Friday, February 13, 2026
HomeStateCrime : ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಹೈಡ್ರಾಮಾ: ಪಿಜಿ ಬಳಿ ಯುವತಿಯನ್ನು ಎಳೆದಾಡಿ ಹೊಡೆದ ಇನ್‌ಸ್ಟಾ ‘ಫ್ರೆಂಡ್’!

Crime : ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಹೈಡ್ರಾಮಾ: ಪಿಜಿ ಬಳಿ ಯುವತಿಯನ್ನು ಎಳೆದಾಡಿ ಹೊಡೆದ ಇನ್‌ಸ್ಟಾ ‘ಫ್ರೆಂಡ್’!

ಸೋಶಿಯಲ್ ಮೀಡಿಯಾ ಎಂಬುದು ಇಂದು ಎಷ್ಟು ಉಪಯುಕ್ತವೋ, ಅಷ್ಟೇ ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಬ್ಬ ‘ಪ್ರೀತಿಸುವಂತೆ’ ಒತ್ತಾಯಿಸಿ, ಯುವತಿಯ ಮೇಲೆ ನಡುರಸ್ತೆಯಲ್ಲೇ ಅಮಾನುಷವಾಗಿ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಕಂಬಿ (Crime) ಎಣಿಸುವಂತೆ ಮಾಡಿದ್ದಾರೆ.

CCTV capture of Instagram friend assaulting a young woman near a PG in Bengaluru - Crime News

Crime – ನಡೆದಿದ್ದೇನು? ಇನ್ಸ್ಟಾಗ್ರಾಮ್ ಪರಿಚಯ ಕಿರುಕುಳಕ್ಕೆ ತಿರುಗಿದ್ದು ಹೇಗೆ?

ಬಂಧಿತ ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ಈತನಿಗೆ ಸಂತ್ರಸ್ತ ಯುವತಿಯ ಪರಿಚಯವಾಗಿದ್ದು 2024ರಲ್ಲಿ, ಅದು ಕೂಡ ಇನ್ಸ್ಟಾಗ್ರಾಮ್ ಮೂಲಕ. ಆರಂಭದಲ್ಲಿ ಫೋನ್ ಕರೆ ಮತ್ತು ಮೆಸೇಜ್‌ಗಳ ಮೂಲಕ ಸಾಮಾನ್ಯವಾಗಿದ್ದ ಇವರ ಸ್ನೇಹ, ದಿನಕಳೆದಂತೆ ವಿಕೋಪಕ್ಕೆ ತಿರುಗಿದೆ. ಆರೋಪಿ ನವೀನ್ ಕುಮಾರ್ ಯುವತಿಯನ್ನು “ನನ್ನನ್ನು ಪ್ರೀತಿಸಲೇಬೇಕು” ಎಂದು ಬಲವಂತ ಮಾಡುತ್ತಿದ್ದ ಎನ್ನಲಾಗಿದೆ. ಇದಕ್ಕೆ ಯುವತಿ ಒಪ್ಪದಿದ್ದಾಗ, (Crime) ಇಬ್ಬರ ನಡುವೆ ಪ್ರೀತಿ ಮತ್ತು ಹಣಕಾಸಿನ ವಿಚಾರವಾಗಿ ಪದೇ ಪದೇ ಗಲಾಟೆಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಸೋಮವಾರ ಸಂಜೆ ಯುವತಿ ತಂಗಿದ್ದ ಜ್ಞಾನಭಾರತಿಯ ಪಿ.ಜಿ (PG) ಬಳಿ ಕಾರಿನಲ್ಲಿ ಬಂದ ನವೀನ್, ಹಾರನ್ ಹೊಡೆದು ಆಕೆಯನ್ನು ಹೊರಗೆ ಬರುವಂತೆ ಸತಾಯಿಸಿದ್ದಾನೆ. ಯುವತಿ ಮತ್ತು ಆಕೆಯ ಸ್ನೇಹಿತೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರೂ ಕಿರಾತಕ ನವೀನ್ ಮಾತ್ರ ಸುಮ್ಮನಾಗಿಲ್ಲ.ಯುವತಿ ಒಳಗೆ ಹೋಗಲು ಯತ್ನಿಸಿದಾಗ ಆಕೆಯ ವ್ಯಾನಿಟಿ ಬ್ಯಾಗ್ ಕಸಿದುಕೊಂಡಿದ್ದಾನೆ. ಬ್ಯಾಗ್ ಚೆಕ್ ಮಾಡಿ, ನಂತರ ಯುವತಿಯನ್ನು ಹಿಡಿದು ಎಳೆದಾಡಿ (Crime) ಎರಡು ಬಾರಿಗೂ ಹೆಚ್ಚು ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.

CCTV capture of Instagram friend assaulting a young woman near a PG in Bengaluru - Crime News

ಈ ಇಡೀ ಘಟನೆಯ ಭಯಾನಕ ದೃಶ್ಯಗಳು ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. Read this also : ಅಪ್ಪನಿಗೆ ಹೆದರಿ 8ನೇ ಮಹಡಿಯಿಂದ ಹಾರಿದ ಯುವತಿ: ಹೈದರಾಬಾದ್‌ ನಲ್ಲಿ ನಡೆದ ಭೀಕರ ದುರಂತ!

ಪೊಲೀಸರ ತ್ವರಿತ ಕಾರ್ಯಾಚರಣೆ

ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ನವೀನ್ ಕುಮಾರ್‌ನನ್ನು ಜ್ಞಾನಭಾರತಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, (Crime) ಘಟನೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular