HomeStateCrime - ಭಯಾನಕ ಘಟನೆ: ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ, ಹೆಂಡತಿಯ ರುಂಡ ಹಿಡಿದು ಠಾಣೆಗೆ...

Crime – ಭಯಾನಕ ಘಟನೆ: ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ, ಹೆಂಡತಿಯ ರುಂಡ ಹಿಡಿದು ಠಾಣೆಗೆ ಬಂದ ಪತಿ…!

Crime –  ಪ್ರೀತಿಸಿ ಮದುವೆಯಾದ ಜೋಡಿ, ಅಕ್ರಮ ಸಂಬಂಧದ ಕಾರಣಕ್ಕೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೊಬ್ಬ, ಆಕೆಯ ರುಂಡವನ್ನು ಕತ್ತರಿಸಿ ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಭಯಾನಕ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಈ ದೃಶ್ಯ ನೋಡಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

A man surrenders at Suryanagar police station near Bengaluru with his wife's severed head after killing her over an alleged illicit affair - Crime
ಸಾಂದರ್ಭಿಕ ಚಿತ್ರ

Crime –  ಪತ್ನಿಯ ರುಂಡದೊಂದಿಗೆ ಠಾಣೆಗೆ ಶರಣಾದ ಪತಿ!

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಶಂಕರ್ ಎಂಬಾತ, ತನ್ನ 26 ವರ್ಷದ ಪತ್ನಿ ಮಾನಸಳ ರುಂಡವನ್ನು ಕತ್ತರಿಸಿ, ಅದನ್ನು ತನ್ನ ಬೈಕ್‌ನಲ್ಲಿ ಇರಿಸಿಕೊಂಡು ಸೂರ್ಯನಗರ ಪೊಲೀಸ್ ಠಾಣೆಗೆ ತಂದಿದ್ದಾನೆ. ಠಾಣೆಯೊಳಗೆ ರುಂಡದೊಂದಿಗೆ ಬಂದ ಶಂಕರ್‌ನನ್ನು ನೋಡಿ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸುತ್ತಮುತ್ತಲ ಪ್ರದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Crime –  ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಾನಸ

ಶಂಕರ್ ಮತ್ತು ಮಾನಸ ಹಲವು ವರ್ಷಗಳ ಕಾಲ ಪ್ರೀತಿಸಿ ಮಂಡ್ಯದಲ್ಲಿ ಮದುವೆಯಾಗಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಇವರು ವಾಸಕ್ಕೆ ಬಂದಿದ್ದರು. ಜೂನ್ 3ರಂದು ರಾತ್ರಿ ಶಂಕರ್ ಕೆಲಸದ ನಿಮಿತ್ತ ಮನೆಯಿಂದ ಹೊರಗಿದ್ದ. ಆದರೆ, ಕೆಲಸ ಬೇಗ ಮುಗಿದಿದ್ದರಿಂದ ತಡರಾತ್ರಿಯೇ ಮನೆಗೆ ಹಿಂತಿರುಗಿದ್ದಾನೆ. ಆಗ ಅವನಿಗೆ ಆಘಾತ ಕಾದಿತ್ತು. ಮನೆಯಲ್ಲಿ ಮಾನಸ ಬೇರೊಬ್ಬ ವ್ಯಕ್ತಿಯೊಂದಿಗೆ ಇರುವುದು ಕಂಡುಬಂದಿದೆ. ಇದನ್ನು ಕಂಡು ಕೆರಳಿದ ಶಂಕರ್, ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ಆ ನಂತರ “ನನಗೆ ನೀನು ಬೇಡ, ಅವನ ಜೊತೆಗೇ ಹೋಗು” ಎಂದು ಹೇಳಿ ಮಾನಸಳನ್ನು ಕಳುಹಿಸಿದ್ದಾನೆ.

A man surrenders at Suryanagar police station near Bengaluru with his wife's severed head after killing her over an alleged illicit affair - Crime

Read this also : ತಾಯಿ ಎಂಬ ಸಂಬಂಧಕ್ಕೇ ಕಳಂಕ: ಸ್ವಂತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಲು ಸಹಕರಿಸಿದ ಅಮ್ಮ..!

Crime –  ಪದೇ ಪದೇ ಕಾಡಿದ ಮಾನಸ, ತಲೆ ಕಡಿದು ಪೊಲೀಸರಿಗೆ ಶರಣಾದ ಪತಿ

ಮಾನಸ, ಪ್ರಿಯಕರನ ಜೊತೆ ಹೋದ ನಂತರವೂ ಪದೇ ಪದೇ ಶಂಕರ್ ಮನೆಗೆ ಬಂದು ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ. ಶುಕ್ರವಾರ ರಾತ್ರಿ ಕೂಡ ಮಾನಸ ಮನೆಗೆ ಬಂದು ಜಗಳ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಶಂಕರ್, ಮಾನಸಳನ್ನು ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ತಲೆಯನ್ನು ಕಡಿದು ತನ್ನ ಬೈಕ್ ಮೇಲೆ ಇರಿಸಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸೂರ್ಯನಗರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular