ಹಾವು ಎಂದರೇ ಯಾರಿಗೆ ತಾನೇ ಭಯ ಇರೋಲ್ಲ ಹೇಳಿ. ಅದರಲ್ಲೂ ಕೆಲ ಹೆಣ್ಣು ಮಕ್ಕಳಿಗೆ ಸಣ್ಣ ಜಿರಳೆ, ಹಲ್ಲಿ ನೋಡಿದರೇ ಸಾಕು ಕಿರಿಚಾಡುತ್ತಾರೆ. ಅಂತಹುದರಲ್ಲಿ ಹಾವನ್ನು ನೋಡಿದರೇ ಸುಮನ್ನೆ ಇರ್ತಾರ ಹೇಳಿ. ಆದರೆ ಇಲ್ಲೊಬ್ಬ ಯುವತಿ ಮಾತ್ರ ಅದಕ್ಕೆ ತದ್ವಿರುದ್ದ ಎಂಬಂತೆ ಹಗ್ಗವನ್ನು ಹಿಡಿದಂತೆ ಹಾವನ್ನು ಹಿಡಿದುಕೊಂಡಿದ್ದಾಳೆ. ಕಾಲೇಜಿನ ಹುಡುಗಿಯೊಬ್ಬಳು ಧೈರ್ಯದಿಂದ ಹಾವೊಂದನ್ನು ಹಿಡಿದ ವಿಡಿಯೋ (Snake Video)ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸದ್ಯ ವೈರಲ್ ಆದ ವಿಡಿಯೋದಲ್ಲಿ ಕಾಲೇಜಿನ ಯುವತಿಯೊಬ್ಬಳು ತುಂಬಾ ಧೈರ್ಯದಿಂದ ನಾಗರಹಾವನ್ನು ಹಿಡಿಯುತ್ತಾಳೆ. ಈ ವಿಡಿಯೋ ನೋಡಿದರೇ ಮೈ ಜುಮ್ ಎನ್ನಿಸುತ್ತದೆ ಎನ್ನಬಹುದಾಗಿದೆ. ಅತ್ಯಂತ ಸರಳವಾಗಿ ಆ ಹಾವನ್ನು (Snake Video)ಹಿಡಿಯುತ್ತಾಳೆ. ಈ ಸಂಬಂಧ ವಿಡಿಯೋ ಒಂದನ್ನು introvert_hu_ji ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಾಲೇಜಿನ ಕ್ಯಾಂಪಸ್ ಒಂದರಲ್ಲಿ ದೈತ್ಯ ಗಾತ್ರದ ನಾಗರ ಹಾವು ನುಗ್ಗಿದೆ. ಹಾವನ್ನು (Snake Video) ನೋಡಿದ ವಿದ್ಯಾರ್ಥಿಗಳು ಭಯದಿಂದ ಓಡುತ್ತಾರೆ. ಆದರೆ ಆ ವಿದ್ಯಾರ್ಥಿಗಳಲ್ಲಿದ್ದ ಒಬ್ಬ ಯುವತಿ ಮಾತ್ರ ಧೈರ್ಯದಿಂದ ಪೊದೆಯೊಳಗಿದ್ದ ನಾಗರ ಹಾವಿನ ಬಾಲವನ್ನು ಹಿಡಿದು ಹೊರತೆಗೆದಿದ್ದಾಳೆ. ಆಕೆಯ (Snake Video) ಧೈರ್ಯ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಯುವತಿಯ ಕೈಯಿಂದ ಹಾವು ಬಿಡಿಸಿಕೊಳ್ಳಲು (Snake Video) ತುಂಬಾನೆ ಪ್ರಯತ್ನಿಸಿದೆ. ಆದರೂ ಯುವತಿ ಮಾತ್ರ ಭಯವಿಲ್ಲದೇ ಹಾವನ್ನು ಬಿಗಿಯಾಗಿ ಹಿಡಿದಿದ್ದಾಳೆ. ವಿಷಕಾರಿ ಹಾವನ್ನು ಹಿಡಿದ ರೀತಿ ನೋಡಿ ಅಲ್ಲಿದ್ದ ವಿದ್ಯಾರ್ಥಿಗಳೆಲ್ಲಾ ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಎಂಟು ಲಕ್ಷಕ್ಕೂ (Snake Video) ಅಧಿಕ ವೀಕ್ಷಣೆ ಕಂಡಿದೆ. ಜೊತೆಗೆ ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಏನ್ ಧೈರ್ಯ ಗುರು ಈ ಯುವತಿಗೆ, ಹಾವು ಹಿಡಿಯೋದರಲ್ಲಿ ತುಂಬಾ ಟ್ಯಾಲೆಂಟ್ (Snake Video) ಇದ್ದಾಳೆ ಎಂತಲೂ, ಈ ರೀತಿಯ ವಿಷಕಾರಿ ಹಾವುಗಳನ್ನು ಹಿಡಿಯಲು ಹೋಗಿ ಪ್ರಾಣದ ಮೇಲೆ ಎಳೆದುಕೊಳ್ಳಬೇಡಿ ಎಂದು ಎಚ್ಚರಿಕೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.