ಕೆಲವು ದಿನಗಳ ಹಿಂದೆಯಷ್ಟೆ ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿಮಾಂಸ (Dog Meat Controversy) ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸುದ್ದಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಬಳಿಕ ಈ ಮಾಂಸವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಯಲ್ಲಿ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸವಲ್ಲ, ಬದಲಿಗೆ ಅದು ಕುರಿ ಮಾಂಸ ಎಂದು ದೃಢಪಡಿಸಲಾಗಿದೆ (Dog Meat Controversy) ಎಂದು ತಿಳಿದುಬಂದಿದೆ.
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ರೈಲಿನ ಮೂಲಕ ಟನ್ ಗಟ್ಟಲೇ ಮಾಂಸ (Dog Meat Controversy) ಸರಬರಾಜಾಗುತ್ತಿದೆ. ಅದರಲ್ಲಿ ನಾಯಿ ಮಾಂಸ ತರಲಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ದಾಳಿ ಮಾಡಲಾಗಿತ್ತು. ಈ ವೇಳೆ 84 ಬಾಕ್ಸ್ ಗಳನ್ನು ವಶಕ್ಕೆ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ವಶಕ್ಕೆ ಪಡೆದ (Dog Meat Controversy) ಮಾಂಸದ ಬಾಕ್ಸ್ ಗಳನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ಕುರಿ ಮಾಂಸ ಇದೆ ಎಂದು ತಿಳಿದುಬಂದಿದೆ. ಈ ಕುರಿತು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಆಯುಕ್ತ ಕೆ.ಶ್ರೀನಿವಾಸ್ ಮಾಹಿತಿ ನೀಡಿದ್ದು, ವಶಕ್ಕೆ ಪಡೆದ 84 ಬಾಕ್ಸ್ ಗಳನ್ನು ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಲ್ಯಾಬ್ ರಿಪೋರ್ಟ್ ಬಂದಿದ್ದು, ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿದ ರಿಪೋಟ್ ಬರೋದು ಬಾಕಿದೆ ಎಂದು ತಿಳಿಸಿದ್ದಾರೆ.
ರಾಜಸ್ಥಾನದಿಂದ 84 ಬಾಕ್ಸ್ ಮಾಂಸ ಬಂದಿತ್ತು. ಎಲ್ಲವೂ ಕುರಿ ಮಾಂಸ ಎಂದು (Dog Meat Controversy) ವರದಿ ಬಂದಿದೆ. ಈ ಮಾಂಸದಲ್ಲಿ ಬೇರೆ ಯಾವುದೇ ಪ್ರಾಣಿ ಮಾಂಸ ಮಿಶ್ರಣವಾಗಿಲ್ಲ. ಹೈದರಾಬಾದ್ ನಿಂದ ರಿಪೋರ್ಟ್ ನಲ್ಲಿ ಕುರಿ ಮಾಂಸ ಅಂತಾ ರಿಪೋರ್ಟ್ ಬಂದಿದೆ ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಆಯುಕ್ತ ಕೆ.ಶ್ರೀನಿವಾಸ್ ಮಾಹಿತಿ ನೀಡಿದರು. ಇದೇ ವೇಳೆ ಪರವಾನಿಗೆಯ ಬಗ್ಗೆ ಸಹ ಮಾತನಾಡಿದ್ದಾರೆ. ಪ್ರಾಥಮಿಕ ಹಂತದಲ್ಲಿ 9 ಮಂದಿ ಲೈಸೆನ್ಸ್ ಪಡೆದಿದ್ದರು ಎಂಬ ಆರೋಪದ ಮೇರೆಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಎಲ್ಲರ ಬಳಿಯೂ FSSAI ಲೈಸೆನ್ಸ್ ಇದೆ. ಆದ್ದರಿಂದ ರಾಜಸ್ಥಾನದಿಂದ ಕುರಿತ ಮಾಂಸವನ್ನು (Dog Meat Controversy) ತಂದು ಮಾರಾಟ ಮಾಡುತ್ತಿದ್ದರು. ನಾಯಿ ಮಾಂಸ ಅಂತಾ ಸುಳ್ಳು ಸುದ್ದಿ ಹಬ್ಬಿಸಿದವರು ವಿರುದ್ದ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪೊಲೀಸರು ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.