ದೇಶದ ಹಲವು ಕಡೆ ಬಾಂಬ್ ಸ್ಟೋಟಿಸಿ ವಿಧ್ವಂಸ ಸೃಷ್ಟಿಸುವುದಾಗಿ ಬೆದರಿಕೆ ಸಂದೇಶವನ್ನು ಕಿಡಿಗೇಡಿಗಳು ಕಳುಹಿಸಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ರಾಜಭವನ, ಅಂಡಮಾನ್ ನಿಕೋಬರ್ ದ್ವೀಪಗಳಲ್ಲಿನ ಸೆಲ್ಯುಲಾರ್ ಜೈಲ್, ಬಿಹಾರ ರಾಜಭವನ ಸೇರಿದಂತೆ ದೇಶದ ಹಲವು ಕಡೆ ಬಾಂಬ್ ಸ್ಟೋಟಿಸುವುದಾಗಿ ಬೆದರಿಕೆ ಸಂದೇಶ ಇಮೇಲ್ ಮೂಲಕ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ನಾವು ಟೆರರೂಸರ್ಸ್ ಎಂಬ ಭಯೋತ್ಪಾದಕ ಗುಂಪಿಗೆ ಸೇರಿದವರು. ನಿಮ್ಮ ಕಟ್ಟದ ಒಳಗೆ ಸ್ಟೋಟಕ ಸಾಧನಗಳನ್ನು ಇಟ್ಟಿದ್ದೇವೆ. ಅನೇಕ ಮಂದಿ ಸಾಯುತ್ತಾರೆ. ರಕ್ತದ ಹೋಕಳಿ ಹರಿಯಲಿದೆ ಎಂದು ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿರುವ ಸೆಲ್ಯೂಲರ್ ಜೈಲ್, ಪಶ್ಚಿಮ ಬಂಗಾಳದ ರಾಜಭವನ, ಬಿಹಾರದ ರಾಜಭವನ, ದೆಹಲಿಯ ಶಾಲೆ ಸೇರಿದಂತೆ ಹಲವು ಕಡೆ ಬಾಂಬ್ ಸ್ಟೋಟಿಸುವ ಬೆದರಿಕೆ ಹಾಕಿದ್ದಾರೆ. ಇನ್ನೂ ಕಲ್ಕತ್ತಾ ಪೊಲೀಸರು ಈ ಸಂದೇಶವನ್ನು ಹುಸಿ ಸಂದೇಶ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೂ ಸಂದೇಶ ಕಳುಹಿಸಿದವರ ಮಾಹಿತಿ ಸಂಗ್ರಹಿಸಲು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಕೆಲವು ದಿನಗಳಗಿಂದ ಇದೇ ರೀತಿಯ ಬೆದರಿಕೆ ಇ-ಮೇಲ್ ಗಳು ಬರುತ್ತಿವೆ. ದೆಹಲಿಯಲ್ಲಿರುವ ಪಬ್ಲಿಕ್ ಶಾಲೆಯ ಇನ್ ಸ್ಟಿಟ್ಯೂಟ್ ಆವರಣದಲ್ಲಿ ಬಾಂಬ್ ಇಟ್ಟಿರುವ ಎಚ್ಚರಿಕೆ ಬಂದಿದ್ದು, ಶೋಧಕಾರ್ಯ ಸಹ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ದ್ವಾರಕಾದ ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲೂ ಬಾಂಬ್ ಸ್ಪೋಟಿಸುವ ಸಂದೇಶ ಬಂದಿದೆ ಎನ್ನಲಾಗಿದೆ. ಸ್ಥಳಕ್ಕೆ ದೆಹಲಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಜೊತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಎ.ಎನ್.ಐ ವರದಿ ಮಾಡಿದೆ ಎಂದು ತಿಳಿದುಬಂದಿದೆ. ಕಳೆದ ಫೆಬ್ರವರಿ ಮಾಹೆಯಲ್ಲಿ ಸಹ ದೆಹಲಿಯ ಆರ್.ಕೆ. ಪುರಂನಲ್ಲಿರುವ ದೆಹಲಿ ಪೊಲೀಸ್ ಶಾಲೆಗೆ ಬಾಂಬ್ ಬೆದರಿಕೆ ಬಂದಿತ್ತು. ತಪಾಸಣೆ ನಡೆಸಿದ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಘೋಷಣೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಇಂತಹ ಹುಸಿ ಬಾಂಬ್ ಬೆದರಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ.