Congress – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ವಿರುದ್ದ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿರುವುದು ಸರಿಯಲ್ಲ. ಅವರ ಮೇಲಿನ ಆರೋಪ ಸಾಬೀತು ಮಾಡಿದರೇ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ರಾಜ್ಯ ಯೂತ್ ಕಾಂಗ್ರೇಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ತಿಳಿಸಿದರು.

ಈ ಕುರಿತು ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಯೂತ್ ಕಾಂಗ್ರೇಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ನಾವು ಉಪನಿಬಂಧಕರು ನೀಡಿದ ಮತದಾರರ ಪಟ್ಟಿಯಂತೆ ಗೆಲುವು ಸಾಧಿಸಿದ್ದೇವೆ. ಆದರೆ ನಮ್ಮ ಪ್ರತಿ ಸ್ಪರ್ಧಿಗಳು ಕೋರ್ಟ್ ಮೂಲಕ ಅವರಿಗೆ ಬೇಕಾದವರನ್ನು ಮತದಾರರ ಪಟ್ಟಿಗೆ ಸೇರಿಸಿ ಮತದಾನದ ಹಕ್ಕು ತಂದಿದ್ದಾರೆ. ಈ ಕಾರಣದಿಂದ ಅವರು ಜಯಗಳಿಸಿದ್ದಾರೆ. ಈ ಸಂಬಂಧ ನಾವು ಜಿಲ್ಲಾ ಉಪನಿಬಂಧಕರಿಗೆ ದೂರು ನೀಡುತ್ತೇವೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ನಮ್ಮ ಪ್ರತಿಸ್ಪರ್ಧಿ ಬೆಂಬಲಿಗರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ವಿರುದ್ದ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಸತ್ಯಕ್ಕೆ ದೂರವಾದ ಮಾತುಗಳು. ಅವರು ನನ್ನ ಪರವಾಗಿ ಮತಯಾಚನೆ ಬಂದಿಲ್ಲ. ಇಬ್ಬರೂ ಒಂದೇ ಪಕ್ಷದ ಬೆಂಬಲಿತರಾದ ಕಾರಣ ನಾನು ಯಾರ ಪರವಾಗಿ ಮತ ಕೇಳೊಲ್ಲ. ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಬರುವುದಿಲ್ಲ. ನಾವು ಸೂಚಕರನ್ನು ಸಹಿ ಮಾಡಿಸಿರೋದು ಸಂಘದ ಷೇರುದಾರರದ್ದು. ಅವರು ಬಿಜೆಪಿ ಪಕ್ಷದವರಿರಬಹುದು. ಆದರೆ ಷೇರುದಾರರು. ಆ ರೀತಿಯಾಗಿ ಹೇಳುವುದಾದರೇ ಅವರಿಗೆ ಸೂಚಕರಾಕಿರೋದು ಸಹ ಬಿಜೆಪಿ ಕಾರ್ಯಕರ್ತರೇ. ಒಬ್ಬರ ವಿರುದ್ದ ಆರೋಪ ಮಾಡುವ ಮೊದಲು ಅವರು ಏನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಳಿ ಎಂದರು.