Government Facilities: ಸರ್ಕಾರದ ಸಹಾಯಧನಕ್ಕಾಗಿ ಅಣ್ಣ ತಂಗಿಯ ಮದುವೆ, ಕ್ರಮಕ್ಕೆ ಸ್ಥಳೀಯರ ಆಗ್ರಹ…!

ನಮ್ಮ ಭಾರತದ ಸಂಸ್ಕೃತಿಯಲ್ಲಿ ಅಣ್ಣ-ತಂಗಿಯ ಸಂಬಂಧ ಅತ್ಯಂತ ಪವಿತ್ರವಾದ ಸಂಬಂಧ ಎಂದು ಹೇಳಲಾಗುತ್ತದೆ. ಆದರೆ ಆಗಾಗ ಕೆಲವೊಂದು ಘಟನೆಗಳು ಈ ಪವಿತ್ರವಾದ ಸಂಬಂಧಕ್ಕೆ ಕಳಂಕ ತರುತ್ತವೆ. ಇದೀಗ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಅಂತಹುದೇ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶ ಸರ್ಕಾರದ ಯೋಜನೆಯಡಿಯಲ್ಲಿ ಹೊಸ ಮದುವೆಯಾದ ಜೋಡಿಗೆ ಸರ್ಕಾರದಿಂದ 35 (Government Facilities) ಸಾವಿರ ಸಹಾಯಧನ ನೀಡಲಾಗುತ್ತಿದೆ. ಈ ಹಣ ಪಡೆಯಲು ಅಣ್ಣ ತಂಗಿಯೇ ಮದುವೆಯಾದ ಘಟನೆ ನಡೆದಿದೆ.

Marriage dhoka to farmer 1

ನಮ್ಮ ದೇಶದಲ್ಲಿ ಮದುವೆ ಅನ್ನೋದು ಅತ್ಯಂತ ಪವಿತ್ರವಾದ ಬಂಧ ಎಂದು ಎಲ್ಲರು ನಂಬುತ್ತಾರೆ. ವಿವಿಧ ಸಂಪ್ರದಾಯಗಳನ್ನು ಹೊಂದಿರುವ ಭಾರತದಲ್ಲಿ ಹಲವಾರು ರೀತಿಯ ಆಚರಣೆಗಳ ಮೂಲಕ ಮದುವೆ ಸಮಾರಂಭಗಳು ನಡೆಯೋದನ್ನ ನಾವು ನೋಡಿದ್ದೇವೆ. ಆದರೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಹೋದರ ಮತ್ತು ಸಹೋದರಿ ಪರಸ್ಪರ ವಿವಾಹವಾಗಿರುವ (Government Facilities) ವಿಚಾರ ಬೆಳಕಿಗೆ ಬಂದಿದೆ. ಸರ್ಕಾರದ ಸಹಾಯಧನ ಪಡೆಯಲು ಕೆಲವರು ಮರು ಮದುವೆಯಾದರೇ ಮತ್ತೆ ಕೆಲವರು ಅಣ್ಣ-ತಂಗಿ ಮದುವೆಯಾಗಿದ್ದಾರೆ. ಸಮಾಜದ ಆರ್ಥಿಕ ದುರ್ಬಲ ವರ್ಗಗಳ ನವವಿವಾಹಿತ ದಂಪತಿಗೆ ಉತ್ತರ ಪ್ರದೇಶ ಸರ್ಕಾರ ನೀಡುವ ಸವಲತ್ತುಗಳನ್ನು ಮೋಸದಿಂದ ಪಡೆಯಲು ಮದುವೆಯ ನಾಟಕವಾಡಿದ ಆಘಾತಕಾರಿ ಘಟನೆಯಿಂದ ಎಲ್ಲರು ಅಚ್ಚರಿಗೊಂಡಿದ್ದಾರೆ. ಸ್ಥಳೀಯರು ನೀಡಿದ ದೂರಿನ ನಂತರ ವಂಚನೆ ಬಯಲಾಗಿದೆ.

Marriage dhoka to farmer 2

ಉತ್ತರ ಪ್ರದೇಶ ಸರ್ಕಾರ ದುರ್ಬಲ ವರ್ಗಗಳ ನವ ವಿವಾಹಿತ ದಂಪತಿಗೆ (Government Facilities)  ಸಹಾಯಧನ ನೀಡುತ್ತದೆ. 10 ಸಾವಿರ ಗೃಹಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ. ಮದುವೆ ಆರು ಸಾವಿರ ಹಾಗೂ ವಧುವಿನ ಖಾತೆಗೆ 35 ಸಾವಿರ ಹಣ ಹಾಕಲಾಗುತ್ತದೆ. ಈ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ ಲಾಭ ಪಡೆಯಲು (Government Facilities)  ಸಹೋದರ ಮತ್ತು ಸಹೋದರಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಹಾಯಧನ ಪಡೆಯಲು ಸಹೋದರ ಸಹೋದರಿಯರು ಮದುವೆಯಾಗಿರುವುದು ಆಘಾತಕಾರಿ ವಿಚಾರವಾಗಿದೆ. ಸರ್ಕಾರದ ಯೋಜನೆಯನ್ನು (Government Facilities) ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

Next Post

Rahul Gandhi : ದಲಿತರ ಮನೆಯಲ್ಲಿ ಅಡುಗೆ ಮಾಡಿ ಊಟ ಸವಿದ ರಾಹುಲ್ ಗಾಂಧಿ, ವಿಡಿಯೋ ವೈರಲ್…..!

Tue Oct 8 , 2024
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಭೇಟಿ ನೀಡಿದ್ದು, ಈ ಸಮಯದಲ್ಲಿ ದಲಿತ ಕುಟುಂಬದವರೊಡನೆ ಸೇರಿ ಪಾಕಪದ್ದತಿ ರುಚಿಯನ್ನು ಸವಿದಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ರಾಹುಲ್ ಗಾಂಧಿಯವರ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಜೊತೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ರವರು ಕಳೆದ ಅ.5 […]
Rahul gandhi make food in maharastra
error: Content is protected !!