ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾದವರಿಗೆ ಈಗಾಗಲೇ ಬೆಂಗಳೂರು ಪೊಲೀಸರು ನೊಟೀಸ್ ನೀಡಿದ್ದರು. ಈ ನೊಟೀಸ್ ಪಡೆದು ಹಾಜರಾಗದವರಿಗೆ ಮತ್ತೊಮ್ಮೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಜೂನ್ 1 ರಂದು ವಿಚಾರಣೆಗೆ ಹಾಜರಾಗಲೇ ಬೇಕು ಎಂದು ನಟಿ ಹೇಮಾ ಸೇರಿದಂತೆ 8 ಮಂದಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಾರಿ ನೊಟೀಸ್ ಗೆ ಉತ್ತರಿಸಲು ಬರದೇ ಇದ್ದರೇ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ನೊಟೀಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಫಾರ್ಮ್ಸ್ ನಲ್ಲಿ ನಡೆದಂತಹ ರೇವ್ ಪಾರ್ಟಿ ಭಾರಿ ಸುದ್ದಿಯಾಗಿದೆ. ಈ ಪಾರ್ಟಿಯಲ್ಲಿ ಕೆಲ ನಟ-ನಟಿಯರು, ಮಾಡಲ್ ಗಳು, ರಾಜಕೀಯ ಮುಖಂಡರುಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ 86 ಮಂದಿಯ ಬ್ಲಡ್ ಸ್ಯಾಂಪಕ್ ಸಹ ಪರೀಕ್ಷೆ ಮಾಡಿಸಿದ್ದು, ಅವರು ಡ್ರಗ್ಸ್ ತೆಗೆದುಕೊಂಡಿದ್ದು ಅವರಿಗೆ ನೊಟೀಸ್ ಸಹ ನೀಡಿದ್ದರು. ತೆಲುಗು ನಟಿ ಹೇಮಾ ಸಹ ಈ ಪಾರ್ಟಿಯಲ್ಲಿ ಭಾಗವಹಿಸಿದ್ದು, ಇದೇ ತಿಂಗಳ 27 ರಂದು ವಿಚಾರಣೆಗೆ ಹಾಜರಾಗುವಂತೆ ಹೇಮಾ ವಿಚಾರಣೆಗೆ ಹಾಜರಾಗಿಲ್ಲ. ಇದೀಗ ಮತ್ತೊಮ್ಮೆ ಹೇಮಾ ಸೇರಿದಂತೆ 8 ಮಂದಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಈ ಬಾರಿ ವಿಚಾರಣೆಗೆ ಹಾಜರಾಗದೇ ಇದ್ದರೇ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯ ಪ್ರಕರಣ ಹೊರಬರುತ್ತಿದ್ದಂತೆ, ಹೇಮಾ ಹೆಸರು ಕೇಳಿಬಂತು. ಬಳಿಕ ಹೇಮಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ತಾನು ರೇವ್ ಪಾರ್ಟಿಯಲ್ಲಿಲ್ಲ. ಹೈದರಾಬಾದ್ ನ ರೆಸಾರ್ಟ್ ಒಂದರಲ್ಲಿ ಇರುವುದಾಗಿ ಹೇಳಿಕೊಂಡಿದ್ದಳು. ಬಳಿಕ ನಟಿ ಹೇಮಾ ಪಾರ್ಟಿಯಲ್ಲಿ ಇದಿದ್ದದಾಗಿ ಪೊಲೀಸ್ ಆಯುಕ್ತರು ಹೇಳಿದ್ದರು. ಆದರೆ ಆಕೆ ಹೊಸ ಡ್ರಾಮಾ ಸೃಷ್ಟಿಸಿದ್ದರು. ನಟಿ ಹೇಮಾ ಬ್ಲಡ್ ಮಾದರಿಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದ್ದರೂ ಸಹ ಆಕೆ ತನ್ನ ಆಕ್ಟಿಂಗ್ ನಿಲ್ಲಿಸಲಿಲ್ಲ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ. ಟೈಂ ಬಂದಾಗ ಮಾತನಾಡುತ್ತೇನೆ ಎಂದು ಡೈಲಾಗ್ ಸಹ ಹೊಡೆದಿದ್ದರು. ಜೊತೆಗೆ ತಪ್ಪು ಮಾಡದೇ ಇದ್ದಾಗ ಭಯ ಏಕೆ ಪಡಬೇಕು ಎಂದು ಡೈಲಾಗ್ಸ್ ಹೊಡೆದಿದ್ದರು.