ಬಿಜೆಪಿ ಪಕ್ಷ ಪದೇ ಪದೇ ವಿಕಸಿತ ಭಾರತ ಎಂದು ಹೇಳುತ್ತಿರುತ್ತಾರೆ, ಆದರೆ ವಿಕಸಿತ ಭಾರತ ಅವರ ನೈಜ ವಿಚಾರ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ನುಡಿದಿದ್ದಾರೆ. ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗಲ್ಲ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜವಹಾರಲಾಲ್ ನೆಹರೂ ರವರ ಪುಣ್ಯ ಸ್ಮರಣೆ ಕಾಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷದ ವಿಕಸಿತ ಭಾರತದ ಹೇಳಿಕೆಯ ವಿರುದ್ದ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಬಿಜೆಪಿಯವರು ವಿಕಸಿತ ಭಾರತ ಎಂದು ಹೇಳುತ್ತಿರುತ್ತಾರೆ, ಅದರ ನೈಜ ವಿಚಾರ ಬೇರೆಯದ್ದೆ ಇದೆ. ವಿಕಸಿತ ಭಾರತ ಆಗೋದು ಅವರಿಗೆ ಬೇಕಾಗಿಲ್ಲ, ಅವರಿಗೆ ಬೇಕಾಗಿರೋದು ಹಿಂದೂ ರಾಷ್ಟ್ರ ಮಾಡುವುದು. ವಿಕಸಿತ ಭಾರತದ ಹಿಂಡನ್ ಅಜೆಂಡಾ ಅದೇ ಆಗಿದೆ. ಆದರೆ ಭಾರತ ಹಿಂದೂ ರಾಷ್ಟ್ರ ಮಾಡಲು ಆಗಲ್ಲ. ಇದು ಬಹುತ್ವ ರಾಷ್ಟ್ರ, ಎಲ್ಲಾ ವರ್ಗದ ಜನ ಇದ್ದಾರೆ. ಭಾರತ ಹಳ್ಳಿಗಳ ದೇಶವಾಗಿದೆ. ಹಳ್ಳಿಗಳು ಅಭಿವೃದ್ದಿಯಾಗಬೇಕು. ದೇಶದ ಜನರು ಬದುಕು ಹಸನುಗೊಳಿಸಬೇಕೆಂದು ದೇಶದ ಮೊದಲ ಪ್ರಧಾನಿ ನೆಹರು ರವರು ಪಂಚವಾರ್ಷಿಕ ಯೋಜನೆ ತಂದರು. ನೆಹರು ರವರು ಪ್ರಜಾಪ್ರಭುತ್ವದ ಪ್ರೇಮಿಯಾಗಿದ್ದರು. ಅದರಿಂದಲೇ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದರು. ಅನೇಕ ಅಣೆಕಟ್ಟುಗಳನ್ನು ಕಟ್ಟಿದ್ದಾರೆ, ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದರು. ಆದರೆ ಮೋದಿ ಕಾಂಗ್ರೇಸ್ ಏನು ಮಾಡಿದೆ ಎಂತಾ ಕೇಳ್ತಾರೆ, ಮೋದಿ ಓಂದೇ ಒಂದು ಅಣೆಕಟ್ಟು ಆದ್ರೂ ಕಟ್ಟಿದ್ದಾರಾ? ಯಾವುದಾದರೂ ಒಂದು ಸಾರ್ವಜನಿಕ ಕಾರ್ಖಾನೆ ತಂದ್ರಾ ಎಂದು ಪ್ರಶ್ನೆ ಮಾಡಿದರು.
ಇನ್ನೂ ಬಿಜೆಪಿಯವರು ಈ ಯೋಜನೆಗಳಿಂದ ನೆಹರೂ ರವರ ಹೆಸರನ್ನು ತೆಗೆಯಲು ಹೊರಟರು. ಆರ್.ಎಸ್.ಎಸ್ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿತ್ತಾ, 1925ರಲ್ಲೇ ಆರ್.ಎಸ್.ಎಸ್ ಇತ್ತು, ಗಾಂಧೀಜಿ ಬ್ರಿಟೀಷರೇ ದೇಶ ಬಿಟ್ಟು ತೊಲಗಿ ಅಂದ್ರ, ಹೆಡ್ಗೇವಾರ್, ಗುರೂಜಿ ಏನು ಮಾಡಿದ್ರು, ಸಾವರ್ಕರ್ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರೇ, ಅವರು ಬ್ರಿಟೀಷರಿಗೆ ಸಹಾಯ ಮಾಡಿಕೊಂಡಿದ್ದರು. ದೇಶಭಕ್ತಿಯ ಬಗ್ಗೆ ಬಿಜೆಪಿಯವರು ತುಂಬಾನೆ ಮಾತನಾಡುತ್ತಾರೆ. ನೆಹರು ಎಷ್ಟು ವರ್ಷ ಜೈಲಿನಲ್ಲಿದ್ದರು. ಯಾರಿಗಾಗಿ ಜೈಲಿಗೆ ಹೋಗಿದ್ರು ಎಂದು ಪ್ರಶ್ನೆ ಮಾಡಿದರು. ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೇವೆ ಎಂದು ಬಿಜೆಪಿಯವರು ಹೇಳ್ತಾ ಇದ್ದಾರೆ. ಈಗ ಕಾಂಗ್ರೇಸ್ ನವರು 10-12 ಸೀಟ್ ಗಳನ್ನು ಗೆಲ್ಲಬಹುದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಕಾಂಗ್ರೇಸ್ ಪಕ್ಷ 15-20 ಸೀಟ್ ಗೆಲ್ತೀವಿ ಎಂದರು.
Only blaming to bjp, no development, no to farmers development, only crimals to accommodate in India, not peace, only they know how make murders to hindus, they know how to grab the health and wealth from hindus, they know how to rise the rates of all the leaving items of daily hood, and how to loot the peoples of the states. This is the criteria of the Congress