Crime – ಉತ್ತರ ಪ್ರದೇಶದ ಕಾನ್ಪುರ ದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ಪ್ರೇಯಸಿ ತನಗೆ ನಂಬಿಕೆ ದ್ರೋಹ ಮಾಡಿದಳೆಂದು ಸಂಶಯಿಸಿ, ಯುವಕನೋರ್ವ ಅವಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕಾನ್ಪುರದ ಶಿವಂ ವರ್ಮಾ ಎಂಬ ವ್ಯಕ್ತಿ ತನ್ನ 17 ವರ್ಷದ ಪ್ರೇಯಸಿಯನ್ನು ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ, ಅವನು ತನ್ನ ಪ್ರೇಯಸಿಯ ಸ್ನೇಹಿತನಿಗೆ ಕರೆ ಮಾಡಿ ತಪ್ಪೊಪ್ಪಿಕೊಂಡು ಪರಾರಿಯಾಗಿದ್ದಾನೆ. ಆರೋಪಿಯ ಬಂಧನಕ್ಕೆ ಇದೀಗ ಪೊಲೀಸರು ಬಲೆ ಬೀಸಿದ್ದಾರೆ.
Crime – ಕೊಲೆ ಮಾಡಿ ಗೆಳತಿಗೆ ಹೇಳಿದ ಆರೋಪಿ
ಮೂಲಗಳ ಪ್ರಕಾರ ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಮಾರುಕಟ್ಟೆಗೆ ಹೋಗಿದ್ದಳು. ಆ ಸಮಯದಲ್ಲಿ, ಶಿವಂ ವರ್ಮಾ ಬೈಕಿನಲ್ಲಿ ಮಾರುಕಟ್ಟೆಗೆ ಬಂದು, ಅವಳನ್ನು ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅವನು ಅವಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಘಟನೆಯ ನಂತರ, ಒಂದು ಗಂಟೆಯ ಬಳಿಕ ತನ್ನ ಪ್ರೇಯಸಿಯ ಗೆಳೆಯನಿಗೆ ಕರೆ ಮಾಡಿ ಈಕೆ ನಂಬಿಕೆ ದ್ರೋಹಿ ಅವಳಿಗೆ ತನ್ನ ಸೌಂದರ್ಯದ ಬಗ್ಗೆ ಬಹಳ ಅಹಂಕಾರ ಇದೆ. ಹಾಗಾಗಿ ನಿನ್ನ ಸ್ನೇಹಿತೆಯನ್ನು ತಾನು ಕೊಂದೆ ಎಂದು ಹೇಳಿ ಕಾಲ್ ಕಟ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.

Crime – ರಕ್ತದ ಮಡುವಿನಲ್ಲಿ ಬಿದಿದ್ದ ಯುವತಿ
ಸಂತ್ರಸ್ತೆಯ ಸ್ನೇಹಿತ ಘಟನೆಯ ಬಗ್ಗೆ ತಿಳಿದು, ಬಾಡಿಗೆ ಮನೆಗೆ ಹೋಗಿ ನೋಡಿದಾಗ, ಅವಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಅವನು ತಕ್ಷಣ ಮೃತಳ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ನಂತರ ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೊಲೆಯ ಸ್ಥಳದಿಂದ ಚಾಕು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂತ್ರಸ್ತೆಯ ಕುಟುಂಬವು ಈ ಘಟನೆಗೆ ಪ್ರತಿಭಟಿಸಿದೆ.
GoSriKi Women’s Rayon Viscose Anarkali Printed Kurta with Palazzo & Dupatta (Upto 70% Buy Now)
Crime – ಪೋಷಕರ ಆಕ್ರಂದನ
ಇನ್ನೂ ಶಿವಂ ವರ್ಮಾ ತನ್ನ ಬಾಡಿಗೆ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋದ ವಿಚಾರ ಮನೆ ಮಾಲಿಕನಿಗೆ ತಿಳಿದಿದ್ದರೂ, ಅವನು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಂತ್ರಸ್ತೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ನಂತರ, ಪೊಲೀಸರು ತನಿಖೆಯನ್ನು ವೇಗವಾಗಿ ಮುಂದುವರೆಸುವುದಾಗಿ ಡಿಸಿಪಿ ಆಶಿಶ್ ಶ್ರೀವಾಸ್ತವ ಸುದ್ದಿಮಾದ್ಯಮಕ್ಕೆ ಮಾಹಿತಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಕ್ಷುಲ್ಲಕ ಕಾರಣಕ್ಕೆ ಬದುಕಿ ಬಾಳಬೇಕಾಗಿದ್ದ ಯುವತಿ ಇದೀಗ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.