ಬಾಗೇಪಲ್ಲಿ: ಹೆತ್ತ ತಾಯಿ ತಂದೆ, ಗುರು ಹಿರಿಯರನ್ನು ಗೌರವಿಸುವುದನ್ನು ಬಾಲ್ಯದಿಂದಲ್ಲೇ ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಸುಸಂಸ್ಕøತರಾಗಲು ಸಾಧ್ಯ (Education News) ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜ್ಞಾನ ದೀಪ್ತಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ 2024-25ನೇ ಸಾಲಿನ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಸಂಸ್ಕøತಿ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಎಷ್ಟೇ ಕಲಿಸಿದರೂ ಸಹ ಮನೆಯಲ್ಲಿ ಮಕ್ಕಳ ಪೋಷಕರ ನಡುವಳಿಕೆ ಹಾಗೂ ವಾತಾವರಣ ಮಕ್ಕಳ ಮೇಲೆ ಬೀರುತ್ತೆ. ಸಂಸ್ಕøತಿಯನ್ನು ಮಕ್ಕಳಿಗೆ ಕಲಿಸುವುದು ಶಿಕ್ಷಕರಿಗೆ ಎಷ್ಟು ಮುಖ್ಯವೂ ಮಕ್ಕಳ ಪೋಷಕರಿಗೂ ಸಹ ಅಷ್ಟೇ ಮುಖ್ಯ ಅಲ್ಲದೆ ಮಕ್ಕಳಿಗೆ ಸಂಸ್ಕøತಿಯನ್ನು ಕಲಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮನೆಯಲ್ಲಿ ಪೋಷಕರು ಒಳ್ಳೆಯ ವಾತಾವರಣ ರೂಪಿಸಿಕೊಂಡು ತಮ್ಮ ಮಕ್ಕಳಿಗೆ ತಾಯಿ ತಂದೆ, ಗುರು ಹಿರಿಯರನ್ನು ಗೌರವಿಸುವುದನ್ನು ಬಾಲ್ಯದಿಂದಲ್ಲೇ ಕಲಿಸಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದ ಅವರು ಪಠ್ಯದ ಜೊತೆಗೆ ಕ್ರೀಡೆ, ನಾಟಕ, ಪ್ರಬಂಧ, ನೃತ್ಯ ಇತ್ಯಾಧಿü ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದರು.
ಶಾಲೆಯ ಆಡಳಿತ ಮಂಡಳಿಯ ಖಜಾಂಜಿ ಪ್ರೋ. ಪಿ.ವೆಂಕಟರಾಮ್ ಮಾತನಾಡಿ ಬಡತನ ಎಲ್ಲಿ ಇರುತ್ತೋ ಅಲ್ಲಿ ಓದಿಗೆ ಅವಕಾಶ ಇರುತ್ತೆ. ಐಎಎಸ್, ಐಪಿಎಸ್ ಸೇರಿದಂತೆ ಬಹುತೇಕ ಉನ್ನತ ಹುದ್ದೆಗಳಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಗಿಂತ ಗ್ರಾಮೀಣ ಪ್ರದೇಶಗಳ ಬಡವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ ಎಂದ ಅವರು ಈ ಹಿಂದೆ ಮಕ್ಕಳಿಗೆ ಊಟ ತಿನ್ನಿಸಲು ಪ್ರಕೃತಿಯಲ್ಲಿನ ಗಿಡ ಮರಗಳನ್ನ ಆಕಾಶದಲ್ಲಿನ ಚಂದ್ರನನ್ನು ತೋರಿಸುತ್ತಿದ್ದರು ಆದರೆ ಇಂದಿನ ಯಾಂತ್ರಿಕ ಮತ್ತು ತಂತ್ರಜ್ಞಾನ ಯುಗದಲ್ಲಿ ಪೋಷಕರು ಮಕ್ಕಳಿಗೆ ಮೊಬೈಲ್ ತೋರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಮಕ್ಕಳು ಮೊಬೈಲ್‍ಗೆ ದಾಸರಾಗಿ ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತಿದೆ ಇದರಿಂದ ಮೊಬೈಲ್ ನಿಂದ ಮಕ್ಕಳನ್ನು ದೂರ ಉಳಿಸುವಂತಹ ಕೆಲಸಕ್ಕೆ ಪೋಷಕರು ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಜ್ಞಾನದೀಪ್ತಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರೋ.ಎ.ಕೆ.ನಿಂಗಪ್ಪ, ಕಾರ್ಯದರ್ಶಿ ಪ್ರೊ. ಕೆ.ಟಿ.ವೀರಾಂಜನೇಯಲು, ಸದಸ್ಯ ಪೂಜಾರಿ ಪ್ರಸಾದ್, ಪುರಸಭೆ ಸದಸ್ಯರಾದ ಎ.ನಂಜುಂಡಪ್ಪ, ಶ್ರೀನಾಥ್, ಜಿ.ಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ದಲಿತ ಮುಖಂಡ ವೆಂಕಟರವಣ, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಪೋಷಕರು ಇದ್ದರು.