Chain Snatch: ದೇವರ ಭಜನೆಯಲ್ಲಿ ಮಗ್ನರಾಗಿದ್ದ ಮಹಿಳೆಯರು, ಕಿಟಕಿಯಿಂದ ಬಂದ ಕಳ್ಳ ಮಹಿಳೆಯ ಸರ ಕದ್ದು ಪರಾರಿ….!

ಸಿಲಿಕಾನ್ ಸಿಟಿ ಬೆಂಗಳೂರಿನ ನಂದಿನಿ ಲೇಔಟ್ ನ (Nandini Layout) ಶಂಕರನಗರ ಗಣೇಶ ದೇಗುಲದಲ್ಲಿ ಹಲವು ಮಹಿಳೆಯರು ಭಕ್ತಿಯಿಂದ ದೇವರ ಭಜನೆಯಲ್ಲಿ ಮಗ್ನರಾಗಿದ್ದರು. ಈ ವೇಳೆ ಕಿಟಕಿಯ ಬಳಿ ಕುಳಿತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಕದ್ದು (Chain Snatch) ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌.ಐ.ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

Chain Snatch in Bengaluru 1

ಬೆಂಗಳೂರಿನಲ್ಲಿ ನಂದಿನಿ ಲೇಔಟ್ ನ (Nandini Layout) ಶಂಕರನಗರದ ಗಣೇಶ ದೇಗುಲದಲ್ಲಿ ಕಳೆದ ಅ.11 ರಂದು ಮಹಿಳೆಯರು ಭಕ್ತಿಯಿಂದ ಭಜನೆ ಮಾಡುತ್ತಿರುತ್ತಾರೆ. ಭಜನೆಯಲ್ಲಿ ಹಲವು ಮಹಿಳೆಯರು ಭಾಗಿಯಾಗಿರುತ್ತಾರೆ.  ಈ ಸಮಯದಲ್ಲಿ ದೇವಾಲಯದ ಕಿಟಕಿಯ ಬಳಿ ಕುಳಿತಿದ್ದ ಮಹಿಳೆಯ ಕೊರಳಲ್ಲಿರುವ ಸರವನ್ನು ಕಸಿದು ಕಳ್ಳನೋರ್ವ ಪರಾರಿಯಾಗಿದ್ದಾನೆ. ಮಂಗಳಾ ಎಂಬ ಮಹಿಳೆಯ ಸರವನ್ನು ಸಂಜೆ 7.17ರ ಸುಮಾರಿಗೆ ಮಂಗಳ ಎಂಬ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರ ಕಸಿದುಕೊಳ್ಳು ಯತ್ನಿಸಿದ್ದಾನೆ. ಸರ ಕಿತ್ತುಕೊಳ್ಳಲು ಯತ್ನಿಸಿದ ಸಂದರ್ಭ ಮಹಿಳೆ ಬಿಗಿಯಾಗಿ ಹಿಡಿದುಕೊಂಡಿದ್ದಾರೆ.

ಮಹಿಳೆ ತನ್ನ ಮಾಂಗಲ್ಯ ಸರವನ್ನು ಬಿಗಿಯಾಗಿ ಹಿಡಿದುಕೊಂಡ ಪರಿಣಾಮ 70 ಗ್ರಾಂ ತೂಕದ ಸರ ತುಂಡಾಗಿ ಕಳ್ಳನಿಗೆ ಮೂವತ್ತು ಗ್ರಾಂ ನಷ್ಟು ಚಿನ್ನ ಸಿಕ್ಕಿದೆ. ಈ ಸಮಯದಲ್ಲಿ ಮಹಿಳೆ ಜೋರಾಗಿ ಕಿರುಚಾಡಿದ್ದಾಳೆ. ಬಳಿಕ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆ ಭಜನೆಯ ವಿಡಿಯೋ ಮಾಡುತ್ತಿದ್ದ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ಘಟನೆಯಾದ ಬಳಿಕ ಮಂಗಳಮ್ಮ ಅ.11 ರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನಂತೆ ನಂದಿನಿ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

Next Post

Heavy Rain: ಬೆಂಗಳೂರಿನಲ್ಲಿ ಭಾರಿ ಮಳೆ, ಶಾಲೆಗಳಿಗೆ ನಾಳೆ ರಜೆ ಘೋಷಣೆ…..!

Tue Oct 15 , 2024
ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮಳೆ (Heavy Rain) ಯ ಆರ್ಭಟ ನಿಲ್ಲುತ್ತಿಲ್ಲ. ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಕಿಲೋಮೀಟರ್​ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ (Heavy Rain) ಎಂದು ಬೆಂಗಳೂರಿನ ನಗರ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, (Heavy Rain) ಕೆಲಸ-ಕಾಲೇಜಿಗೆ […]
Bangalore Rain school holiday announced 0
error: Content is protected !!