Sunday, October 26, 2025
HomeNationalMarriage : ಮದುವೆಯಾದ ಇಬ್ಬರು ವಿವಾಹಿತ ಮಹಿಳೆಯರು, ಕುಡುಕ ಗಂಡನ ಕಾಟಕ್ಕೆ ಈ ನಿರ್ಧಾರವಂತೆ…!

Marriage : ಮದುವೆಯಾದ ಇಬ್ಬರು ವಿವಾಹಿತ ಮಹಿಳೆಯರು, ಕುಡುಕ ಗಂಡನ ಕಾಟಕ್ಕೆ ಈ ನಿರ್ಧಾರವಂತೆ…!

Marriage – ಇತ್ತೀಚಿಗೆ ವಿಭಿನ್ನ ಅಥವಾ ವಿಚಿತ್ರವಾದ ಮದುವೆ, ವಿಚ್ಚೇದನದಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ವಿಭಿನ್ನ ಮದುವೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಇಬ್ಬರು ವಿವಾಹಿತ ಮಹಿಳೆಯರು ತಮ್ಮ ಕುಡುಕ ಪತಿಯ ಕಾಟ ತಾಳಲಾರದೆ ಮದುವೆಯಾಗಿದ್ದಾರಂತೆ. ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಈ ಇಬಬ್ರೂ ಮಹಿಳೆಯರು ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದಾರೆ. ಈ ಮದುವೆ ಇದೀಗ ಸ್ಥಳೀಯರಲ್ಲಿ ಆಶ್ಚರ್ಯವನ್ನು ಉಂಟುಮಾಡಿದೆ.

Two woman married in UP 0

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಈ ವಿಚಿತ್ರ ಮದುವೆ ನಡೆದಿದೆ. ಮದ್ಯವ್ಯಸನಿ ಮತ್ತು ಸದಾ ನಿಂದಿಸುತ್ತಿದ್ದ ಗಂಡನ  ಕಾಟಕ್ಕೆ ವಿಚಲಿತರಾದ ಇಬ್ಬರು ಮಹಿಳೆಯರು ತಮ್ಮ ಮನೆಗಳನ್ನು ಬಿಟ್ಟುಬಂದು ಪರಸ್ಪರ ವಿವಾಹವಾಗಿ ಅಚ್ಚರಿ ಮೂಡಿಸಿದ್ದಾರೆ. ಕವಿತಾ ಮತ್ತು ಗುಂಜಾ, ಅಲಿಯಾಸ್ ಬಬ್ಲು ಎಂಬುವವರು ಇತ್ತಿಚಿಗಷ್ಟೆ ಡಿಯೋರಿಯಾದ ಚೋಟಿ ಕಾಶಿ ಎಂದು ಕರೆಯಲ್ಪಡುವ ಶಿವ ದೇವಾಲಯದಲ್ಲಿ ಪರಸ್ಪರ ವಿವಾಹವಾಗಿದ್ದಾರೆ. ಜೀವನ ಪರ್ಯಂತ ಒಟ್ಟಾಗಿ ಜೀವಿಸುತ್ತೇವೆಂದು ಅವರು ಪ್ರಮಾಣ ಮಾಡಿದ್ದಾರೆ. ಇನ್ನೂ ಈ ಸುದ್ದಿ ಇದೀಗ ಸ್ಥಳೀಯವಾಗಿ ಭಾರಿ ಸದ್ದು ಮಾಡುತ್ತಿದೆ.

ಇನ್ನೂ ಮಹಿಳೆಯರಿಬ್ಬರೂ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾರೆ. ಮದುವೆಗೂ ಮುಂಚೆ ಇಬ್ಬರೂ ಸುಮಾರು 6 ವರ್ಷಗಳ ಕಾಲ ಪರಸ್ಪರ ಸಂಪರ್ಕದಲ್ಲಿದ್ದರ ಎನ್ನಲಾಗಿದೆ. ಇಬ್ಬರೂ ತಮ್ಮ ಗಂಡಂದಿರು ನೀಡುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ತಮ್ಮ ಗಂಡನ ಕೈಯಲ್ಲಿ ಅನುಭವಿಸುತ್ತಿರುವ ಹಿಂಸೆಯ ಬಗ್ಗೆ ನೋವನ್ನು ಒಬ್ಬರಲ್ಲೊಬ್ಬರು ಹಂಚಿಕೊಳ್ಳುತ್ತಿದ್ದರು. ತಮ್ಮ ಪತಿಯರಿಂದ ಅನುಭವಿಸುತ್ತಿರುವ ನೋವಿನಿಂದ ಪಾರಾಗಲು ಇಬ್ಬರೂ ಮದುವೆಯಾಗುವುದಾಗಿ ನಿರ್ಧಾರ ಮಾಡಿದ್ದರಂತೆ. ಅದರಂತೆ ಇಬ್ಬರೂ ವಿವಾಹ ಬಂಧದ ಮೂಲಕ ಒಂದಾಗಿದ್ದು, ತುಂಬಾ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ. ಇನ್ನೂ ದೇವಾಲಯದಲ್ಲಿ ಗುಂಜ ಎಂಬ ಮಹಿಳೆ ವರನಾಗಿ, ಕವಿತಾ ಎಂಬ ಮಹಿಳೆ ವಧುವಾಗಿ ಹಾರಗಳನ್ನು ಬದಲಿಸಿಕೊಂಡು ಸಪ್ತಪದಿ ತುಳಿದಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular