Crime News – ಹಣ ಕಂಡ್ರೆ ಹೆಣ ಕೂಡ ಬಾಯಿ ಬಿಡುತ್ತೆ ಎಂದು ಹೇಳಲಾಗುತ್ತದೆ. ಅದರಂತೆ ಇಲ್ಲೊಬ್ಬ ಪಾಪಿ ಅಣ್ಣನೋರ್ವ ವಿಮಾ ಹಣಕ್ಕಾಗಿ ಒಡಹುಟ್ಟಿದ ತಂಗಿಯನ್ನೆ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಅಣ್ಣ ಅದನ್ನು ಅಪಘಾತ ಎಂದು ಬಿಂಬಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಘಟನೆ ಕಳೆದ ಫೆಬ್ರವರಿ 2, 2024 ರಂದು ನಡೆದಿದೆ ಎನ್ನಲಾಗಿದ್ದು, ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಾಲಪತಿ ಅಶೋಕ್ ಎಂಬುವವರೇ ಆರೋಪಿಯಾಗಿದ್ದಾರೆ. ತನ್ನ ಸ್ವಂತ ತಂಗಿ ವಿಚ್ಚೇದನ ಪಡೆದುಕೊಂಡಿದ್ದಳಂತೆ, ಜೊತೆಗೆ ಆಕೆಗೆ ಮಕ್ಕಳು ಸಹ ಇರಲಿಲ್ಲವಂತೆ. ಆಕೆಯ ಮೇಲಿದ್ದ 1 ಕೋಟಿ ರೂಪಾಯಿ ವಿಮಾ ಮೊತ್ತಕ್ಕಾಗಿ ಕಳೆದ 2024 ಫೆಬ್ರವರಿ 2 ರಂದು ಪೊಡಿಲಿಯ ಪೆಟ್ರೋಲ್ ಬಂಕ್ ಬಳಿ ಕೊಲೆ ಮಾಡಿದ್ದ ಎನ್ನಲಾಗಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಆರೋಪಿ ಅಶೋಕ್ ಭಾರಿ ಸಾಲ ಮಾಡಿಕೊಂಡಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದ. ತನ್ನ ಸಹೋದರಿಯ ಜೀವಕ್ಕೆ ಅನೇಕ ವಿಮಾ ಕಂಪನಿಗಳಲ್ಲಿ ವಿಮೆ ಮಾಡಿಸಿದ್ದಾರೆ. ಬಳಿಕ ಆಕೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ಅದರಂತೆ ಒಂದು ವರ್ಷದ ಹಿಂದೆ ಫೆಬ್ರವರಿ 4, 2024 ರಂದು, ಅಸ್ವಸ್ಥಳಾಗಿದ್ದ ತಂಗಿಯನ್ನು ಒಂಗೋಲು ಆಸ್ಪತ್ರೆಗೆ ಕರೆತರಲಾಯಿತು. ಸ್ವಗ್ರಾಮವಾದ ಕನಿಗಿರಿ ಮಂಡಲ ಪುನುಗೋಡು ಗ್ರಾಮಕ್ಕೆ ವಾಪಸ್ಸಾಗುವಾಗ ತಂಗಿ ಸಂಧ್ಯಾಗೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿದ. ನಂತರ ಮಾರ್ಗಮಧ್ಯೆ ಪೊಡಿಲಿ ಮಂಡಲದ ಕ್ಯಾತೂರಿವಾರಿಪಾಲೆಂ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಅಪಘಾತವಾಗಿದೆ ಎಂದು ಬಿಂಬಿಸಿದ್ದಾನೆ.
ಬಳಿಕ ಮರಣೋತ್ತರ ಪರೀಕ್ಷೆಯ ವರದಿಗಾಗಿ ತಂಗಿ ಸಂಧ್ಯಾ ಅಪಘಾತದಿಂದ ಸಾವಿಗೀಡಾಗಿರುವುದನ್ನು ಚಿತ್ರೀಕರಿಸಲು ಪೋಸ್ಟ್‌ಮಾರ್ಟಂ ಕರ್ತವ್ಯದಲ್ಲಿದ್ದ ಆಸ್ಪತ್ರೆ ನೌಕರನಿಗೆ 3 ಲಕ್ಷ ಲಂಚ ನೀಡಿ ರಿಪೋರ್ಟ್ ಬದಲಾಯಿಸಿದ್ದನು. ಕೆಲವು ವರ್ಷಗಳ ನಂತರ ಅಶೋಕ್ ಮರಣೋತ್ತರ ಪರೀಕ್ಷೆಯ ವರದಿಗಾಗಿ ವೈದ್ಯರಿಗೆ ಒತ್ತಾಯಿಸಲು ಪ್ರಾರಂಭಿಸಿದರು.ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ವೈದ್ಯರು ಅಶೋಕ್ ವರ್ತನೆಯಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಶೋಕ್ ಗೆ ತಿಳಿಯದಂತೆ ತನಿಖೆ ಆರಂಭಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಅಶೋಕ್ ವಿಮೆ ಹಣಕ್ಕಾಗಿ ತನ್ನ ಸಹೋದರಿಯನ್ನು ಉದ್ದೇಶಪೂರ್ವಕವಾಗಿ ಕೊಂದಿರುವುದು ಬೆಳಕಿಗೆ ಬಂದಿದ್ದರಿಂದ ಅಶೋಕ್ ರೆಡ್ಡಿಯನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕುಮಾರ್ ನನ್ನು ಬಂಧನ ಮಾಡಿದ್ದಾರೆ. ಆತನ ವಿರುದ್ದ ಹಲವು ಸೆಕ್ಷನ್ ಗಳಡಿ ದೂರು ದಾಖಲಿಸಿದ್ದಾರೆ. ಜೊತೆಗೆ ಪ್ರಕರಣದ ಕುರಿತು ಮತ್ತಷ್ಟು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.