ಪ್ರೀತಿ ಪ್ರೇಮ ಪ್ರಣಯ ಇದು ಯಾವಾಗ ಹೇಗೆ ಹುಟ್ಟುತ್ತದೆ ಎಂಬುದು ಹೇಳೋದು ಕಷ್ಟ ಎಂದೇ ಹೇಳಬಹುದು. ಅನೇಕ ಪ್ರೇಮ ಪ್ರಕರಣಗಳು ಸುಖಾಂತ್ಯ ಕಂಡರೇ, ಅದೇ ಮಾದರಿ ಅನೇಕ ಪ್ರಕರಣಗಳು ದುರಂತ ಸಹ ಕಂಡಿವೆ. ಆದರೆ ಇಲ್ಲೊಂದು ಘಟನೆಯ ಬಗ್ಗೆ ಕೇಳಿದರೇ ನೀವು ಸಹ ಶಾಕ್ ಆಗುತ್ತೀರಾ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳೆಯನನ್ನೇ ಆಕೆ ಹಾಗೂ ಆಕೆಯ ಕುಟುಂಬಸ್ಥರು ಕೊಲೆ ಮಾಡಿದ್ದಾಳೆ. ಅದರಲ್ಲೂ ಮೂತ್ರ ಕುಡಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ (crime news) ಎನ್ನಲಾಗಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,
ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮಾರಣಾಂತಿಕವಾಗಿ ಹಲ್ಲೆ(crime news) ಮಾಡಿಸಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಬಾರಮೇರ್ ಜಿಲ್ಲೆಯಲ್ಲಿ ನಡೆದಿದೆ. ಬಾಲಮೇರ್ ಜಿಲ್ಲೆಯ ಬಾಲತೋರ ಕ್ಷೇತ್ರದ ಸಿಂಧರಿ ಇಲಾಖೆಯ ಕೋಶಲು ಎಂಬಲ್ಲಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಶನಿವಾರ ಸುಮಾರು 6.30 ರ ಸಮಯದಲ್ಲಿ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಈ ಸುದ್ದಿ ತಿಳೀಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಆದರೆ ಅಲ್ಲಿ ಯಾರೂ ಇರಲಿಲ್ಲ. ಅಪರಿಚಿತ ಯುವಕನ ಶವವೊಂದು ಆಸ್ಪತ್ರೆಯಲ್ಲಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಅಷ್ಟರೊಳಗೆ ಶವ ತಂದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಬಳಿಕ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲವರು ವಾಹನದಲ್ಲಿ ಶವ ತಂದಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರು ಸಿಸಿಟಿವಿ ಆಧರಿಸಿ ಯುವಕನ ಗೆಳತಿ ಜೆಠಿ, ಚುನ್ನಿದೇವಿ, ಚೌಥಾರಾಮ್, ತಾಜಾಯರಾಮ್, ಖೊರಾಜರಾಮ್ ಹಾಗೂ ಮನಾರಾಮ್ ಎಂಬುವವರನ್ನು(crime news) ಬಂಧಿಸಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಹೊರಬಂದಿದೆ. ಯುವತಿ ಜೆಠಿ ಹಾಗೂ ಮೃತ ಯುವಕನ ಜೊತೆಗೆ ಹಲವು ದಿನಗಳಿಂದ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಶುಕ್ರವಾರ ಸಂಜೆ ಪ್ರಿಯರಕರ ಮಗಾರಾಮನಿಗೆ ಪೋನ್ ಮಾಡಿ ತನ್ನ ಊರಿಗೆ (crime news) ಕರೆಸಿಕೊಂಡಿದ್ದಾಳೆ. ಮೃತ ಯುವಕ ಗೆಳತಿಯ ಬಳಿ ಹೋಗುವುದಕ್ಕೂ ಮುನ್ನಾ ಕುಟುಂಬಸ್ಥರಿಗೆ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ ಎನ್ನಲಾಗಿದೆ. ಆದರೆ ರಾತ್ರಿ ಸುಮಾರು ಒಂದು ಗಂಟೆಗೆ ಯುವಕ ಮನೆಗೆ ವಾಪಸ್ ಹೋಗುವ ಸಮಯದಲ್ಲಿ ಯುವತಿಯ (crime news) ಪೋಷಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವ ಸಮಯದಲ್ಲಿ ಯುವಕನಿಗೆ ಮೂತ್ರ ಸಹ ಕುಡಿಸಲಾಗಿತ್ತಂತೆ. ಸದ್ಯ ಆರು ಮಂದಿಯನ್ನು ಬಂಧಿಸಿದ್ದು, ಕೊಲೆ ಮಾಡಲು ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ (crime news) ಎಂದು ತಿಳಿದುಬಂದಿದೆ.