Congress – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ಕಾರಣದಿಂದಲೇ ಒಂದೇ ಪಕ್ಷದ ಬೆಂಬಲದಿಂದ ಇಬ್ಬರು ಸ್ಪರ್ಧೆ ಮಾಡಬೇಕಾಯ್ತು ಎಂದು ಮಾಜಿ ಯೂತ್ ಕಾಂಗ್ರೇಸ್ ಅಧ್ಯಕ್ಷ ಯರಲಕ್ಕೇನಹಳ್ಳಿ ಮಂಜುನಾಥ್ ಗಂಭೀರ ಆರೋಪ ಮಾಡಿದರು.
ಮಾ.1 ರಂದು ನಡೆದ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಮೂರು ಮಂದಿ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಮೂರೂ ಕ್ಷೇತ್ರಗಳ ಫಲಿತಾಂಶ ತಡೆಹಿಡಿಯಲಾಗಿತ್ತು. ಇದೀಗ ಕೋರ್ಟ್‌ನ ಆದೇಶದಂತೆ ಮತಗಳನ್ನು ಎಣಿಕೆ ಮಾಡಲಾಗಿದ್ದು, ಫಲಿತಾಂಶ ಹೊರಬಂದಿದೆ. ತುಂಬಾ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದ ಬೀಚಗಾನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಲ್ಲಿ ಪ್ರಭಾವತಿ ಹಾಗೂ ಸರಸ್ಪತ್ತಮ್ಮ ಇಬ್ಬರೂ ಕಾಂಗ್ರೇಸ್ ಪಕ್ಷದ ಬೆಂಬಲಿತರಾಗಿದ್ದು, ಇವರಲ್ಲಿ ಸರಸ್ಪತಮ್ಮ ರವರು ಜಯಗಳಿಸಿದ್ದಾರೆ.

ಇನ್ನೂ ಸರಸ್ಪತ್ತಮ್ಮ ರವರಿಗೆ ಬೆಂಬಲಿಸಿದ ಮಾಜಿ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ್ ವಿಜಯೋತ್ಸವದ ವೇಳೆ ಮಾತನಾಡಿ, ಬೀಚಗಾನಹಳ್ಳಿ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಬೆಂಬಲದೊಂದಿಗೆ ಸರಸ್ಪತ್ತಮ್ಮ ರವರನ್ನು ಸ್ಪರ್ಧೆ ಮಾಡುವಂತ ಶಾಸಕರು ಸೂಚನೆ ನೀಡಿದ್ದರು. ಆದರೂ ಸಹ ಹಾಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಒಳ ರಾಜಕೀಯ ಮಾಡಿ ಶಾಸಕರು ಸೂಚನೆ ಮಾಡಿರುವ ಹೆಸರನ್ನು ಪ್ರಸ್ತಾಪ ಮಾಡದೇ ಒಂದೇ ಕ್ಷೇತ್ರದಿಂದ ಇಬ್ಬರು ಕಾಂಗ್ರೇಸ್ ಬೆಂಬಲಿತರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಮಾಡಿದ್ದಾರೆ. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತಾಲೂಕಿನ ಯುವ ಮುಖಂಡರು ಬೆಳೆಯಲು ಅವಕಾಶ ಮಾಡಿಕೊಡುತ್ತಿಲ್ಲ.
ನಮ್ಮ ವಿರುದ್ದವಾಗಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗೆ ಬೆಂಬಲ ಬಿಜೆಪಿ ಬೆಂಬಲಿತರು ಸೂಚಕರ ಸಹಿ ಹಾಕಿದ್ದಾರೆ. ಆದರೆ ಇದೀಗ ಸತ್ಯಕ್ಕೆ ಜಯವಾಗಿದೆ. ಆದ್ದರಿಂದ ಕೂಡಲೇ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಜೊತೆಗೆ ಕೂಡಲೇ ಕೆಪಿಸಿಸಿ ಅಧ್ಯಕ್ಷರಿಗೆ ಲಿಖಿತ ರೂಪದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ವಿರುದ್ದ ದೂರು ನೀಡುತ್ತೇವೆ ಎಂದು ಆಕ್ರೋಷ ಹೊರಹಾಕಿದರು.