Darshan Case – ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದಂತಹ ದಾವಣಗೆರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ A2 ಆರೋಪಿಯಾಗಿರುವ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಬಿಂದಾಸ್ (Darshan Case) ಲೈಫ್ ಲೀಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆ.25 ರಂದು ದರ್ಶನ್ ಪೊಟೋ ವೈರಲ್ ಆಗಿತ್ತು. ಇದೀಗ ವಿಡಿಯೋ ಒಂದು (Darshan Case) ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಬಳಿಕ ಜೈಲಿನಲ್ಲಿ ಹೇಗೆ ಅಷ್ಟೆಲ್ಲಾ ಸೌಲಭ್ಯಗಳು ಸಿಗುತ್ತದೆ ಎಂಬ ಅನುಮಾನ (Darshan Case) ಮೂಡತೊಡಗಿದೆ. ಕೊಲೆ ಕೇಸ್ ನಲ್ಲಿ A2 ಆರೋಪಿಯಾಗಿರುವ ದರ್ಶನ್ ವಿಡಿಯೋ ಕಾಲ್ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Darshan Case) ನಟ ದರ್ಶನ್ ಆರಾಮಾಗಿದ್ದಾರೆ. ನಿನ್ನೆಯಷ್ಟೆ ಜೈಲಿನ ಗಾರ್ಡನ್ ಏರಿಯಾದಲ್ಲಿ ನಟೋರಿಯಸ್ ರೌಡಿಗಳ ಜೊತೆ ಕುಳಿತು ಹರಟೆ ಹೊಡೆಯುತ್ತಿರುವ ಪೊಟೋ ಒಂದು ವೈರಲ್ ಆಗಿತ್ತು. ಇದೀಗ ವ್ಯಕ್ತಿಯೊಬ್ಬರ ಜೊತೆಗೆ ನಟ ದರ್ಶನ್ ವಿಡಿಯೋ ಕಾಲ್ ನಲ್ಲಿ (Darshan Case) ಮಾತನಾಡಿದ್ದಾರೆ. ಅದೇ ಜೈಲಿನಲ್ಲಿರುವ ರೌಡಿಶೀಟರ್ ಬಾಣಸವಾಡಿ ರೌಡಿಶೀಟರ್ ಧರ್ಮ ಮೊಬೈಲ್ ಮೂಲಕ ವಿಡಿಯೋ ಕಾಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋಕಾಲ್ ನಲ್ಲಿ ಆಪ್ತರೊಬ್ಬರೊಂದಿಗೆ (Darshan Case) ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ. ಅತ್ಯಾಪ್ತವಾಗಿ ಮಾತಾಡಿರೊ (Darshan Case) ದರ್ಶನ್, ಊಟ ಆಯ್ತಾ ಚಿನ್ನ, ಆರಾಮಾಗಿದ್ದೀನಿ ಅಂತ ಮಾತುಕತೆ ನಡೆಸಿದ್ದಾರೆ. ಒಂದು ವೀಡಿಯೋ ಕಾಲ್‌ನಲ್ಲಿ ಸುಮಾರು 25 ಸೆಕೆಂಡುಗಳ ಕಾಲ ಮಾತನಾಡಿದ್ದಾರೆ. (Darshan Case) ರೆಡ್ಡಿ ಎಂಬಾತ ಈ ವಿಡಿಯೋವನ್ನು ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾನೆ.
ಈ ವಿಡಿಯೋ ಬಿಡುಗಡೆಗೂ (Darshan Case) ಮುನ್ನಾ ನಟ ದರ್ಶನ್ ಹಾಗೂ ನಟೋರಿಯಸ್ ರೌಡಿಗಳ ಜೊತೆ ಜೈಲಿನ ಪಾರ್ಕ್‌ನಲ್ಲಿ ಕುಳಿತು ಮಾತುಕತೆ ನಡೆಸುವ ಪೊಟೋ ವೈರಲ್ ಆಗಿತ್ತು. ದರ್ಶನ್ ಜೊತೆಗೆ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಮುಂತಾದ ರೌಡಿಶೀಟರ್ಗಳ ಜೊತೆ ಸಿಗರೇಟು ಸೇದಿದ ಫೋಟೋ ಇದಾಗಿತ್ತು. (Darshan Case) ಸಾಮಾನ್ಯವಾಗಿ ಜೈಲಿನಲ್ಲಿ ಮೊಬೈಲ್ ಪೋನ್ ಬಳಕೆ ಮಾಡುವಂತಿಲ್ಲ. ಆದರೆ ಜೈಲಿನಲ್ಲಿದ್ದುಕೊಂಡು ವೈಫೈ ಬಳಸಿ ಇನ್ಟ್ರಾಗ್ರಾಂ ಮೂಲಕ ವಿಡಿಯೋ ಕಾಲ್ ಹೇಗೆ ಮಾಡಿದ್ದು ಎಂಬ ಅನುಮಾನ ಹಾಗೂ ಅಚ್ಚರಿ ಎಲ್ಲರಲ್ಲೂ ಮೂಡಿದೆ. ಈ ಕುರಿತು ಸಮಗ್ರ ತನಿಖೆ (Darshan Case) ನಡೆಸುವಂತೆ ಅನೇಕರು ಆಗ್ರಹಿಸಿದ್ದಾರೆ.
ಇನ್ನೂ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಾರೆ ಎನ್ನಲಾದ (Darshan Case) ಫೋಟೋ ಬೆಳಕಿಗೆ ಬಂದ ಬೆನ್ನಲ್ಲೇ ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಹಾಗೂ ಸಮಾಜದ ಮುಖಂಡರ ಸಮ್ಮುಖದಲ್ಲಿ ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ನಮಗಿಲ್ಲಿ ನೋವು, (Darshan Case) ಸಂಕಟ ಆಗ್ತಿದೆ. ತಪ್ಪು ಮಾಡಿದ ಭಾವನೆ ದರ್ಶನ್‌ಗೆ ಇದ್ದಂತೆ ಕಾಣುತ್ತಿಲ್ಲ. ಆರೋಪಿಗಳು ಜೈಲಿನಲ್ಲಿ ಚೈನಿ ಹೊಡೆಯುತ್ತಿದ್ದಾರೆ ಎಂದು ಕಣ್ಣೀರು (Darshan Case) ಹಾಕಿದರು. ಸರಿಯಾದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗಾದರೆ ಸಿಬಿಐ ತನಿಖೆಗೆ ವಹಸಿಬೇಕೆಂದು ಅನಿಸುತ್ತದೆ. ಇಲ್ಲಿಯವರೆಗೆ ಉತ್ತಮ (Darshan Case) ರೀತಿಯಲ್ಲಿ ತನಿಖೆ ನಡೆದಿದೆ. ಇನ್ಮುಂದೆಯೂ ಸರಿಯಾದ ರೀತಿಯಲ್ಲಿ ತನಿಖೆ ನಡೆಯಲಿ ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರು ಒತ್ತಾಯಿಸಿದರು.