Saturday, August 30, 2025
HomeStateಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ರಕ್ಷಿತಾ ಪ್ರೇಮ್, ದರ್ಶನ್ ಭೇಟಿ ಮಾಡಿ, ಬಳಿಕ ಕಣ್ಣಿರಾಕಿದ ನಟಿ….!

ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ರಕ್ಷಿತಾ ಪ್ರೇಮ್, ದರ್ಶನ್ ಭೇಟಿ ಮಾಡಿ, ಬಳಿಕ ಕಣ್ಣಿರಾಕಿದ ನಟಿ….!

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಿಮಿತ್ತ ಚಾಲೆಂಜಿಂಗ್ ಸ್ಟಾರ್‍ ದರ್ಶನ್  ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರೂ ಜೈಲಿನಲ್ಲಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ಶನಿವಾರ ನಟ ದರ್ಶನ್ ರವರ ಭೇಟಿಗಾಗಿ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ದರ್ಶನ್ ಭೇಟಿಯಾದ ಬಳಿಕ ರಕ್ಷಿತಾ ಮಾದ್ಯಮಗಳೊಂದಿಗೆ ಮಾತನಾಡಿದ್ದರು. ಈ ಸಮಯದಲ್ಲಿ ಆಕೆ ಭಾವುಕರಾಗಿದ್ದಾರೆ.

Actress rakshita and prem met darshan 2

ಸಾಮಾನ್ಯವಾಗಿ ಜೈಲಿನಲ್ಲಿರುವವರನ್ನು ಭೇಟಿ ಯಾಗಲು ವಾರಕ್ಕೆ ಮೂರು ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಕೆಲವು ದಿನಗಳ ಹಿಂದೆಯಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೇಶ್ ದರ್ಶನ್ ರವರನ್ನು ಭೇಟಿ ಮಾಡಿದ್ದರು. ವಿನೋದ್ ಪ್ರಭಾಕರ್‍ ಸಹ ದರ್ಶನ್ ರನ್ನು ಭೇಟಿಯಾಗಿದ್ದರು. ಇದೀಗ ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ರವರು ದರ್ಶನ್ ರನ್ನು ಭೇಟಿಯಾಗಿದ್ದಾರೆ. ದರ್ಶನ್ ಕೊಲೆ ಪ್ರಕರಣದ ಮೇರೆಗೆ ಜೈಲು ಸೇರಿದ್ದು, ಕೆಲವು ದಿನಗಳ ಕಾಲ ಆಪ್ತರು ಅಂತರ ಕಾಯ್ದುಕೊಂಡಿದ್ದರು. ಇದೀಗ ಒಬ್ಬರೊಬ್ಬರಾಗಿ ದರ್ಶನ್ ಭೇಟಿಗಾಗಿ ಆಗಮಿಸುತ್ತಿದ್ದಾರೆ. ನಟಿ ರಕ್ಷಿತಾ ಹಾಗೂ ಪ್ರೇಮ್ ಕಾರಿನಲ್ಲಿಯೇ ಜೈಲಿನ ಆವರಣಕ್ಕೆ ಎಂಟ್ರಿ ಕೊಟ್ಟರು. ದರ್ಶನ್ ರನ್ನು ಭೇಟಿಯಾದ ಬಳಿಕ ರಕ್ಷಿತಾ ಭಾವುಕರಾಗಿದ್ದಾರೆ.

ನಟ ದರ್ಶನ್ ರನ್ನು ಭೇಟಿಯಾದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ರಕ್ಷಿತಾ, ಕಳೆದ 20 ದಿನಗಳಿಂದ ಏನೆಲ್ಲಾ ಆಗುತ್ತಿದೆ ಎಂಬುದನ್ನು ನಾನು ಮಾದ್ಯಮಗಳಲ್ಲಿ ನೋಡುತ್ತಿದ್ದೇನೆ. ಇದು ದುರಾದೃಷ್ಟಕರವಾದ ಘಟನೆ. ಈ ಪ್ರಕರಣ ನನಗೆ ತುಂಬಾ ಬೇಸರ ತಂದಿದೆ. ನಾನು ಹೇಳೋದು ಒಂದೇ, ಯಾರೂ ಸಹ ಕಾನೂನಿಗಿಂತ ದೊಡ್ಡವರಲ್ಲ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ಭಾವುಕರಾದರು. ನಿಮ್ಮ ಬಳಿಕ ಪತ್ರಕರ್ತರೊಬ್ಬರು ನಿಮ್ಮ ಬಳಿ ದರ್ಶನ್ ಸಹಜವಾಗಿ ಮಾತನಾಡಿದ್ರಾ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ರಕ್ಷಿತಾ ಇಂತಹ ಸ್ಥಿತಿಯಲ್ಲಿ ಅವರು ಹೇಗೆ ಸಹಜವಾಗಿ ನಮ್ಮೊಡನೆ ಮಾಡನಾಡಲು ಸಾಧ್ಯ ಎಂದು ರಕ್ಷಿತಾ ಉತ್ತರಿಸಿದರು.

Actress rakshita and prem met darshan 1

ಇನ್ನೂ ಇದೇ ಸಮಯದಲ್ಲಿ ನಿರ್ದೇಶಕ ಪ್ರೇಮ್ ಮಾತನಾಡಿ, ಈ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಈ ಕುರಿತು ಮಾತನಾಡುವುದು ಸರಿಯಲ್ಲ. ದರ್ಶನ್ ನನಗೂ ಸ್ನೇಹಿತರು, ರಕ್ಷಿತಾಗೆ ಸಹ ಸ್ನೇಹಿತರು. ಎಲ್ಲದಕ್ಕಿಂತ ಇಡೀ ಪ್ರಕರಣ ಈಗ ಕಾನೂನಿನ ಅಡಿಯಲ್ಲಿದೆ. ಆದ್ದರಿಂದ ನಾವೂ ಯಾರೂ ಈ ಕುರಿತು ಮಾತನಾಡೋಕೆ ಹೋಗಬಾರದು. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೋಳ್ಳುತ್ತೇನೆ. ಕಾನೂನಿನ ಪ್ರಕಾರ ಏನೆಲ್ಲಾ ಆಗಬೇಕು ಅದೆಲ್ಲವೂ ಆಗುತ್ತದೆ. ಇನ್ನೂ ಹೆಚ್ಚಾಗಿ ಏನೂ ಕೇಳಬೇಡಿ ಎಂದರು. ಇದೇ ಸಮಯದಲ್ಲಿ ಜೈಲಿನಲ್ಲಿ ದರ್ಶನ್ ಜೊತೆಯಾದ ಮಾತುಕತೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular