ಜೀವನದಲ್ಲಿ ನಾವು ಮಾಡುವ ಒಂದು ಸಣ್ಣ ತಪ್ಪು ಅಥವಾ ಆ ಕ್ಷಣದ ಭಯ ನಮ್ಮ ಇಡೀ ಬದುಕನ್ನೇ ಕೊನೆಗಾಣಿಸಿಬಿಡಬಹುದು. ಹೈದರಾಬಾದ್ (Hyderabad) ನಲ್ಲಿ ಇಂತಹದ್ದೇ ಒಂದು ಕರುಣಾಜನಕ ಘಟನೆ ನಡೆದಿದೆ. ಅಪ್ಪನಿಗೆ ಸಿಕ್ಕಿಬೀಳುವ ಭಯದಲ್ಲಿ ಗೆಳೆಯನ ಜೊತೆ ಬಾಲ್ಕನಿಯಿಂದ ತಪ್ಪಿಸಿಕೊಳ್ಳಲು ಹೋಗಿ 22 ವರ್ಷದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ.

Hyderabad – ನಡೆದಿದ್ದೇನು?
ಮೃತ ಯುವತಿಯನ್ನು ಸಕೀನಾ ಬೇಗಂ (22) ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ವಾರ ಹೈದರಾಬಾದ್‌ನ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಕೀನಾ ತನ್ನ ತಂದೆಗೆ ಸೇರಿದ, ಯಾರು ವಾಸವಿರದ ಖಾಲಿ ಫ್ಲ್ಯಾಟ್‌ನ ಕೀಯನ್ನು ಯಾರಿಗೂ ತಿಳಿಯದಂತೆ ಪಡೆದುಕೊಂಡಿದ್ದಳು. ತನ್ನ ಗೆಳೆಯ ಅಲಿ ಎಂಬಾತನ ಜೊತೆ ಸಮಯ ಕಳೆಯಲು ಆಕೆ ಆ ಫ್ಲ್ಯಾಟ್‌ಗೆ ಬಂದಿದ್ದಳು.
ಕ್ಷಣಮಾತ್ರದಲ್ಲಿ ಶುರುವಾದ ಆತಂಕ
ಇಬ್ಬರೂ ಫ್ಲ್ಯಾಟ್‌ನ ಒಳಗಿದ್ದಾಗ, ಅನಿರೀಕ್ಷಿತವಾಗಿ ಸಕೀನಾಳ ತಂದೆ ಅಲ್ಲಿಗೆ ಬಂದಿದ್ದಾರೆ. ಹೊರಗಿನಿಂದ ಬಾಗಿಲು ತಟ್ಟಿದಾಗ ಒಳಗೆ ಲಾಕ್ ಆಗಿರುವುದನ್ನು ಕಂಡು ತಂದೆಗೆ ಅನುಮಾನ ಬಂದಿದೆ. (Hyderabad) ಅವರು ಬಾಗಿಲು ತೆಗೆಯುವಂತೆ ಒತ್ತಾಯಿಸಿದ್ದಾರೆ. ಬಾಗಿಲಲ್ಲಿ ನಿಂತಿರುವುದು ತಂದೆಯೇ ಎಂದು ಅರಿತ ಸಕೀನಾ ಮತ್ತು ಆಕೆಯ ಗೆಳೆಯ ಅಲಿ ಇಬ್ಬರೂ ವಿಪರೀತ ಗಾಬರಿಗೊಂಡಿದ್ದಾರೆ. ತಂದೆಗೆ ಮುಖ ತೋರಿಸಲು ಹೆದರಿ, ಹೇಗಾದರೂ ಮಾಡಿ ಅಲ್ಲಿಂದ ಪರಾರಿಯಾಗಲು ನಿರ್ಧರಿಸಿದ್ದಾರೆ.
ಎಂಟನೇ ಮಹಡಿಯಿಂದ ಕೆಳಕ್ಕೆ ಇಳಿಯುವ ಸಾಹಸ
ಫ್ಲ್ಯಾಟ್ ಎಂಟನೇ ಮಹಡಿಯಲ್ಲಿದ್ದ ಕಾರಣ (Hyderabad) ಹೊರಗೆ ಹೋಗಲು ಬೇರೆ ದಾರಿಯಿರಲಿಲ್ಲ. ಹೀಗಾಗಿ ಇಬ್ಬರೂ ಬಾಲ್ಕನಿಯ ಮೂಲಕ ಕೆಳಗಿನ ಮಹಡಿಗೆ ಇಳಿಯಲು ನಿರ್ಧರಿಸಿದ್ದಾರೆ. ಅಲಿ ಯುವತಿಯ ಕೈ ಹಿಡಿದು ಆಕೆಯನ್ನು ಎಂಟನೇ ಮಹಡಿಯಿಂದ ಏಳನೇ ಮಹಡಿಯ ಬಾಲ್ಕನಿಗೆ ಇಳಿಸಲು ಪ್ರಯತ್ನಿಸಿದ್ದಾನೆ. ಆದರೆ, ದುರಂತವೆಂದರೆ ಈ ಪ್ರಯತ್ನದ ವೇಳೆ ಸಕೀನಾಳ ಹಿಡಿತ ತಪ್ಪಿದೆ. ಎಂಟನೇ ಮಹಡಿಯಿಂದ ನೇರವಾಗಿ ಕೆಳಗೆ ಬಿದ್ದ ಆಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. Read this also : ಅಮ್ಮನ ಮುಗ್ಧ ನಗು, ಅಪ್ಪನ ಮೌನ.. ಕಣ್ಣೀರು ತರಿಸುತ್ತೆ ರೈಲ್ವೆ ಸ್ಟೇಷನ್‌ನ ಈ ವೈರಲ್ ವಿಡಿಯೋ

ಗೆಳೆಯನ ವಿರುದ್ಧ ಪ್ರಕರಣ ದಾಖಲು
ಮಗಳ ಸಾವಿನಿಂದ ಆಘಾತಕ್ಕೊಳಗಾದ (Hyderabad) ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ಕೊಲ್ಲೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಕೀನಾ ಸಾವಿಗೆ ಕಾರಣವಾದ ಆರೋಪದ ಮೇಲೆ ಆಕೆಯ ಗೆಳೆಯ ಅಲಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
