ಬಾಗೇಪಲ್ಲಿ: ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪ್ರೋತ್ಸಾಹ ಧನ 10 ರೂ.ಗಳಿಗೆ ಏರಿಕೆ ಮಾಡುವಂತೆ ಡಾ.ಎಂ.ಎಸ್ ಸ್ವಾಮಿನಾಥನ್ ಆಯೋಗದ ಸಿಫಾರಸಿನಂತೆ ಲೀಟರ್ ಹಾಲಿಗೆ 50 ರೂ.ಗಳನ್ನು ನಿಗಧಿಗೊಳಿಸುವುದು ಸೇರಿದಂತ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಪುತ್ಥಳಿ ಮುಂಭಾಗದಲ್ಲಿ ಪ್ರತಿಭಟನೆ (CPIM Protest) ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡರು ಕಳೆದ 7 ತಿಂಗಳಿಂದ ರೈತರಿಗೆ ನೀಡಬೇಕಾಗಿರುವ ಪ್ರೋತ್ಸಾಹ ಧನವನ್ನು ತಡೆಹಿಡಿದಿರುವ ಪರಿಣಾಮ ಹೈನುಗಾರಿಕೆಯನ್ನೇ ನಂಭಿ ಜೀವನ ನಡೆಸುತ್ತಿರುವ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಹಕಾರಿ ತತ್ವದಲ್ಲಿ ಬಲಗೊಂಡಿರುವ ನಂದಿನಿ ಸಂಸ್ಥೆಯ ಮಾರುಕಟ್ಟೆಯನ್ನು ವಿಸ್ತರಿಸಿ ಹಾಲು ಉತ್ಪಾಧಕರನ್ನು ಸಂರಕ್ಷಿಸಿ ಹೈನುಗಾರಿಕೆಯನ್ನು ಉಳಿಸಿಬೇಕಾಗಿದ್ದ ಸರ್ಕಾರವೇ ಈ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ಅವಕಾಶವನ್ನು ಕೊಟ್ಟಂತಾಗುತ್ತದೆ ಎಂದು ಆರೋಪಿಸಿದರು.
ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವಂತೆ, ಪ್ರತಿ ಜಿಲ್ಲೆಗೊಂದು ಕೆ.ಎಂ.ಎಫ್ ನಿಂದ ಹಾಲು ಉತ್ಪಾಧಕರ ಮಕ್ಕಳಿಗೆ ವಸತಿ ವಿದ್ಯಾರ್ಥಿನಿಲಯ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ವೇಳೆ (CPIM Protest) ಸಿಪಿಐ(ಎಂ) ಪಕ್ಷದ ಮುಖಂಡರಾದ ಚೆನ್ನರಾಯಪ್ಪ, ಅಶ್ವಥಪ್ಪ, ನರಸಿಂಹರೆಡ್ಡಿ, ರಘುನಾಥರೆಡ್ಡಿ, ಮುನಿವೆಂಕಟಪ್ಪ, ಜಿ.ಕೃಷ್ಣಪ್ಪ, ಅಂಜಿನಪ್ಪ, ರಾಮಾಂಜಿ ಮತ್ತಿತರರು ಇದ್ದರು.