ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿದೆ. ದೈತ್ಯ ಟೆಲಿಕಾಂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಬಿ.ಎಸ್.ಎನ್.ಎಲ್ ನ ಕೆಲವೊಂದು ಪ್ಲಾನ್ ಗಳು ಇತರೆ ಟೆಲಿಕಾಂ ಕಂಪನಿಗಳಿಗೆ ನಡುಕ ಹುಟ್ಟಿಸುತ್ತಿದೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಬಿ.ಎಸ್.ಎನ್.ಎಲ್ ನ ಬಜೆಟ್ ಪ್ಲಾನ್ ಬಗ್ಗೆ ತಿಳಿಸಲಾಗಿದೆ. ಈ ಹೊಸ ರೀಚಾರ್ಜ್ ಯೋಜನೆಯಲ್ಲಿ ಪ್ರತಿನಿತ್ಯ 1 ಜಿಬಿ ಡೆಡಾ ಹಾಗೂ 60 ದಿನಗಳ (BSNL Plans) ವ್ಯಾಲಿಟಿಡಿ ಸಿಗಲಿದೆ. ಕೇವಲ 345 ರೂಪಾಯಿಗಳ ಈ ಪ್ಲಾನ್ ಮೂಲಕ ಗ್ರಾಹಕರಿಗೆ ಒಳ್ಳೆಯ ಬೆನಿಫಿಟ್ಸ್ ಸಿಗಲಿದೆ.
BSNL ಹೊಸ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಯಾದ BSNL ತನ್ನ ಗ್ರಾಹಕರಿಗೆ ಹೊಸ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. JIO, Airtel ಮತ್ತು VI ದಂತಹ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ತಮ್ಮ ಮೊಬೈಲ್ ದರಗಳನ್ನು ಸರಾಸರಿ ಶೇ.15 ರಷ್ಟು ಹೆಚ್ಚಳ ಮಾಡಲಾಗಿದೆ. ಇದೀಗ BSNL ಹೊಸ ಪ್ಲಾನ್ ಪರಿಚಯಿಸಿದೆ. BSNLನ 345 ಪ್ರೀಪೇಯ್ಡ್ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು, ಈ ಪ್ಲಾನ್ ನಲ್ಲಿ 60 ದಿನಗಳ ವ್ಯಾಲಿಡಿಟಿ, ಉಚಿತ ಕರೆ, ಡೇಟಾ ಹಾಗೂ SMS ಸೌಲಭ್ಯ ದೊರೆಯಲಿದೆ. ದಿನಕ್ಕೆ 1 GB ಡೇಟಾವನ್ನು ಪಡೆಯುತ್ತಾರೆ. ಡೇಟಾ ಪ್ಯಾಕ್ ಮುಗಿದ ನಂತರ ಸ್ಪೀಡ್ 40 kbps ನಲ್ಲಿ ಇಂಟರ್ ನೆಟ್ ಬಳಕೆಯಾಗುತ್ತದೆ.
ಇನ್ನೂ ಮತ್ತೊಂದು ಪ್ಲಾನ್ ಸಹ ಇದ್ದು, BSNL 347 ರೂಪಾಯಿಯ ಯೋಜನೆಯ ಪ್ಲಾನ್ ನೀಡುತ್ತಿದ್ದು, ಈ ಪ್ಲಾನ್ ನಲ್ಲಿ 54 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತನಿತ್ಯ 2GB ಡೇಟಾ ಪಡೆಯಬಹುದಾಗಿದೆ. ದಿನದಲ್ಲಿ 2ಜಿಬಿ ಡಾಟಾ ಮಿತಿ ಮುಗಿದ ಬಳಿಕ 40kbps ಇಂಟರ್ನೆಟ್ ವೇಗವನ್ನು ನೀಡಲಾಗುತ್ತದೆ. ಬಿಎಸ್ಎನ್ಎಲ್‌ನ ಈ ಯೋಜನೆಯಲ್ಲಿ, ಅನಿಯಮಿತ ಕರೆಯೊಂದಿಗೆ ದಿನಕ್ಕೆ 100 SMS ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಇದಲ್ಲದೆ, ಜಿಂಗ್ ಮ್ಯೂಸಿಕ್ ಮತ್ತು ಬಿಎಸ್ಎನ್ಎಲ್ ಟ್ಯೂನ್‌ಗಳಿಗೆ ಉಚಿತ ಪ್ರವೇಶವನ್ನು ಗ್ರಾಹಕರು ಪಡೆಯಬಹುದಾಗಿದೆ.
BSNLನ ಮತ್ತೊಂದು ಪ್ಲಾನ್ ಬಗ್ಗೆ ಇಲ್ಲಿ ಹೇಳಲಾಗಿದೆ. 397 ರೂಪಾಯಿಯ ಪ್ಲಾನ್ ನಲ್ಲಿ ಒಟ್ಟು 150 ದಿನಗಳ ವ್ಯಾಲಿಡಿಟಿಯನ್ನು ಗ್ರಾಹಕರು ಪಡೆಯಲಿದ್ದಾರೆ. ಈ ಯೋಜನೆಯಡಿ ದಿನಕ್ಕೆ 2ಜಿಬಿ ಡೇಟಾ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಸೌಲಭ್ಯವನ್ನು ಪಡೆಯಬಹುದಾಗಿದೆ. ಆದರೆ ಈ ಯೋಜನೆಯಲ್ಲಿ ಈ ಉಚಿತ ಸೇವೆ ಮೊದಲ 30 ದಿನಗಳ ವರೆಗೆ ಮಾತ್ರ ಸಕ್ರಿಯವಾಗಿರುತ್ತದೆ. 30 ದಿನಗಳ ನಂತರ, ಬಳಕೆದಾರರು ಸ್ಥಳೀಯ ಕರೆಗಳಿಗೆ ನಿಮಿಷಕ್ಕೆ ರೂ.1 ಮತ್ತು STD ಕರೆಗಳಿಗೆ ನಿಮಿಷಕ್ಕೆ ರೂ.1.3 ಪಾವತಿಸಬೇಕಾಗುತ್ತದೆ. ಕಡಿಮೆ ಬೆಲೆಯಲ್ಲಿ ತಮ್ಮ ಸಂಖ್ಯೆಯನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಬಯಸುವ ಬಳಕೆದಾರರಿಗೆ ಈ ಯೋಜನೆ ತುಂಬಾ ಉಪಯುಕ್ತ ಎಂದೇ ಹೇಳಬಹುದಾಗಿದೆ.