ಇತ್ತೀಚಿಗೆ ಗಡಿಯಾಚೆಗಿನ ಪ್ರೇಮ ಪ್ರಕರಣಗಳು, ಮದುವೆಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲವು ವರ್ಷಗಳ ಹಿಂದೆಯಷ್ಟೆ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಭಾರತದ ಯುವಕ ಸಚಿನ್ ಮಿನಾ ಎಂಬಾತನೊಂದಿಗೆ ಪ್ರೀತಿಗೆ ಬಿದ್ದು, ಪಾಕಿಸ್ತಾನ ತೊರೆದು ಭಾರತಕ್ಕೆ ಬಂದು ಆತನನ್ನು ಮದುವೆಯಾದರು. ಈಗಲೂ ಸಹ ಸೀಮಾ ಹೈದರ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಪ್ರೇಮ ಕಥೆ ನಡೆದಿದೆ. ಉತ್ತರಪ್ರದೇಶದ ಜಿಲ್ಲೆಯೊಂದು ಗಡಿಯಾಚೆಗಿನ ಪ್ರೇಮಕ್ಕೆ ಸಾಕ್ಷಿಯಾಗಿದೆ. ಪಾಕಿಸ್ತಾನದ ಯುವತಿ ಹಾಗೂ ಭಾರತದ ಉತ್ತರಪ್ರದೇಶದ ಯುವಕ ಪ್ರೀತಿಸಿ ಆನ್ ಲೈನ್ (Online Marriage) ಮೂಲಕ ಮದುವೆಯಾಗಿದ್ದು, ಇದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿದೆ.
ಉತ್ತರಪ್ರದೇಶದ ಜೌನ್ಪುರ್ ಜಿಲ್ಲೆಯ ಕಾರ್ಪೊರೇಟರ್ ಆಗಿರುವ ತಹಸೀನ್ ಶಾಹೀದ್ ಅವರ ಪುತ್ರ ಪಾಕಿಸ್ತಾನದ ಮಹಿಳೆಯನ್ನು ಮದುವೆ ಆಗುವುದರ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ. ತಹಸೀನ್ ಪುತ್ರ ಮೊಹಮ್ಮದ್ ಅಬ್ಬಾಸ್ ಹೈದರ್, ಪಾಕಿಸ್ತಾನದ ಯುವತಿ ಲಾಹೋಹರ್ ಮೂಲದ ಅದ್ಲೀಪಾ ಝಾರಾ ಜೊತೆ ವಿವಾಹವಾಗಿದ್ದಾರೆ. ಅದೂ ಆನ್ ಲೈನ್ ನಲ್ಲೇ ಇಬ್ಬರ ಮದುವೆ ನಡೆದ ಕಾರಣ ಇದು ಭಾರಿ ಸುದ್ದಿಯಾಗುತ್ತಿದೆ. ಈ ಮದುವೆ ಕಳೆದ ಶುಕ್ರವಾರ ನಡೆದಿದೆ. ಝಾರಾಗೆ ವೀಸಾ ಸಿಗುವುದು ಕಷ್ಟವಾಗಿತ್ತು. ಕಲ್ಯಾಣ ಮಂಟಪಕ್ಕೆ ಬರುವುದು ಕೂಡ ಅಸಾಧ್ಯವಾಗಿತ್ತು. ಝಾರಾಳ ತಾಯಿ ಆರೋಗ್ಯ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡು ಪಾಕಿಸ್ತಾನದ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಆನ್ಲೈನ್ನಲ್ಲಿಯೇ ಇಬ್ಬರ ನಿಖ್ಹಾ ನಡೆದು ಹೋಗಿದೆ.
ಅ.18 ರಂದು ಶುಕ್ರವಾರ ರಾತ್ರಿ ತಹಸೀನ್ ಶಾಹಿದ್ ಮದುವೆ ಸಂಭ್ರಮ ನಡೆದಿದೆ. ಶಿಯಾ ಧಾರ್ಮಿಕ ಮುಖಂಡರಾದ ಮೌಲಾನಾ ಮೌಫುಜುಲ್ ಹಸನ್ ಖಾನ್ ಆನ್ಲೈನ್ನಲ್ಲಿ ನಡೆದ ಮದುವೆಯಲ್ಲಿ ಕುರಾನ್ ಓದಿ ಹೇಳಿದರು. ಆ ಕಡೆಯಿಂದಲೂ ಹುಡುಗಿ ಪರ ಒಬ್ಬರು ಮೌಲಾನಾ ಮದುವೆಗೆ ಸಾಕ್ಷಿಯಾಗಿದ್ದರು. ಇಬ್ಬರು ಮೌಲಾನಗಳು ಎರಡು ಬದಿಯಿಂದ ಹಾಜರಿದ್ದಲ್ಲಿ ಹುಡುಗ ಹುಡಿ ನಿಖ್ಹಾ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಅವರ ಧರ್ಮ ಗುರುಗಳು ಹೇಳಿದ್ದಾರೆ. ಇನ್ನೂ ಮದುವೆಯ ಸಂಬ್ರಮ ವೀಕ್ಷಣೆ ಮಾಡಲು ದೊಡ್ಡ ಟಿವಿ ಸ್ಕ್ರೀನ್ ಮೂಲಕ ವ್ಯವಸ್ಥೆ ಕಲ್ಪಿಸಲಾಗಿತ್ತು. ವಧುವಿನ ಸುತಲ್ಲೂ ತುಂಬಾ ಮಂದಿ ಕುಳಿತಿರುವುದನ್ನು ನೋಡಬಹುದಾಗಿದೆ. ಆನ್ಲೈನ್ನಲ್ಲಿ ಮದುವೆಯಾಗಿ ಖುಷಿಯಾಗಿರುವ ಮೊಹಮ್ಮದ್ ಅಬ್ಬಾಸ್ ಹೈದರ್ ತನ್ನ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ತುಂಬಾನೆ ಪ್ರಯತ್ನಗಳನ್ನು ನಡೆಸುತ್ತಿದ್ದು, ಶೀಘ್ರದಲ್ಲೇ ವಿಸಾ ಸಿಗುವ ಭರವಸೆ ಇದೆ ಎಂಬ ನಂಬಿಕೆಯಿದೆ ಎಂದು ಅಬ್ಬಾಸ್ ಹೇಳಿದ್ದಾರೆ ಎನ್ನಲಾಗಿದೆ.