ಜೀವನದಲ್ಲಿ ಒಮ್ಮೆ ಸೋತ ಮಹಿಳೆಗೆ ಆಸರೆಯಾಗಬೇಕಿದ್ದ ವ್ಯಕ್ತಿಯೊಬ್ಬ, ಪ್ರೀತಿಯ ನಾಟಕವಾಡಿ ಲಕ್ಷಾಂತರ ರೂಪಾಯಿ ಹಣ ಹಾಗೂ ಒಡವೆಗಳನ್ನು ದೋಚಿ ಪರಾರಿಯಾಗಿರುವ ಮನಕಲಕುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂಬಿದವಳ (Marriage Fraud) ಬದುಕನ್ನೇ ಬೀದಿಗೆ ತಂದ ಈ ಮಹಾಶಯನ ಹೆಸರು ಮೋಹನ್ ರಾಜ್. ವಿಚ್ಛೇದಿತ ಮಹಿಳೆಯೊಬ್ಬರಿಗೆ ‘ಹೊಸ ಬಾಳು ಕೊಡುತ್ತೇನೆ’ ಎಂದು ನಂಬಿಸಿ, ಕೊನೆಗೆ ಅವರಿಗೇ ವಂಚಿಸಿರುವ ಆರೋಪ ಈತನ ಮೇಲಿದೆ.

Marriage Fraud – ಪ್ರೀತಿಯ ಹೆಸರಲ್ಲಿ ನಡೆದ ವಂಚನೆಯ ಕಥೆ ಏನು?
ಸಂತ್ರಸ್ತ ಮಹಿಳೆಯ ಪ್ರಕಾರ, ಮೋಹನ್ ರಾಜ್ ಕಳೆದ 10 ವರ್ಷಗಳಿಂದ ಪರಿಚಯವಿದ್ದವನು. ಆಕೆಗೆ ಈಗಾಗಲೇ ಮೊದಲ ಪತಿಯಿಂದ ವಿಚ್ಛೇದನವಾಗಿರುವ ವಿಚಾರ ಆತನಿಗೆ ಸಂಪೂರ್ಣವಾಗಿ ತಿಳಿದಿತ್ತು. “ನಿನಗೆ ನಾನು ಜೀವನ ಕೊಡುತ್ತೇನೆ” ಎಂದು ನಂಬಿಸಿದ ಆತ 2022ರಲ್ಲಿ ಆಕೆಯನ್ನು ಮದುವೆಯಾಗಿದ್ದಾನೆ. 2023ರಲ್ಲಿ ದಂಪತಿಗೆ ಸುಂದರವಾದ ಹೆಣ್ಣು ಮಗು ಕೂಡ ಜನಿಸಿದೆ. ಆದರೆ, ಈ ಪ್ರೀತಿಯ ಹಿಂದೆ ಅಡಗಿದ್ದು ದೊಡ್ಡದೊಂದು ಸಂಚು ಎಂಬುದು ಆಕೆಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು.
‘ಹೊಸ ಮನೆ’ ಎಂಬ ಆಸೆಗೆ 36 ಲಕ್ಷ ರೂ. ಬಲಿ!
“ನಾವಿಬ್ಬರೂ ಸೇರಿ ಹೊಸ ಮನೆ ಕಟ್ಟೋಣ, ಚೆನ್ನಾಗಿ ಬಾಳೋಣ” ಎಂದು ಮೋಹನ್ ರಾಜ್ ಆಕೆಗೆ ಆಸೆ ತೋರಿಸಿದ್ದಾನೆ. ಆತನ ಮಾತನ್ನು ನಂಬಿದ ಮಹಿಳೆ, ತನ್ನಲ್ಲಿದ್ದ ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಕೈಸಾಲ ಮಾಡಿ ಸುಮಾರು 36 ಲಕ್ಷ ರೂಪಾಯಿಯನ್ನು ಆತನ ಕೈಗಿಟ್ಟಿದ್ದಾರೆ. ಹಣ ಕೈ ಸೇರಿದ ಮೇಲೆ 2025ರಲ್ಲಿ ಮೋಹನ್ ರಾಜ್ (Marriage Fraud) ಏಕಾಏಕಿ ನಾಪತ್ತೆಯಾಗಿದ್ದಾನೆ. “ಈಗ ಹಣ ಕೇಳಲು ಹೋದರೆ, ನೀನು ಯಾರು ಅಂತಲೇ ಗೊತ್ತಿಲ್ಲ ಎಂದು ನಡತೆ ಪ್ರದರ್ಶಿಸುತ್ತಿದ್ದಾನೆ” ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ. Read this also : ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಡೆಲಿವರಿ ಬಾಯ್…!
ಪೊಲೀಸರ ವಿರುದ್ಧವೇ ಮಹಿಳೆಯ ಗಂಭೀರ ಆರೋಪ
ನ್ಯಾಯ ಕೇಳಲು ಹೋದಾಗ ಮೋಹನ್ ರಾಜ್ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ನಾಲ್ಕು ಬಾರಿ ಠಾಣೆ ಮೆಟ್ಟಿಲೇರಿದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. “ಮತ್ತೆ ಬಂದರೆ ನಿನ್ನನ್ನೇ ಜೈಲಿಗೆ ಹಾಕುತ್ತೇವೆ” ಎಂದು ಪೊಲೀಸರು ಬೆದರಿಕೆ (Marriage Fraud) ಹಾಕಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಮೋಹನ್ ರಾಜ್ ಜೊತೆ ಪೊಲೀಸರು ಶಾಮೀಲಾಗಿದ್ದಾರೆಯೇ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಆರೋಪಿಯ ಕರಾಳ ಮುಖ
ಕೇವಲ ಹಣವನ್ನಷ್ಟೇ ಅಲ್ಲದೆ, ಮಹಿಳೆ ಮೋಹನ್ ರಾಜ್ ಬಗ್ಗೆ ಇನ್ನು ಕೆಲವು ಆಘಾತಕಾರಿ ವಿಷಯಗಳನ್ನು ಹೊರಹಾಕಿದ್ದಾರೆ: ಆತ ಹಲವು ಯುವತಿಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅಶ್ಲೀಲ (Marriage Fraud) ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಮದುವೆಗೆ ಮುಂಚೆ ಮತ್ತು ನಂತರ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಆರೋಪವಿದೆ. ತನ್ನ ಹೆಣ್ಣು ಮಗು ಮತ್ತು ಮಹಿಳೆಯ ಮೊದಲ ಪತಿಯ ಮಗುವಿನ ಮೇಲೆಯೂ ಆತ ಹಲ್ಲೆ ನಡೆಸುತ್ತಿದ್ದನಂತೆ. ಸದ್ಯ ಹಲವು ಹೋರಾಟದ ನಂತರ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
