HomeStateಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಶಿಡ್ಲಘಟ್ಟ ತಾಲೂಕು ಪಂಚಾಯತಿ ಇಓ ಮುನಿರಾಜು

ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಶಿಡ್ಲಘಟ್ಟ ತಾಲೂಕು ಪಂಚಾಯತಿ ಇಓ ಮುನಿರಾಜು

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಪಂಚಾಯತಿ ಇ.ಒ. ಮುನಿರಾಜು ಭೂ ಪರಿವರ್ತಿತ ಜಮೀನಿನಗೆ ಪ್ಲಾನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಾರೆ.

ಶಿಡ್ಲಘಟ್ಟ ತಾಲೂಕು ವ್ಯಾಪ್ತಿ ಜಂಗಮಕೋಟೆ ಹೋಬಳಿಯ ಘಟ್ಟಮಾರನಹಳ್ಳಿ ಗ್ರಾಮದ 39 ಗುಂಟೆ ಭೂಪರಿವರ್ತಿತ ಜಮೀನಿಗೆ ಪ್ಲಾನ್ ಮಾಡಿಕೊಡಲು ನಂಜೇಗೌಡ ಎಂಬುವವರಿಂದ ಎರಡು ಲಕ್ಷಕ್ಕೆ ಇ.ಒ. ಮುನಿರಾಜು ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಬೇಡಿಕೆಯಂತೆ ನಂಜೇಗೌಡ ಒಂದೂವರೆ ಲಕ್ಷ ಹಣ ನೀಡಲು ಒಪ್ಪಿಕೊಂಡಿದ್ದರಂತೆ. ಈ ಹಣವನ್ನು ಮುನಿರಾಜು ರವರ ಕಚೇರಿಯಲ್ಲಿ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ತಾ.ಪಂ. ಇ.ಒ. ಮುನಿರಾಜು ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡಿದ್ದಾರೆ.

Sidlagatta eo muniraju copy

ಲೋಕಾಯುಕ್ತ ಅಧಿಕಾರಿ ಮೋಹನ್ ರವರ ನೇತೃತ್ವದಲ್ಲಿ ಈ ಧಾಳಿ ನಡೆದಿದೆ. ಈ ವೇಳೆ ಲೋಕಾಯುಕ್ತ ಡಿ.ವೈ.ಎಸ್.ಪಿ ವಿರೇಂದ್ರ ಕುಮಾರ್‍, ಚಿಕ್ಕಬಳ್ಳಾಪುರ ಲೋಕಾಯುಕ್ತ ಶಿವಪ್ರಸಾದ್, ಮೋಹನ್, ಸಿಬ್ಬಂದಿಯಾದ ಸಂತೋಷ್, ಸತೀಶ್, ಲಿಂಗರಾಜ್, ನಾಗರಾಜ್, ಪ್ರಕಾಶ್, ಚೌಡರೆಡ್ಡಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular