ಷಣ ದಾನ, ಮಾಡಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ ಅಂತವರ ಹುಟ್ಟುಹಬ್ಬವನ್ನು ಏಳು ದಿವಸಗಳ ಕಾಲ ಜಿಲ್ಲಾಧ್ಯಂತ ಮಾಡುತ್ತಿರುವುದು ನಮಗೆ ಸಂತೋಷವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆನ್ರಿ ಪ್ರಸನ್ನ ಕುಮಾರ, ಹೋಟೆಲ್ ರಾಮಣ್ಣ, ಕೆ ಎಸ್ ನಾರಾಯಣಸ್ವಾಮಿ, ಲೀಡ್ ಬ್ಯಾಂಕ್ ಕವಿತಾ, ಶಿಕ್ಷಕರಾದ ಅಶ್ವತ್ ಅಣ್ಣ, ಪಿಪಿ ಹೆಚ್ ಎಸ್ ಶಾಲೆಯ ಮುಖ್ಯ ಶಿಕ್ಷಕರಾದ ಎಂ ನಾರಾಯಣಸ್ವಾಮಿ, ಶ್ರೀನಿವಾಸಮೂರ್ತಿ ಮಹಾಂತೇಶ್, ಪ್ರತಿಭಾ, ಮಂಜುಳಾ, ನರಸಿಂಹಮೂರ್ತಿ ಶಿವಣ್ಣ, ಸುಮಯ ಕಾನಂ. ವಿಜಯಲಕ್ಷ್ಮಿ ಮತ್ತು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಮಹೇಶ್ ರವರಿಗೆ ಸನ್ಮಾನಿಸಲಾಯಿತು.