ಗುಡಿಬಂಡೆ: ಪಟ್ಟಣದ ಮುಖ್ಯರಸ್ತೆಯಲ್ಲಿ ಪರಿಸರ ವೇದಿಕೆ ವತಿಯಿಂದ ಬುದ್ದ ಪೌರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಸಿ ನೆಡುವ ಮೂಲಕ ಬುದ್ದಪೌರ್ಣಿಮೆಯನ್ನು ಆಚರಿಸಿದ್ದು, ಬುದ್ದನ ಸಂದೇಶಗಳನ್ನು ಅನುಸರಿಸುವಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಸಲಹೆ ನೀಡಿದರು.
ಈ ವೇಳೆ ಜಿಲ್ಲಾ ಪರಿಸರ ವೇದಿಕೆ ಅಧ್ಯಕ್ಷ ಡಾ.ಗುಂಪು ಮರದ ಆನಂದ್ ಮಾತನಾಡಿ, ಬುದ್ದ ಪೂರ್ಣಮೆಯನ್ನು ಭಗವಾನ್ ಬುದ್ಧನ ಜನ್ಮ ಸತ್ಯದ ಜ್ಞಾನ ಮತ್ತು ಮಹಾ ಪರಿ ನಿರ್ವಾಣ ಎಂದು ಪರಿಗಣಿಸಲಾಗಿದೆ. ಬುದ್ಧನು ಬೋಧ ಗಯ್ಯಾದಲ್ಲಿನ ಬೋಧಿ ವೃಕ್ಷದ ಕೆಳಗೆ ಸತ್ಯದ ಜ್ಞಾನವನ್ನು ಪಡೆದನು ಗೌತಮ ಬುದ್ಧರು ಸತ್ಯ ಮತ್ತು ಅಹಿಂಸಾ ಮಾರ್ಗವನ್ನು ಅನುಸರಿಸಲು ಜನರನ್ನು ಪ್ರೇರೇಪಿಸಿದವರು ಭಗವಾನ್ ಬುದ್ಧನ ಅನುಯಾಯಿಗಳು ಅವರ ಬೋಧನೆಗಳನ್ನು ಆಲಿಸುತ್ತಾರೆ ಮತ್ತು ಅವರು ತೋರಿಸಿದ ಮಾರ್ಗವನ್ನು ಅನುಸರಿಸುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ ಈ ದಿನ ಪ್ರತಿಯೊಬ್ಬರು ಬೋಧಿವೃಕ್ಷವನ್ನು ಪೂಜಿಸುತ್ತಾರೆ. ಬೋಧನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಡಿಬಂಡೆ ಬಲಿಜ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ನಾಯ್ಡು ಮಾತನಾಡಿ, ಗೌತಮ ಬುದ್ಧರು ನೀಡಿದ ಪ್ರೀತಿ, ಸತ್ಯ, ಅಹಿಂಸ ಮಾರ್ಗಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ರೆವಿನ್ಯೂ ಚಂದ್ರು, ಪರಿಸರ ವೇದಿಕೆ ಖಜಾಂಜಿ ಶ್ರೀನಾಥ್, ಪ್ರಾಣಿ ದಯಾ ಸಂಘದ ಅಧ್ಯಕ್ಷರಾದ ರಾಜಶೇಖರ್, ಪ್ರಾಥಮಿಕ ಶಾಲಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀರಾಮಪ್ಪ. ಸದಾ ಕವಿ, ಆದಿನಾರಾಯಣಪ್ಪ, ಜಗನ್ನಾಥ್, ಶ್ರೀನಿವಾಸ್, ಬಲರಾಮ್ ಸಿಂಗ್ ಮುಂತಾದವರು ಪಾಲ್ಗೊಂಡಿದ್ದರು.