Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ನೀಡಿದ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ….!

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ರವರು ಉತ್ತರ ಪ್ರದೇಶದಲ್ಲಿ ಚಪ್ಪಲಿ ಹೊಲಿಯುವ ಅಂಗಡಿಗೆ ಭೇಟಿ ನೀಡಿದ್ದಾರೆ. ಈ ಹಿಂದೆ ಸಹ ಬಿದಿ ಬದಿ ವ್ಯಾಪಾರಿಗಳ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಇದೀಗ ಉತ್ತರ ಪ್ರದೇಶದ ಚಮ್ಮಾರನ ಅಂಗಡಿಗೆ ಭೇಟಿ ನೀಡಿ ಮತ್ತೊಮ್ಮೆ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.

Rahul Gandhi visit street shop 1

ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ (Rahul Gandhi) ರವರು ತಮ್ಮ ವಿರುದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್ ಪುರದಲ್ಲಿರುವ ಸಂಸದರು ಹಾಗೂ ಶಾಸಕರ ನ್ಯಾಯಾಲಯಕ್ಕೆ ಹಾಜರಾಗಲು ಶುಕ್ರವಾರ ತೆರಳಿದ್ದರು. ಈ ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬುವವರ ಅಂಗಡಿಗೆ ದಿಢೀರ್‍ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ಚಮ್ಮಾರನ ನಿರ್ದೇಶನದಂತೆ ಚಪ್ಪಲಿಯನ್ನು ಸರಿಪಡಿಸುವ ಕೆಲಸ ಸಹ ಮಾಡಿದ್ದಾರೆ. ಇನ್ನೂ ಸುಮಾರು 40 ವರ್ಷದಿಂದ ರಾಮ್ ಚೈತ್ ಈ ಅಂಗಡಿಯಲ್ಲಿ ಚಮ್ಮಾರ ವೃತ್ತಿಯನ್ನು ಮಾಡುತ್ತಿದ್ದಾರೆ. ಅವರ ಅಂಗಡಿಯಲ್ಲಿ ರಾಹುಲ್ ಗಾಂಧಿ (Rahul Gandhi) 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಮ್ ಚೈತ್ ಕಷ್ಟಸುಖಗಳನ್ನು ಸಹ ಆಲಿಸಿದ್ದಾರೆ. ಬಳಿಕ ಇಬ್ಬರೂ ಪಾನೀಯ ಸೇವನೆ ಮಾಡಿದ್ದಾರೆ. ರಾಮ್ ಚೈತ್ ರವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಸಹ ರಾಹುಲ್ ಗಾಂಧಿಯವರು (Rahul Gandhi) ಇದೇ ಸಮಯದಲ್ಲಿ ನೀಡಿದ್ದಾರೆ ಎನ್ನಲಾಗಿದೆ.

ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ರಾಮ್ ಚೈತ್, ನಾನು (Rahul Gandhi) ರಾಹುಲ್ ಗಾಂಧಿರವರೊಂದಿಗೆ ನನ್ನ ಕೆಲಸಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಅವರಿಂದ ನನ್ನ ಕುಟುಂಬಕ್ಕೆ ಹಣಕಾಸಿನ ನೆರವು ಸಹ ಕೋರಿದ್ದೇನೆ. ಅಂಗಡಿಗೆ ಭೇಟಿ ನೀಡಿದ ಸಮಯದಲ್ಲಿ ಪಾದರಕ್ಷೆಗಳನ್ನು ಸರಿಮಾಡುವ ವಿಧಾನ ಸಹ ಕಲಿತುಕೊಂಡು ಚಪ್ಪಲಿ ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೂ ಈ ಕುರಿತು ಕಾಂಗ್ರೇಸ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಸಹ ಹಂಚಿಕೊಂಡಿದೆ.

Rahul Gandhi visit street shop

ಪ್ರತಿಪಕ್ಷ ನಾಯಕ (Rahul Gandhi) ರಾಹುಲ್ ಗಾಂಧಿಯವರು ದಾರಿಯಲ್ಲಿ ಕಾರನ್ನು ನಿಲ್ಲಿಸಿ ಬಡ ಚಮ್ಮಾರರ ಕುಟುಂಬವನ್ನು ಭೇಟಿಯಾಗಿದ್ದಾರೆ. ನಾವು ಇಂತಹ ಶ್ರಮಜೀವಿಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ಬೀದಿಗಳಿಂದ ಸಂಸತ್ತಿನವರೆಗೂ ಧ್ವನಿ ಎತ್ತುತ್ತಿದ್ದೇವೆ. ಅವರ ಪ್ರಸ್ತುತ ಸುರಕ್ಷಿತ ಹಾಗೂ ಭವಿಷ್ಯವನ್ನು ಸಮೃದ್ದಗೊಳಿಸುವುದು ನಮ್ಮ ಗುರಿ ಎಂದು ಕಾಂಗ್ರೇಸ್ ಪಕ್ಷ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top