ಸಿಲಿಕಾನ್ ಸಿಟಿ ಬೆಂಗಳೂರಿನ ನಂದಿನಿ ಲೇಔಟ್ ನ (Nandini Layout) ಶಂಕರನಗರ ಗಣೇಶ ದೇಗುಲದಲ್ಲಿ ಹಲವು ಮಹಿಳೆಯರು ಭಕ್ತಿಯಿಂದ ದೇವರ ಭಜನೆಯಲ್ಲಿ ಮಗ್ನರಾಗಿದ್ದರು. ಈ ವೇಳೆ ಕಿಟಕಿಯ ಬಳಿ ಕುಳಿತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಕದ್ದು (Chain Snatch) ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ನಂದಿನಿ ಲೇಔಟ್ ನ (Nandini Layout) ಶಂಕರನಗರದ ಗಣೇಶ ದೇಗುಲದಲ್ಲಿ ಕಳೆದ ಅ.11 ರಂದು ಮಹಿಳೆಯರು ಭಕ್ತಿಯಿಂದ ಭಜನೆ ಮಾಡುತ್ತಿರುತ್ತಾರೆ. ಭಜನೆಯಲ್ಲಿ ಹಲವು ಮಹಿಳೆಯರು ಭಾಗಿಯಾಗಿರುತ್ತಾರೆ. ಈ ಸಮಯದಲ್ಲಿ ದೇವಾಲಯದ ಕಿಟಕಿಯ ಬಳಿ ಕುಳಿತಿದ್ದ ಮಹಿಳೆಯ ಕೊರಳಲ್ಲಿರುವ ಸರವನ್ನು ಕಸಿದು ಕಳ್ಳನೋರ್ವ ಪರಾರಿಯಾಗಿದ್ದಾನೆ. ಮಂಗಳಾ ಎಂಬ ಮಹಿಳೆಯ ಸರವನ್ನು ಸಂಜೆ 7.17ರ ಸುಮಾರಿಗೆ ಮಂಗಳ ಎಂಬ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರ ಕಸಿದುಕೊಳ್ಳು ಯತ್ನಿಸಿದ್ದಾನೆ. ಸರ ಕಿತ್ತುಕೊಳ್ಳಲು ಯತ್ನಿಸಿದ ಸಂದರ್ಭ ಮಹಿಳೆ ಬಿಗಿಯಾಗಿ ಹಿಡಿದುಕೊಂಡಿದ್ದಾರೆ.
ಮಹಿಳೆ ತನ್ನ ಮಾಂಗಲ್ಯ ಸರವನ್ನು ಬಿಗಿಯಾಗಿ ಹಿಡಿದುಕೊಂಡ ಪರಿಣಾಮ 70 ಗ್ರಾಂ ತೂಕದ ಸರ ತುಂಡಾಗಿ ಕಳ್ಳನಿಗೆ ಮೂವತ್ತು ಗ್ರಾಂ ನಷ್ಟು ಚಿನ್ನ ಸಿಕ್ಕಿದೆ. ಈ ಸಮಯದಲ್ಲಿ ಮಹಿಳೆ ಜೋರಾಗಿ ಕಿರುಚಾಡಿದ್ದಾಳೆ. ಬಳಿಕ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆ ಭಜನೆಯ ವಿಡಿಯೋ ಮಾಡುತ್ತಿದ್ದ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ಘಟನೆಯಾದ ಬಳಿಕ ಮಂಗಳಮ್ಮ ಅ.11 ರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನಂತೆ ನಂದಿನಿ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.