Sunday, August 31, 2025
HomeNationalವಧುವಿನ ತಂಗಿಯ ಜೊತೆ ಸೆಲ್ಫಿ ತೆಗೆದುಕೊಂಡ ವರ, ಮದುವೆ ಮಂಟಪದಲ್ಲೇ ವರನ ಕೆನ್ನೆಗೆ ಬಾರಿಸಿದ ವಧು,...

ವಧುವಿನ ತಂಗಿಯ ಜೊತೆ ಸೆಲ್ಫಿ ತೆಗೆದುಕೊಂಡ ವರ, ಮದುವೆ ಮಂಟಪದಲ್ಲೇ ವರನ ಕೆನ್ನೆಗೆ ಬಾರಿಸಿದ ವಧು, ವೈರಲ್ ಆದ ವಿಡಿಯೋ….!

ಸಾಮಾನ್ಯವಾಗಿ ಮದುವೆ ಎಂದ ಕೂಡಲೇ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ನೃತ್ಯಗಳು, ಸೆಲ್ಫಿಗಳಿಗೆ ಬರವೇನು ಇರೊಲ್ಲ ಅಂತಾನೇ ಹೇಳಬಹುದು. ಅಷ್ಟೇಅಲ್ಲದೇ ಮದುವೆ ಮಂಟಪದಲ್ಲಿ ನಡೆಯುವಂತಹ ಮೋಜು ಮಸ್ತಿ, ತಮಾಷೆ ವಿಡಿಯೋಗಳಂತೂ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವಧು ವರನ ಕೆನ್ನೆಗೆ ಮಂಟಪದಲ್ಲೇ ಬಾರಿಸಿದ್ದಾಳೆ. ನಾದಿನಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ವಧು ವರನ ಕೆನ್ನೆಗೆ ಬಾರಿಸಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

bride slaps groom video viral 1

ಜೋಡಿಯೊಂದರ ಮದುವೆ ಅದ್ದೂರಿಯಾಗಿ ನಡೆಯುತ್ತಿರುತ್ತದೆ. ಬಹುಶಃ ಅದು ಆರತಕ್ಷತೆ ಇರಬಹುದು, ಮದುವೆಯ ಚೇರ್‍ ಗಳಲ್ಲಿ ಕುಳಿತ ಜೋಡಿಯ ಬಳಿ ಬಂದ ವಧುವಿನ ಸಹೋದರಿ, ವರನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಕೋಪಗೊಂಡ ವಧು ವರನ ಕೆನ್ನೆಗೆ ಮಂಟಪದಲ್ಲಿಯೇ ಬಾರಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ದೀಪಕ್ (@rd_love_status_01) ಎಂಬುವವರು ತಮ್ಮ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಹಂಚಿಕೊಂಡ ಕೆಲವೇ ದಿನಗಳಲ್ಲಿ 6.4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ನೆಟ್ಟಿಗರು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಧು ವರನ ಕಪಾಳಕ್ಕೆ ಹೊಡೆದ ದೃಶ್ಯವನ್ನು ಕಾಣಬಹುದಾಗಿದೆ. ವಧುವಿನ ಸುಂದರವಾದ ಸಹೋದರಿ ವರನ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳಲು ಮುಮದಾಗುತ್ತಾಳೆ. ಮದುವೆಯ ಪೊಟೋಸೆಷನ್ ಸಮಯದಲ್ಲಿ ಜೋಡಿಯ ಪಕ್ಕದಲ್ಲಿ ಕುಳಿತ ವಧುವಿನ ತಂಗಿ ಭಾವನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾಳೆ. ಈ ವೇಳೆ ವರ ತನ್ನ ನಾದಿನಿ ಜೊತೆಗೆ ಸೆಲ್ಫಿಗೆ ನಗುತ್ತಾ ಪೋಸ್ ಕೊಟ್ಟಿದ್ದಾನೆ. ಈ ಕಾರಣದಿಂದ ಕೋಪಗೊಂಡ ವಧು ವರನ ಕೆನ್ನೆಗೆ ಬಾರಿಸಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular