ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಭಾರಿ ವಾಕ್ಸಮರ ನಡೆಯುತ್ತಿದೆ. ಈ ಕುರಿತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತುಂಬಾನೆ ಹದೆಗಟ್ಟು ಹೋಗಿದೆ. ಹೆಣ್ಣು ಮಕ್ಳಳು ಶಾಲೆಗೆ ಹೋದರೇ, ಮಹಿಳೆಯರು ಕೆಲಸಕ್ಕೆ ಹೋದರೇ ವಾಪಸ್ಸು ಬರುತ್ತಾರೆ ಎಂಬ ಗ್ಯಾರಂಟಿಯೇ ಇಲ್ಲ ಎಂದು ಆಕ್ರೋಷ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೃಹ ಸಚಿವರು ಯಾರು ಎಂಬುದೇ ಗೊತ್ತಿಲ್ಲ. ರೌಡಿಗಳು, ಭಯೋತ್ಪಾದಕರು, ಪುಂಡರ ಅಟ್ಟಹಾಸ ಹೆಚ್ಚಾಗಿದೆ. ಶಿವರಾಮೇಗೌಡ ಎಂಬಾತ ಹೇಳುತ್ತಾನೆ, ಮೋದಿಗೆ ಹೇಳಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಭಾಗ ಮಾಡಿಬಿಟ್ಟರೇ ನಮಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾನೆ. ಅವರೆಂತಹ ಚಂಡಾಳರು ಎಂದು ಇದರಿಂದ ಗೊತ್ತಾಗುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯ ವರೆಗೂ ಇವರು ಒಂದಾಗಿದ್ದಾರೆ, ನಮಗೆ ಉಳಿಗಾಲ ಇರೊಲ್ಲ ಎಂದು ಅವರಿಗೆ ಭಯವಿದೆ ಎಂದು ವ್ಯಂಗವಾಡಿದರು.
ಅಷ್ಟೇಅಲ್ಲದೇ ಕೆಲಸ ಆಗಬೇಕಾದರೇ ಕೈ ಎತ್ತು, ಕೆಲಸ ಆದ ಮೇಲೆ ಚೂರಿ ಹಾಕು ಇದೇ ಕಾಂಗ್ರೇಸ್ ಪಕ್ಷದ ನೀತಿ. ಈ ಹಿಂದೆ ಮೈತ್ರಿ ಸರ್ಕಾರದ ಸಮಯದಲ್ಲಿ ಕುಮಾರಸ್ವಾಮಿಯವರ ಬೆನ್ನಿಗೆ ಚೂರಿ ಹಾಕಿದ್ದರು. 14 ತಿಂಗಳು ದುಷ್ಟರ ಸಹವಾಸ ಮಾಡಿದ್ದೇ, ನನ್ನನ್ನು ಕ್ಲರ್ಕ್, ಜವಾನನಂತೆ ನಡೆಸಿಕೊಂಡರು ಎಂದು ಕುಮಾರಸ್ವಾಮಿಯವರು ಬೇಸರ ವ್ಯಕ್ತಪಡಿಸಿದ್ದರು. ಕಾಂಗ್ರೇಸ್ ಸರ್ಕಾರ ಎಲ್ಲಾ ಕಡೆ ಲೂಟಿ ಮಾಡುತ್ತಿದೆ. ಈಗ ಬಿಡಿಎ ಕಾಂಪ್ಲೇಕ್ಸ್ ಗಳನ್ನು ಮಾರಾಟಕ್ಕೆ ಇಟ್ಟಿದೆ. ಈ ಹಿಂದೆ ಲಕ್ಷಣ್ ರಾವ್ ಎಂಬ ಮಹಾನುಭಾವರು ಇವನ್ನೆಲ್ಲಾ ಕಾಪಾಡಿಕೊಂಡು ಬಂದಿದ್ದರು. ಸರ್ಕಾರದಲ್ಲಿ ಹಣ ಇಲ್ಲ. ಅವರ ವರಿಷ್ಟರಿಕೆ ಕಪ್ಪ ಕೊಡಲು ಇಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.