ಡಿಗ್ರಿಗಳನ್ನು ಪಡೆದುಕೊಂಡು ಉದ್ಯೋಗ ಸಿಗದೇ ಉದ್ಯೋಗಕ್ಕಾಗಿ ಕಾಯುತ್ತಿರುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಕಾಯುತ್ತಿರುವಂತವರಿಗೆ ಇಲ್ಲೊಂದು ಭರ್ಜರಿ ಅವಕಾಶವಿದೆ. ಬರೊಬ್ಬರಿ ಮೂರು ಸಾವಿರ ಹುದ್ದೆಗಳ ಭರ್ತಿಗೆ ಕೆನರಾ ಬ್ಯಾಂಕ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಕೆ ಹಾಗೂ ಅಧಿಸೂಚನೆಯ ಬಗ್ಗೆ ತಿಳಿಯಲು ಮುಂದೆ ಓದಿ…
ಬ್ಯಾಂಕ್ ನಲ್ಲಿ ಉದ್ಯೋಗ ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು, ಅವಕಾಶಕ್ಕಾಗಿ ಕಾಯುತ್ತಿರುವಂತಹ ನಿರುದ್ಯೋಗಿಗಳಿಗೆ ಕೆನರಾ ಬ್ಯಾಂಕ್ ಒಳ್ಳೆಯ ಅವಕಾಶವನ್ನು ಕೊಟ್ಟಿದೆ. ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ಹ್ಯೂಮನ್ ರಿಸೋರ್ಸ್ ವಿಭಾಗ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಕೆನರಾ ಬ್ಯಾಂಕ್ ನಲ್ಲಿ ಖಾಲಿಯಿರುವಂತಹ ಉದ್ಯೋಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ದೇಶದಾದ್ಯಂತ ಇರುವ ಕೆನರಾ ಬ್ಯಾಂಕ್ ನ ಎಲ್ಲಾ ಬ್ರಾಂಚ್ ಗಳಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. ಇನ್ನೂ ಕರ್ನಾಟಕದಲ್ಲಿ 600 ಹುದ್ದೆಗಳಿದ್ದು, ಬೆಂಗಳೂರು ಅರ್ಬನ್ ನಲ್ಲಿ 92 ಹುದ್ದೆಗಳು ಖಾಲಿಯಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
- ಉದ್ಯೋಗ ಸಂಸ್ಥೆಯ ಹೆಸರು : ಕೆನರಾ ಬ್ಯಾಂಕ್
- ಹುದ್ದೆಯ ಹೆಸರು : ಅಪ್ರೆಂಟಿಸ್ ಹುದ್ದೆ
- ಒಟ್ಟು ಹುದ್ದೆಗಳ ಸಂಖ್ಯೆ : 3000 ಹುದ್ದೆಗಳು
- ವಯಸ್ಸು : ಕನಿಷ್ಟ 20 ರಿಂದ 28 ವರ್ಷ ಗರಿಷ್ಟ (ಎಸ್.ಸಿ/ಎಸ್.ಟಿ ಗೆ 5 ವರ್ಷಗಳು, ಒಬಿಸಿ, ಸಾಮಾನ್ಯ ವರ್ಗಕ್ಕೆ 3 ವರ್ಷಗಳು ಹಾಗೂ ವಿಶೇಷ ಚೇತನರಿಗೆ 10 ವರ್ಷಗಳು ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- ಅರ್ಜಿ ಶುಲ್ಕ : ಎಸ್ಸಿ/ಎಸ್ಟಿ ಹಾಗೂ ವಿಶೇಷ ಚೇತನರಿಗೆ ಅರ್ಜಿ ಶುಲ್ಕ ಇರಲ್ಲ. ಇತರೆ ವರ್ಗಕ್ಕೆ 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಗಧಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲೀಸ್ಟ್ ಸಿದ್ದಮಾಡಲಾಗುತ್ತದೆ. ಬಳಿಕ ಪರೀಕ್ಷೆ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಇನ್ನೂ ಆಯ್ಕೆಯಾದ ಅಭ್ಯರ್ಥಿಗಳನ್ನು ಬ್ರಾಂಚ್ ಗಳಲ್ಲಿ 1 ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಸೆ.18 ರಂದು ನೋಟಿಫಿಕೇಷನ್ ರಿಲೀಸ್ ಆಗಿದೆ. ಸೆ.21 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಅ.04 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಪರಿಶೀಲಿಸಿ : https://canarabank.com/UploadedFiles/Pdf/APPRENTICESHIP_ADVERTISEMENT_COMBINED.pdf
account maintaince