Viral – ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾಕ್ಟರ್ ಹಾಗೂ ಅದೇ ಆಸ್ಪತ್ರೆಯಲ್ಲಿ ಎ.ಎನ್.ಎಂ ನರ್ಸ್ ನಡುವೆ ಲವ್ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಪ್ರೀತಿ ಹುಟ್ಟೋದು ಸಹಜ ಆದರೆ ಡಾಕ್ಟರ್ ಅಂಕಲ್ ಹಾಗೂ ನರ್ಸ್ ಆಂಟಿಗೂ ಈಗಾಗಲೇ ಮದುವೆಯಾಗಿದ್ದು ಅವರಿಗೆ ಮಕ್ಕಳೂ ಸಹ ಇದ್ದಾರೆ. ಆದರೆ ಅವರಿಬ್ಬರ ನಡುವೆ ವಿವಾಹೇತರ ಸಂಬಂಧ ಹುಟ್ಟಿಕೊಂಡಿದ್ದು, ಯುವ ಪ್ರೇಮಿಗಳಂತೆ ವಿಡಿಯೋಗಳು, ಪೊಟೋಗಳು ಶೇರ್ ಮಾಡಿಕೊಳ್ಳುತ್ತಾ ಪ್ರೇಮ ಪಯಣ ಸಾಗಿಸಿದ್ದಾರೆ. ಸದ್ಯ ಅವರಿಬ್ಬರ ರೊಮ್ಯಾನ್ಸ್ ಸೇರಿದಂತೆ ಖಾಸಗಿ ಪೊಟೋಗಳು ಹಾಗೂ ಖಾಸಗಿ ಚಾಟಿಂಗ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರನ್ನೂ ಅಮಾನತ್ತು ಮಾಡಲಾಗಿದೆ ಎಂದು ವರದಿಯಾಗಿದೆ.
ಅಂದಹಾಗೆ ಈ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಸಿರೋಹಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಹಾಗೂ ನರ್ಸ್ ನಡುವೆ ಕೆಲವು ವರ್ಷಗಳಿಂದ ಪ್ರೇಮ ಸಂಬಂಧವಿತ್ತಂತೆ. ಇಬ್ಬರೂ ವಿವಾಹಿತರಾಗಿದ್ದು, ಇಬ್ಬರ ನಡುವೆ ವಿವಾಹೇತರ ಸಂಬಂಧ ಹುಟ್ಟಿಕೊಂಡಿತ್ತು. ಡಾಕ್ಟರ್ ಆಕೆಯ ಮೇಲೆ ಎಷ್ಟರ ಮಟ್ಟಿಗೆ ಒಳಗಾಗಿದ್ದನೆಂದರೇ ಆತನ ಅಧಿಕಾರವನ್ನೂ ಸಹ ಆಕೆಗೆ ಒಪ್ಪಿಸಿದ್ದನಂತೆ. ಆ ನರ್ಸ್ ಇತರೆ ಸಿಬ್ಬಂದಿಗಳಿಗೆ ಏನು ಕೆಲಸ ಮಾಡಬೇಕೆಂಬುದನ್ನು ನಿಗಧಿಪಡಿಸುತ್ತಿದ್ದಳಂತೆ. ಜೊತೆಗೆ ಸಿಬ್ಬಂದಿಯ ವರ್ಗಾವಣೆ ಸೇರಿದಂತೆ ರಜೆಗಳನ್ನು ಸಹ ಈಕೆಯೇ ನಿರ್ಧಾರ ಮಾಡುತ್ತಿದ್ದಳಂತೆ.
ಇದೀಗ ಅವರಿಬ್ಬರ ವೈಯುಕ್ತಿಕ ಚಾಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಡಾಕ್ಟರ್ ಹಾಗೂ ಎ.ಎನ್.ಎಂ ನರ್ಸ್ ಇಬ್ಬರ ವಾಟ್ಸಾಪ್ ಚಾಟ್ ಮೂರನೇಯ ವ್ಯಕ್ತಿಯ ಕೈಗೆ ಸಿಕ್ಕಿದ್ದು, ಆತ ಅವುಗಳನ್ನು ಹರಿಬಿಟ್ಟಿದ್ದಾನೆ ಎನ್ನಲಾಗಿದೆ. ಇಬ್ಬರ ರೊಮ್ಯಾನ್ಸ್ ಈ ಚಾಟ್ ನಲ್ಲಿತ್ತು ಎನ್ನಲಾಗಿದೆ. ಈ ಪೈಕಿ ಡಾಕ್ಟರ್ ನರ್ಸ್ ಗೆ ಒಂದು ಹಾಟ್ ಪೊಟೋ ಕಳಿಸುವಂತೆ ಕೇಳಿರೋದು, ಬಳಿಕ ನರ್ಸ್ ಹಾಟ್ ಪೊಟೋ ಡಾಕ್ಟರ್ ಗೆ ಕಳುಹಿಸಿದ್ದಾಳಂತೆ. ಇದೆಲ್ಲವೂ ಮೂರನೇ ವ್ಯಕ್ತಿಯ ಕೈಗೆ ಸಿಕ್ಕಿದ್ದು, ಎಲ್ಲವೂ ಇದೀಗ ಬಟಾಬಯಲಾಗಿದೆ. ಸದ್ಯ ಡಾಕ್ಟರ್ ಹಾಗೂ ನರ್ಸ್ ಇಬ್ಬರನ್ನೂ ಕೆಲವು ದಿನಗಳ ಕಾಲ ಅಮಾನತ್ತಿನಲ್ಲಿಟ್ಟು ಇಲಾಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಇಬ್ಬರ ವಿರುದ್ದ ಶಿಸ್ತು ಕ್ರಮ ಜರಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ರೀತಿಯ ಘಟನೆಗಳು ಅದೇಷ್ಟೋ ಕಡೆ ನಡೆಯುತ್ತಿರುತ್ತದೆ. ಇಂದಿನ ಡಿಜಿಟಲ್ ಕಾಲದಲ್ಲಿ ಎಲ್ಲವನ್ನೂ ತುಂಬಾ ದಿನಗಳ ಕಾಲ ಮುಚ್ಚಿಡೋಕೆ ಸಾಧ್ಯವಿಲ್ಲ ಎಂದು ಹೇಳಬಹುದಾಗಿದ್ದು, ಇದಕ್ಕೆ ಈ ಘಟನೆ ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ.