Bigg Boss Kannada – ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12 ಶುರುವಾಗಲು ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 28 ರಿಂದ ಈ ಹೊಸ ಸೀಸನ್ ಪ್ರಸಾರವಾಗಲಿದ್ದು, ಈಗಾಗಲೇ ಶೋ ಬಗ್ಗೆ ಕುತೂಹಲ ಹೆಚ್ಚಿಸುವ ಹಲವು ಪ್ರೋಮೋಗಳು ಹೊರಬಂದಿವೆ. ಹೊಸ ಪ್ರೋಮೋದಲ್ಲಿ ನಟ ಮತ್ತು ನಿರೂಪಕ ಸುದೀಪ್ ಅವರು ಎಲ್ಲರಿಗೂ ಗೊತ್ತಿರುವ ಕಾಗೆ ಮತ್ತು ನರಿಯ ಕಥೆಯನ್ನು ಹೊಸ ಶೈಲಿಯಲ್ಲಿ ಹೇಳಿಬಿಟ್ಟಿದ್ದಾರೆ.

Bigg Boss Kannada – ಬಿಗ್ಬಾಸ್ ಪ್ರೋಮೋದಲ್ಲಿ ಕಾಗೆ-ನರಿಯ ಕಥೆ ಯಾಕೆ?
ಕಾಗೆ ಮತ್ತು ನರಿಯ ಕಥೆ ಚಿಕ್ಕ ವಯಸ್ಸಿನಿಂದಲೇ ನಾವೆಲ್ಲರೂ ಕೇಳಿಕೊಂಡು ಬೆಳೆದಿದ್ದೇವೆ. ನರಿ ಹಾಡು ಹೇಳು ಎಂದು ಕೇಳಿದಾಗ, ಕಾಗೆ ತನ್ನ ಬಾಯಲ್ಲಿದ್ದ ವಡೆಯನ್ನು ಬಿಟ್ಟು ಹಾಡು ಹೇಳಲು ಹೋಗಿ, ವಡೆಯನ್ನು ಕಳೆದುಕೊಳ್ಳುತ್ತದೆ. ಆದರೆ ಸುದೀಪ್ ಹೇಳಿದ ಕಥೆಯಲ್ಲಿ ಒಂದು ಟ್ವಿಸ್ಟ್ ಇದೆ! ಈ ಕಥೆಯಲ್ಲಿ ಬುದ್ಧಿವಂತ ಕಾಗೆ ನರಿಯ ಮಾತು ಕೇಳಿ, ತನ್ನ ಕಾಲಿನಿಂದ ವಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹಾಡುತ್ತದೆ. ಹೀಗಾಗಿ ನರಿಗೆ ವಡೆ ಸಿಗದೇ, ಹತಾಶೆಯಿಂದ ವಾಪಸ್ ಹೋಗುತ್ತದೆ. Read this also : ನೀವು ಬಿಗ್ಬಾಸ್ ಮನೆಗೆ ಹೋಗಬೇಕೇ? ಸೀಸನ್ 12 ಮನೆಗೆ ಹೋಗಲು ಇಲ್ಲಿದೆ ಅವಕಾಶ..!
ಈ ಕಥೆಯ ಮೂಲಕ ಸುದೀಪ್ ಅವರು ಬಿಗ್ಬಾಸ್ ಸೀಸನ್ 12ರಲ್ಲಿ ಏನೆಲ್ಲಾ ನಡೆಯಲಿದೆ ಎಂಬುದಕ್ಕೆ ಒಂದು ಸುಳಿವು ನೀಡಿದ್ದಾರೆ. ಇದುವರೆಗೂ ಬಿಗ್ಬಾಸ್ನಲ್ಲಿ ಹೀಗೆ ಇರಬಹುದು, ಹೀಗೆ ಆಗಬಹುದು ಎಂದು ಊಹಿಸಿದ ಎಲ್ಲವನ್ನೂ ಈ ಸೀಸನ್ನಲ್ಲಿ ತಲೆಕೆಳಗಾಗಿಸಲಾಗಿದೆಯಂತೆ.

ವಿಡಿಯೋ ಲಿಂಕ್ ಇಲ್ಲಿದೆ ನೋಡಿ : Click Here
Bigg Boss Kannada ಸೀಸನ್ 12ರಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ವಿಭಿನ್ನವಾಗಿರಲಿದೆ
ಸುದೀಪ್ ಹೇಳಿದಂತೆ, ಈ ಹಿಂದೆ ಬಿಗ್ಬಾಸ್ನ 11 ಸೀಸನ್ಗಳನ್ನು ನೋಡಿದ್ದರಿಂದ, ಮುಂದೇನು ನಡೆಯಲಿದೆ ಎಂದು ನೀವು ಊಹಿಸಿದ್ದರೆ, ಆ ಊಹೆಗಳು ಈ ಸೀಸನ್ನಲ್ಲಿ ಸುಳ್ಳಾಗಲಿವೆ. ಈ ಸೀಸನ್ ಪ್ರೇಕ್ಷಕರನ್ನು ಅಚ್ಚರಿಗೊಳಿಸಲಿದೆ ಮತ್ತು ಅನಿರೀಕ್ಷಿತ ತಿರುವುಗಳು ಇರಲಿವೆ ಎಂದು ಅವರು ಹೇಳಿದ್ದಾರೆ. ಇನ್ನೂ ಬಿಗ್ಬಾಸ್ ಸೀಸನ್ 12 ರ ಮೊದಲ ಸಂಚಿಕೆ (ಇನಾಗುರೇಷನ್) ಸೆಪ್ಟೆಂಬರ್ 28 ರಂದು ಸಂಜೆ 6:30 ಕ್ಕೆ ಪ್ರಸಾರವಾಗಲಿದೆ. ಇದರ ನಂತರ, ಪ್ರತಿದಿನದ ಸಂಚಿಕೆಗಳು ರಾತ್ರಿ 9:30 ರಿಂದ 10:30 ರವರೆಗೆ ಪ್ರಸಾರವಾಗಲಿವೆ.
