Crime – ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಆರೋಪಿಗಳಾದ ನಾಲ್ವರು ಪುರುಷರು ಬಾಲಕಿಯನ್ನು ಅಪಹರಿಸಿ ಎರಡು ತಿಂಗಳ ಕಾಲ ನಿರಂತರ ಲೈಂಗಿಕ ಹಿಂಸೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಇತರ ಮೂವರು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತ ಬಾಲಕಿಯ ಪೋಷಕರು ನೀಡಿದ ದೂರಿನಂತೆ ಜ.2 ರಂದು ಬಾಲಕಿಯನ್ನು ಅಪಹರಿಸಲಾಗಿತ್ತು ಎನ್ನಲಾಗಿದೆ.
Crime – ಅಪಹರಣ ಮತ್ತು ದೌರ್ಜನ್ಯ
ಸಂತ್ರಸ್ತೆಯ ಕುಟುಂಬ ನೀಡಿದ ದೂರಿನ ಪ್ರಕಾರ, ಜನವರಿ 2ರಂದು ಬಾಲಕಿ ಟೈಲರ್ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ಆಕೆಯನ್ನು ಬಲವಂತವಾಗಿ ಕಾರಿಗೆ ಎಳೆದೊಯ್ದಿದ್ದಾರೆ. ಸಲ್ಮಾನ್, ಜುಬೈರ್, ರಶೀದ್ ಮತ್ತು ಆರಿಫ್ ಎಂಬ ಆರೋಪಿಗಳು ಬಾಲಕಿಗೆ ಅಮಲುಪದಾರ್ಥ ನೀಡಿ ಪ್ರಜ್ಞಾಹೀನಗೊಳಿಸಿ, ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಕೋಣೆಯಲ್ಲಿ ಬಂದು ಹಾಕಿ ನಿರಂತರ ಹಲ್ಲೆ ನಡೆಸಿದ್ದಾರೆ. ಭಗತ್‌ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಸಂಜಯ್ ಕುಮಾರ್ ಪಾಂಚಲ್ ಮಾತನಾಡಿ, ಬಾಲಕಿಯನ್ನು ಬಂಧಿಸಿದಾಗ ಆಕೆಯ ಕುಟುಂಬ ಸದಸ್ಯರು ನೀಡಿದ ದೂರಿನ ಪ್ರಕಾರ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Crime – ಓಂ ಟ್ಯಾಟೂ ಆಸಿಡ್ ನಿಂದ ಸುಟ್ಟ ಕಾಮುಕರು
ಇನ್ನೂ ಸಂತ್ರಸ್ತೆಯ ಕೈಯಲ್ಲಿದ್ದ ಓಂ ಟ್ಯಾಟೂವನ್ನು ಆಸಿಡ್ ನಿಂದ ಸುಟ್ಟು, ಬಲವಂತವಾಗಿ ಮಾಂಸವನ್ನು ತಿನ್ನಿಸಿ ತುಂಬಾನೆ ಚಿತ್ರಹಿಂಸೆ ನೀಡಿದ್ದಾರಂತೆ. ಆದರೆ ಕಾಮುಕರಿಂದ ತಪ್ಪಿಸಿಕೊಂಡ ಬಾಲಕಿ ಮಾ.2 ರಂದು ಮನೆಗೆ ವಾಪಸ್ಸಾಗಿದ್ದಾಳೆ. ಕೂಡಲೇ ಆಕೆಯ ಕುಟುಂಬಸ್ಥರು ಪೊಲಿಸರಿಗೆ ದೂರು ನೀಡಿದ್ದಾರೆ. ಬಳಿಕ ಭಗತ್ ಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಕುನ್ವರ್ ಆಕಾಶ್ ಸಿಂಗ್ ಪ್ರಕರಣವನ್ನು ದೃಢಪಡಿಸಿದ್ದು, ಆರೋಪಿಗಳಲ್ಲಿ ಒಬ್ಬನಾದ ಸಲ್ಮಾನ್ ಅನ್ನು ಮಂಗಳವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇತರ ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯ ನಡೆಸಲಾಗುತ್ತಿದೆ. ಇದೀಗ, ಪ್ರಕರಣವನ್ನು ಹಿಂಪಡೆಯಲು ಬಾಲಕಿಯ ಕುಟುಂಬದ ಮೇಲೆ ಬೆದರಿಕೆ ಮತ್ತು ಒತ್ತಡ ಹೇರಲಾಗುತ್ತಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.