Bike Ride: ಜಾಲಿ ರೈಡ್ ಮಾಡುತ್ತಾ, ಬೈಕ್ ನಲ್ಲಿ ಬ್ರೇಕ್ ಡ್ಯಾನ್ಸ್, ವೈರಲ್ ಆದ ವಿಡಿಯೋ….!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಬೈಕ್ ಗಳಲ್ಲಿ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡುತ್ತಿರುತ್ತಾರೆ. ಮತ್ತೆ ಕೆಲವರು ತಮ್ಮ ಗರ್ಲ್ ಫ್ರೆಂಡ್ ಅನ್ನು ಕೂರಿಸಿಕೊಂಡು ಜಾಲಿ ರೈಡ್ ಸಹ ಹೊರಡುತ್ತಾರೆ. ಈ ವೇಳೆಯಲ್ಲೂ ಕೆಲವೊಂದು ವಿನ್ಯಾಸಗಳನ್ನು ಮಾಡುತ್ತಾರೆ. ಇದೀಗ ಅಂತಹ ಘಟನೆಯೊಂದು ನಡೆದಿದೆ. ಬೈಕ್ ನಲ್ಲಿ ಯುವತಿಯೊಬ್ಬಳನ್ನು ಕೂರಿಸಿಕೊಂಡ ಯುವಕನೊಬ್ಬ ಜಾಲಿ ರೈಡ್ ಮಾಡುತ್ತಾ ಹುಡುಗಿಯನ್ನು (Bike Ride) ಬೈಕ್ ಮೇಲೆ ಬ್ರೇಕ್ ಡ್ಯಾನ್ಸ್ ಮಾಡಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Dangerous bike stunt 1

ಇಂದಿನ ಯುವಕರಲ್ಲಿ ಬೈಕ್ ಕ್ರೇಜ್ ತುಂಬಾನೆ ಇದೆ ಎನ್ನಬಹುದು. ಬೈಕ್ ಮೇಲೆ ವೀಲ್ಹಿಂಗ್ ಮಾಡುವವರ ಸಂಖ್ಯೆ ಸಹ ಹೆಚ್ಚಾಗಿದೆ. ಈ ರೀತಿಯ ವಿನ್ಯಾಸಗಳಿಂದ ಪ್ರಾಣಕ್ಕೆ ಕುತ್ತುಬರುವಂತೆ ಸಹ ಮಾಡುತ್ತಿರುತ್ತಾರೆ. ಈ ರೀತಿಯ ರೈಡರ್‍ ಗಳಿಗೆ ಪೊಲೀಸರು ಸಹ ಆಗಾಗ ಬಿಸಿ ಮುಟ್ಟಿಸುತ್ತಲೇ ಇರುತ್ತಾರೆ. ಆದರೂ ಸಹ ಬೈಕ್ ವೀಲ್ಹಿಂಗ್ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅದರಲ್ಲೂ ಬೈಕ್ ಹಿಂಬದಿಯಲ್ಲಿ ಹುಡುಗಿ ಇದ್ದರೇ ಸಾಕು ಯುವಕರು ಮತಷ್ಟು ಜೋರಾಗಿಯೇ ವಿನ್ಯಾಸ ಮಾಡುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಅಂದಹಾಗೆ ಈ ಘಟನೆ ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದೆ ಎನ್ನಲಾಗಿದೆ. ರಸ್ತೆಯ ಮೇಲೆ ಓರ್ವ ಯುವಕ ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ್ದಾನೆ. ಬಾಂಗ್ಲಾದೇಶದ ಕಂಟೆಂಟ್ ಕ್ರಿಯೇಟರ್‍ ರೋಷನ್ ಅಹ್ಮದ್ ಅರಾಫತ್ ಎಂಬಾತ ಈ ವಿಡಿಯೋ ಹಂಚಿಕೊಂಡಿದ್ದಾನೆ. ಬೈಕ್ ಮೇಲೆ ಯುವಕ ಓರ್ವ ಯುವತಿಯನ್ನು ಕೂರಿಸಿಕೊಂಡು ರಸ್ತೆಯ ಮೇಲೆ ಅತಿವೇಗವಾಗಿ ಹೋಗುತ್ತಾ ಓವರ್‍ ಡ್ರೈವಿಂಗ್ ಮಾಡಿದ್ದಾನೆ. ಈ ಬೈಕ್ ರೈಡ್ ವೇಳೆ ಯುವತಿ ಆಯಾತಪ್ಪಿ ಕೆಳಗೆ ಬಿದ್ದಳು. ಆದರೂ ಆಕೆಯ ಅದೃಷ್ಟ ಚೆನ್ನಾಗಿದೆ ಎನ್ನಬಹುದು. ಕ್ಷಣದಲ್ಲೇ ದೊಡ್ಡ ಪ್ರಮಾದದಿಂದ ತಪ್ಪಿಸಿಕೊಂಡಿದ್ದಾಳೆ. ಈ ವಿಡಿಯೋ ಕುರಿತು ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ. ಇನ್ನೂ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಲಕ್ಷಾಂತರ ವೀಕ್ಷಣೆ ಕಂಡಿದೆ.

Leave a Reply

Your email address will not be published. Required fields are marked *

Next Post

Bank Holidays: ಬ್ಯಾಂಕ್ ಗ್ರಾಹಕರಿಗೆ ಅಲರ್ಟ್, ನವೆಂಬರ್ ಮಾಹೆಯಲ್ಲಿದೆ 13 ದಿನ ರಜೆ….!

Wed Oct 30 , 2024
ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವ್ಯವಹಾರ ತುಂಬಾನೆ ಪಾತ್ರ ವಹಿಸುತ್ತದೆ. ಆದರೆ ಬ್ಯಾಂಕ್ ಗಳಿಗೆ ರಜೆ ಇದ್ದಾಗ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 2024ರ ನವೆಂಬರ್‍ ಮಾಹೆಯಲ್ಲಿ (Bank Holidays) ಭಾರತದಾದ್ಯಂತ 13 ದಿನ ರಜೆ ಇರುತ್ತದೆ. ಇದರಿಂದ ಗ್ರಾಹಕರಿಗೆ ಕೊಂಚ ಸಂಕಷ್ಟ ಎದುರಾಗಬಹುದು ಆದರೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿ ಹಣಕಾಸು ವ್ಯವಹಾರ ಮಾಡಬಹುದಾಗಿದೆ. ನವೆಂಬರ್ 2024 ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳನ್ನು […]
November bank holidays
error: Content is protected !!