ಬಾಗೇಪಲ್ಲಿ: ಮಾಜಿಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ 72 ನೇ ಹುಟ್ಟು ಹಬ್ಬದ ಪ್ರಯುಕ್ತ ರೆಡ್ ಕ್ರಾಸ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಕೂಲಿಕಾರರ ಸಂಘಟನೆಯ ಸಹಕಾರದೊಂದಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿವಿರದಲ್ಲಿ ಜಿವಿಎಸ್ ರವರ ಅಭಿಮಾನಿಗಳು, ಬೆಂಬಲಿಗರು ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡುವ ಮೂಲಕ ಸರಳವಾಗಿ ಜಿವಿಎಸ್ ರವರ 72ನೇ ಹುಟ್ಟು ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಸಿಪಿಐ(ಎಂ) ಮುಖಂಡ ಚೆನ್ನರಾಯಪ್ಪ ಮಾತನಾಡಿ, ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರು ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ದಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರಲ್ಲದೆ ಕಾರ್ಮಿಕರ, ಕೃಷಿಕರ, ರೈತರ, ಕೂಲಿಕಾರರ ಹಾಗೂ ಬಡಜನರ ಪರ ಧ್ವನಿಯಾಗಿದ್ದರು. ಇವರು ಹೋರಾಟಗಳ ಮೂಲಕ ಕ್ಷೇತ್ರದ ಎಲ್ಲಾ ವರ್ಗಗಳ ಜನರ ಅಭಿವೃದ್ದಿಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು ಇಂತಹ ದೀಮಂತ ನಾಯಕ ಮತ್ತೇ ಹುಟ್ಟಿಬರಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿ.ವಿ ಶ್ರೀರಾಮರೆಡ್ಡಿ ರವರ 72ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಗಿರುವುದಾಗಿ ರೆಡ್ ಕ್ರಾಸ್ ಸಂಸ್ಥೆ ಅಧಿಕಾರಿ ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ತಾಲೂಕು ಕಾರ್ಯದರ್ಶಿ ಎ.ಜಿ.ಸುಧಾಕರ್ ಜಿ.ವಿ.ಶ್ರೀರಾಮರೆಡ್ಡಿ ಅಇಮಾನಿಗಳಾದ ಚಂದ್ರಶೇಖರರೆಡ್ಡಿ, ಚಲಪತಿ, ಬಾಲಾಜಿ, ಮಂಜುನಾಥ್ ಸೇರಿದಂತೆ ಸಿಪಿಐ(ಎಂ) ಮತ್ತು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.