Tuesday, August 5, 2025
HomeSpecialViral Video : ಎರಡು ಕೋಳಿಗಳು, ನಾಗರಹಾವಿನ ಮರಿಯ ನಡುವಣ ಕಾಳಗ, ವೈರಲ್ ಆದ ವಿಡಿಯೋ…!

Viral Video : ಎರಡು ಕೋಳಿಗಳು, ನಾಗರಹಾವಿನ ಮರಿಯ ನಡುವಣ ಕಾಳಗ, ವೈರಲ್ ಆದ ವಿಡಿಯೋ…!

Viral Video – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಒಂದು ಪುಟ್ಟ ನಾಗರಹಾವು ಮತ್ತು ಎರಡು ಕೋಳಿಗಳ ನಡುವಿನ ಹಣಾಹಣಿಯ ಈ ವಿಡಿಯೋ, ಕೋಳಿಗಳ ಧೈರ್ಯಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಹಾವೆಂದರೆ ಎಲ್ಲರಿಗೂ ಭಯ. ಆದರೆ ಈ ವಿಡಿಯೋದಲ್ಲಿ ಕೋಳಿಗಳು ಹಾವು ಕಂಡೂ ಹೆದರದೆ, ಅದನ್ನು ಎದುರಿಸಿದ ಬಗೆ ಎಲ್ಲರ ಗಮನ ಸೆಳೆದಿದೆ. ಜೊತೆಗೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Brave hens attacking a small snake in a viral nature video

 

 

Viral Video – ಕೋಳಿಗಳ ಮುಂದೆ ತತ್ತರಿಸಿದ ಪುಟ್ಟ ನಾಗರಹಾವು

ಸಾಮಾನ್ಯವಾಗಿ ಹಾವುಗಳು ಕೋಳಿಗಳ ಮರಿಗಳನ್ನು ತಿನ್ನುತ್ತವೆ. ಆದರೆ ಇಲ್ಲಿ ಪರಿಸ್ಥಿತಿ ತಲೆಕೆಳಗಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಎರಡು ಕೋಳಿಗಳು ಒಂದು ಪುಟ್ಟ ನಾಗರಹಾವಿನೊಂದಿಗೆ ಹೋರಾಡುತ್ತಿರುವುದು ಕಂಡುಬರುತ್ತದೆ. ಆರಂಭದಲ್ಲಿ ಕೋಳಿಗಳನ್ನು ನೋಡಿದ ಹಾವು ಹೆದರದೆ, ತನ್ನ ಹೆಡೆಯನ್ನು ಬಿಚ್ಚಿ ಅವುಗಳನ್ನು ಹೆದರಿಸಲು ಯತ್ನಿಸುತ್ತದೆ. ಇದರಿಂದ ಕೊಂಚ ಹಿಂದಕ್ಕೆ ಸರಿದ ಕೋಳಿಗಳು, ಮತ್ತೆ ಹಾವಿನ ಮೇಲೆ ದಾಳಿ ಮಾಡುತ್ತವೆ.

Viral Video – ಹಾವಿನ ಮೇಲೆ ತೀವ್ರ ದಾಳಿ

ಹಾವಿನ ಹೆಡೆ ಬಿಚ್ಚಿದ್ದರೂ, ಕೋಳಿಗಳು ಅದಕ್ಕೆ ಹೆದರಲಿಲ್ಲ. ಕೋಳಿಗಳು ಒಂದು ಕಡೆಯಿಂದ ಹಾವಿನ ಮೇಲೆ ದಾಳಿ ಮಾಡಿದರೆ, ಮತ್ತೊಂದು ಕಡೆಯಿಂದ ಮತ್ತೊಂದು ಕೋಳಿ ಹಾವಿನ ಮೇಲೆ ಮುಗಿಬೀಳುತ್ತವೆ. ಕೋಳಿಗಳ ಈ ಹಠಾತ್ ದಾಳಿಯಿಂದ ದಿಕ್ಕು ತಪ್ಪಿದ ಹಾವು, ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ. ಆದರೆ ಕೋಳಿಗಳು ಹಾವನ್ನು ಅಷ್ಟು ಸುಲಭವಾಗಿ ಬಿಡಲಿಲ್ಲ. Read this also : ನಿನಗಿದು ಬೇಕಿತ್ತಾ ಮಗನೇ, ಹಾವಿಗೆ ಮುತ್ತಿಟ್ಟ ಯುವಕ, ಕಚ್ಚಿಸಿಕೊಂಡು ಆಸ್ಪತ್ರೆ ಪಾಲಾದ…!

Brave hens attacking a small snake in a viral nature video

Viral Video : Click Here 
Viral Video – ಕೊನೆಯಲ್ಲಿ ಗೆದ್ದವರು ಯಾರು?

ಕೋಳಿಗಳ ಸತತ ದಾಳಿಯಿಂದ ಸುಸ್ತಾದ ಹಾವು, ತಪ್ಪಿಸಿಕೊಳ್ಳಲು ಸಾಕಷ್ಟು ಯತ್ನ ನಡೆಸುತ್ತದೆ. ಆದರೆ ವಿಡಿಯೋ ಪೂರ್ತಿಯಾಗಿಲ್ಲದ ಕಾರಣ ಕೊನೆಯಲ್ಲಿ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೂ ವಿಡಿಯೋ ನೋಡಿದ ಜನರು, ಕೊನೆಯಲ್ಲಿ ಕೋಳಿಗಳೇ ಆ ಪುಟ್ಟ ನಾಗರಹಾವನ್ನು ತಿಂದುಹಾಕಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋ ಕೋಳಿಗಳ ಧೈರ್ಯವನ್ನು ತೋರಿಸುವುದರ ಜೊತೆಗೆ, ಪ್ರಕೃತಿಯಲ್ಲಿ ಬದುಕಿನ ಹೋರಾಟ ಎಷ್ಟು ಕಠಿಣ ಎಂಬುದನ್ನೂ ಸಾರಿ ಹೇಳುತ್ತದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular