ಸಂಶಯ, ದೆವ್ವದ ಹಾಗೆ.. ಅದು ಒಮ್ಮೆ ಮನಸ್ಸಿಗೆ ಹೊಕ್ಕರೆ ಸುಂದರವಾದ ಸಂಸಾರವನ್ನೇ ಸುಟ್ಟು ಬೂದಿ ಮಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಬಿಹಾರದಲ್ಲಿ ನಡೆದ ಈ ಘೋರ ಘಟನೆ. ತಾನು ಕಪ್ಪಗಿದ್ದರೂ ಮಗು ಮಾತ್ರ ಬೆಳ್ಳಗೆ ಹುಟ್ಟಿದೆ ಎಂಬ ಒಂದೇ ಒಂದು ಕಾರಣಕ್ಕೆ, ಸ್ನೇಹಿತರ ಹೀಯಾಳಿಕೆಯನ್ನು ತಾಳಲಾರದೆ ಪತಿಯೊಬ್ಬ ತನ್ನ ಹೆಂಡತಿಯನ್ನೇ ಅತಿ ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಬಿಹಾರದ ಕಟಿಹಾರ್ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ನಡೆದ ಈ ಘಟನೆ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

Crime – ಮಗುವಿನ ಬಣ್ಣವೇ ಮುಳುವಾಯಿತು
ಅಜಮ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಲ್ಕಿ ಗ್ರಾಮದ ಸುಕುಮಾರ್ ದಾಸ್ ಮತ್ತು ಮೌಸುಮಿ ದಾಸ್ ದಂಪತಿಗೆ ಮೂರು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಆದರೆ ಇಲ್ಲಿ ವಿಧಿಯಾಟ ಬೇರೆಯೇ ಇತ್ತು. ತಂದೆ ಸುಕುಮಾರ್ ಕಪ್ಪಗಿದ್ದರೆ, ಹುಟ್ಟಿದ ಮಗು ಮಾತ್ರ ಹಾಲಿನಂತೆ ಬೆಳ್ಳಗಿತ್ತು.
ಇದೇ ವಿಷಯವನ್ನು ಇಟ್ಟುಕೊಂಡು ಸುಕುಮಾರ್‌ನ ಸ್ನೇಹಿತರು ಮತ್ತು ನೆರೆಹೊರೆಯವರು ಅವನನ್ನು ಚುಚ್ಚಿ ಮಾತನಾಡಲು ಶುರುಮಾಡಿದ್ದರು. “ನೀನು ನೋಡಿದರೆ ಕಪ್ಪಗಿದ್ದೀಯಾ.. ನಿನಗೆ ಇಷ್ಟು ಬೆಳ್ಳಗಿರೋ ಮಗು ಹೇಗೆ ಹುಟ್ಟಿತು?” ಎಂಬ ಅವರ ಮಾತುಗಳು ಸುಕುಮಾರ್ ಮನಸ್ಸಿನಲ್ಲಿ ಅನುಮಾನದ ವಿಷಬೀಜವನ್ನು ಬಿತ್ತಿದವು.
Crime – ದಿನನಿತ್ಯದ ಜಗಳ ಕೊಲೆಯಲ್ಲಿ ಅಂತ್ಯ
ಸ್ನೇಹಿತರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ಸುಕುಮಾರ್, ಪತ್ನಿ ಮೌಸುಮಿಯ ಶೀಲದ ಬಗ್ಗೆ ಅನುಮಾನ ಪಡಲು ಶುರುಮಾಡಿದನು. “ಈ ಮಗುವಿನ ನಿಜವಾದ ತಂದೆ ಯಾರು?” ಎಂದು ದಿನನಿತ್ಯ ಜಗಳವಾಡುತ್ತಿದ್ದನು. ಸುಮಾರು ಮೂರು ತಿಂಗಳುಗಳ ಕಾಲ ಈ ರಂಪಾಟ ನಡೆಯಿತು. ಮೌಸುಮಿಯ ತಂದೆ ಅಳಿಯನಿಗೆ ಬುದ್ಧಿ ಹೇಳಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಗಂಡನ ಕಾಟ ತಾಳಲಾರದೆ ಮೌಸುಮಿ ತನ್ನ ತವರು ಮನೆಗೆ ತೆರಳಿದ್ದಳು. Read this also : “ಸರ್ ನಾನು ಗರ್ಭಿಣಿ ಪ್ಲೀಸ್ ಬಿಟ್ಬಿಡಿ” – ನಡುರಸ್ತೆಯಲ್ಲಿ ಅಂಗಲಾಚಿದರೂ ಕರಗಲಿಲ್ಲ ಪೊಲೀಸ್ ಮನಸ್ಸು! ವೈರಲ್ ಆದ ವಿಡಿಯೋ ..!
Crime – ರಾತ್ರಿ ನಡೆದ ರಕ್ತಚರಿತ್ರೆ
ಅನುಮಾನದ ಭೂತ ಸುಕುಮಾರ್‌ನನ್ನು ಸುಮ್ಮನಿರಲು ಬಿಡಲಿಲ್ಲ. ಹೆಂಡತಿಯ ಮೇಲಿನ ಸಿಟ್ಟು ಮತ್ತು ದ್ವೇಷದೊಂದಿಗೆ ಆತ ಅತ್ತೆಯ ಮನೆಗೆ ಹೋದನು. ರಾತ್ರಿ ಎಲ್ಲರೂ ಊಟ ಮಾಡಿ ನಿದ್ದೆಗೆ ಜಾರಿದ ನಂತರ, ಸುಕುಮಾರ್ ತನ್ನ ಕ್ರೌರ್ಯವನ್ನು ಮೆರೆದಿದ್ದಾನೆ. ಗಾಢ ನಿದ್ದೆಯಲ್ಲಿದ್ದ ಪತ್ನಿ ಮೌಸುಮಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳ ಮೇಲೆ ದಾಳಿ ಮಾಡಿ ರಾಕ್ಷಸನಂತೆ ವರ್ತಿಸಿದ್ದಾನೆ.

Crime – ಬೆಚ್ಚಿಬಿದ್ದ ಕುಟುಂಬಸ್ಥರು
ಮರುದಿನ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲೇ ಮೌಸುಮಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದಳು. ಇದನ್ನು ಕಂಡು ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಕೃತ್ಯ ಎಸಗಿದ ಪಾಪಿ ಪತಿ ಅಷ್ಟರಲ್ಲಾಗಲೇ ಅಲ್ಲಿಂದ ಪರಾರಿಯಾಗಿದ್ದನು. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ತಲೆಮರೆಸಿಕೊಂಡಿರುವ ಸುಕುಮಾರ್ ದಾಸ್‌ಗಾಗಿ ಬಲೆ ಬೀಸಿದ್ದಾರೆ. ಸಮಾಜದ ಚುಚ್ಚು ಮಾತುಗಳು ಮತ್ತು ಗಂಡನ ಸಂಶಯಕ್ಕೆ ಬಲಿಯಾದ ಮೌಸುಮಿಯ ಸಾವು ನಿಜಕ್ಕೂ ದುರಂತ.
